Advertisement

ಭಾರತೀಯ ಮುಸ್ಲೀಂನಾಗಿದ್ದಕ್ಕೆ ಹೆಮ್ಮೆ ಇದೆ  : ಕಾಂಗ್ರೆಸ್ ನಾಯಕ ಅಜಾದ್

09:22 PM Feb 09, 2021 | Team Udayavani |

ನವದೆಹಲಿ : ರಾಜ್ಯಸಭಾ ವಿರೋಧ ಪಕ್ಷದ ಹಿರಿಯ ನಾಯಕ ಗುಲಾಮ್ ನಬಿ ಅಜಾದ್, ಇಂದು ಅಧಿವೇಶನದ ವೇಳೆ ತಮ್ಮ ವಿದಾಯ ಭಾಷಣದಲ್ಲಿ ಭಾರತದ ಬಗ್ಗೆ ಭಾವುಕ ನುಡಿಗಳನ್ನಾಡಿದ್ದಾರೆ.

Advertisement

‘’ನಾನು ಭಾರತೀಯ ಮುಸ್ಲೀಂನಾಗಿದ್ದಕ್ಕೆ ಹೆಮ್ಮೆ ಪಡುತ್ತೇನೆ’’ ಎಂದು ಹೇಳಿ, ಕೋಟ್ಯಾಂತರ ಜನರ ಹೃದಯ ಗೆದ್ದಿದ್ದಾರೆ.

ಇದನ್ನೂ ಓದಿ :ಅಂತ್ಯಕ್ರಿಯೆ ಮುಗಿಸಿ ಬರುವಾಗ ಭೀಕರ ಅಪಘಾತ: 11 ಜನ ಸಾವು, 6 ಮಂದಿ ಆಸ್ಪತ್ರೆಗೆ ದಾಖಲು

ಇದೇ ಫೆ. 15 ರಂದು ರಾಜ್ಯಸಭಾ ಸದಸ್ಯ ಸ್ಥಾನದಿಂದ ನಿವೃತ್ತಿ ಹೊಂದಲಿರುವ ಅಜಾದ್, ಇಂದು ವಿದಾಯದ ನುಡಿಗಳನ್ನಾಡಿದರು. ಭಾರತದ ಸ್ವಾತಂತ್ರ್ಯದ ನಂತರ ನಾನು ಇಲ್ಲಿ ಜನ್ಮ ಪಡೆದೆ. ಭಾರತದಿಂದ ಪಾಕ್ ಗೆ ತೆರಳದ ಅದೃಷ್ಟವಂತರಲ್ಲಿ ನಾನೂ ಒಬ್ಬ. ಪಾಕ್ ನಲ್ಲಿನ ಇಂದಿನ ಸ್ಥಿತಿಗತಿ ನೋಡಿದಾಗ, ನಾನುಭಾರತೀಯ ಮುಸ್ಲೀಂನಾಗಿದ್ದೇ ಶ್ರೇಷ್ಟ ಅನ್ನಿಸುತ್ತಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next