Advertisement

ಬರ್ತ್ ಡೇ ಆಚರಣೆಗೂ ಮುನ್ನ ವಾಘೇಲಾಗೆ ಗೇಟ್ ಪಾಸ್ ಕೊಟ್ಟ ಕಾಂಗ್ರೆಸ್!

03:07 PM Jul 21, 2017 | Team Udayavani |

ನವದೆಹಲಿ: ಹುಟ್ಟು ಹಬ್ಬ ಆಚರಿಸಿಕೊಳ್ಳುವ 24ಗಂಟೆ ಮೊದಲೇ ಕಾಂಗ್ರೆಸ್ ಪಕ್ಷ ತನ್ನನ್ನು ಉಚ್ಛಾಟಿಸಿರುವುದಾಗಿ ಹಿರಿಯ ಕಾಂಗ್ರೆಸ್ ಮುಖಂಡ, ಗುಜರಾತ್ ಮಾಜಿ ಮುಖ್ಯಮಂತ್ರಿ ಶಂಕರ ಸಿಂಗ್ ವಘೇಲಾ ಶುಕ್ರವಾರ ತಿಳಿಸಿದ್ದಾರೆ.
ಶುಕ್ರವಾರ ಗಾಂಧಿನಗರದಲ್ಲಿ ತಮ್ಮ 77ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ 24ಗಂಟೆ ಹಿಂದೆ ನನ್ನ ಪಕ್ಷದಿಂದ ಉಚ್ಚಾಟಿಸಿದೆ ಎಂದರು.

Advertisement

ನಾನು ಸಕ್ರಿಯ ರಾಜಕಾರಣದಿಂದ ನಿವೃತ್ತಿಯಾಗುತ್ತಿಲ್ಲ ಎಂದು ಹೇಳುವ ಮೂಲಕ ವಾಘೇಲಾ ಅವರು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಊಹಾಪೋಹಕ್ಕೆ ಪುಷ್ಠಿ ನೀಡಿದೆ. ಆದರೆ ತಾನು ಬಿಜೆಪಿಗೆ ಯಾವುದೇ ಕಾರಣಕ್ಕೂ ಸೇರ್ಪಡೆಗೊಳ್ಳುವುದಿಲ್ಲ ಎಂದು ವಘೇಲಾ ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷ ತನ್ನನ್ನು ಉಚ್ಚಾಟಿಸುವುದು ಬೇಡ, ನಾನು ಪಕ್ಷದ ಎಲ್ಲಾ ಹುದ್ದೆಗಳಿಗೂ ರಾಜೀನಾಮೆ ನೀಡುವುದಾಗಿ ಹೇಳಿದರು.

ಜನಸಂಘದಿಂದ ರಾಜಕೀಯ ಜೀವನ ಆರಂಭಿಸಿದ್ದ ವಘೇಲಾ ಬಳಿಕ ಜನತಾ ಪಕ್ಷದ ಜೊತೆ ಗುರುತಿಸಿಕೊಂಡಿದ್ದರು. ವಿವಿಧ ಕಾರಣಗಳಿಂದ ಜನತಾಪಕ್ಷ ಹೋಳಾದ ನಂತರ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. 1996ರಲ್ಲಿ ಬಿಜೆಪಿಯಿಂದ ಹೊರಬಂದ ವಘೇಲಾ ರಾಷ್ಟ್ರೀಯ ಜನತಾ ಪಾರ್ಟಿಯನ್ನು ಹುಟ್ಟುಹಾಕಿದ್ದರು. 1996ರಿಂದ 1997ರವರೆಗೆ ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಬಳಿಕ ವಘೇಲಾ ಪಕ್ಷ ಕಾಂಗ್ರೆಸ್ ಜತೆ ವಿಲೀನಗೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next