Advertisement

ಅಂದು ನೋವು, ಇಂದು ನಲಿವು: “ಬಾಲನೆರೆ’ಮಹಿಳೆಯ ಕಹಾನಿ!

08:13 PM Jan 24, 2022 | Team Udayavani |

ಬುಡಾಪೆಸ್ಟ್‌ (ಹಂಗೇರಿ): ಹದಿಹರೆಯದ ವಯಸ್ಸಿನಲ್ಲೇ ತಲೆಗೂದಲು ಬೆಳ್ಳಗಾಗಿದ್ದರಿಂದ (ಬಾಲ ನೆರೆ) ಅಕ್ಕಪಕ್ಕದವರು, ಸಹಪಾಠಿಗಳ ಹಾಸ್ಯಕ್ಕೆ ಒಳಗಾಗಿ ಮಾನಸಿಕ ಹಿಂಸೆ ಅನುಭವಿಸಿದ್ದ ಹಂಗೇರಿಯ ಆ್ಯನಾ ಶೆಫ‌ರ್ಡ್‌ ಈಗ ಆ ಬಿಳಿಗೂದಲಿನಿಂಲೇ ಇಂಟರ್ನೆಟ್‌ನಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ.

Advertisement

ತಮ್ಮ ಕೂದಲನ್ನು ವರ್ಷಗಳಿಂದ ಜೋಪಾನ ಮಾಡಿ ಸುಮಾರು 5 ಅಡಿಗಳವರೆಗೆ ಬೆಳೆಸಿದ್ದಾರೆ. ಅದರಲ್ಲೇ ವಿವಿಧ ಕೇಶ ವಿನ್ಯಾಸಗಳನ್ನು ಮಾಡಿ ಅದರ ಫೋಟೋಗಳು, ವಿಡಿಯೋಗಳನ್ನು ತಮ್ಮ ಇನ್‌ಸ್ಟಾ ಗ್ರಾಂ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.

ಅದಾಗಿ ಕೆಲವೇ ದಿನಗಳಲ್ಲಿ ಅವರೀಗ ಇಂಟರ್ನೆಟ್‌ ಸ್ಟಾರ್‌ ಆಗಿ ಬದಲಾಗಿದ್ದು 17,500 ಮಂದಿ ಫಾಲೋವರ್‌ ಗಳನ್ನು ಗಳಿಸಿದಲ್ಲದೆ, ಅವರ ವಿಡಿಯೋಗಳಿಗೆ 10 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದ್ದಾರೆ. “ಎಳೆಯ ವಯಸ್ಸಿನಲ್ಲೇ ನನಗೆ ಬಾಲನೆರೆ ಬಂದಿದ್ದರಿಂದ ಸಹಪಾಠಿಗಳು ನನಗೆ ಕ್ರುಯೆಲ್ಲಾ (ಕಾದಂಬರಿಯೊಂದರಲ್ಲಿ ಅರ್ಧ ತಲೆಗೂದಲು ಕಪ್ಪು, ಅರ್ಧ ತಲೆಗೂದಲು ಬಿಳಿ ಇರುವ ಕೆಟ್ಟ ಹೆಂಗಸಿನ ಪಾತ್ರ) ಎಂದು ಕರೆಯುತ್ತಿದ್ದರು. ಆಗೆಲ್ಲಾ ತುಂಬಾ ನೊಂದುಕೊಳ್ಳುತ್ತಿದ್ದೆ. ಆದರೆ, ಆತ್ಮವಿಶ್ವಾಸ ಕಳೆದುಕೊಂಡಿರಲಿಲ್ಲ. ಈಗ, ಅದು ಫ‌ಲ ನೀಡಿದೆ” ಎಂದು ಅವರು ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next