Advertisement

ನಾನು, ನನ್ನದೆಂಬ ಭಾವ

07:30 AM Mar 18, 2018 | |

ನೀವು ನಿತ್ಯವೂ ನೋಡುತ್ತಿರುವ ಮರವನ್ನು ಒಂದೆರಡು ಕ್ಷಣಗಳವರೆಗೆ ಸುಮ್ಮನೆ ದಿಟ್ಟಿಸುತ್ತ ನಿಲ್ಲಿ. ಅಷ್ಟೊಂದು ವಿಶಾಲಕ್ಕೆ ಬೆಳೆದಿದ್ದರೂ, ಅಷ್ಟಗಲಕ್ಕೆ ನೆರಳು ಕೊಟ್ಟರೂ, ತನ್ನೊಳಗೆ ಹತ್ತಾರು ಹಕ್ಕಿಗಳಿಗೆ ಆಸರೆ ನೀಡಿದರೂ ಒಂದಿಷ್ಟೂ ಅಲುಗದೆ ನಿಂತಿರುವ ಅದರ ಗಾಂಭೀರ್ಯಕ್ಕೆ ಎಂಥವರೂ ಅಚ್ಚರಿ ಪಡಬೇಕು. ಎಲ್ಲಾದರೂ ತಿಳಿಗಾಳಿ ಬೀಸಿದರೆ ಮಾತ್ರ ಅದರ ಎಲೆ ಕೊಂಚ ಅಲುಗುತ್ತದೆ. ಇಲ್ಲದಿದ್ದರೆ ಅದೂ ಇಲ್ಲ.

Advertisement

ತನ್ನಷ್ಟಕ್ಕೆ ಹರಿವ ನದಿಯೂ ಹಾಗೆಯೇ. ಬೆಟ್ಟದ ಮೇಲೆ ಮಳೆ ಬಂದರೆ ನದಿಯ ಸರಿತೆಯಲ್ಲಿ ಕೊಂಚ ಸದ್ದು ಇರಬಹುದು. ಸದ್ದೆಂದರೆ ಸದ್ದಲ್ಲ; ಜುಳು ಜುಳು ನಿನಾದ. ಆದರೆ, ಮರದ ಕೆಳಗೆ ನಿಂತಿರುವ, ನದಿಯ ಬುಡದಲ್ಲಿ ಕುಳಿತಿರುವ ಮನುಷ್ಯರು ಮಾತ್ರ ಪರಪರ ಮಾತನಾಡುತ್ತಲೇ ಇರುತ್ತಾರೆ. “”ನಾನು ರಿಟಾçರ್ಡ್‌ ಎಲ್‌ಐಸಿ ಆಫೀಸರ್‌, ನನ್ನ ಮಗ ಡಾಕ್ಟರು, ಸ್ವಂತ ಫ್ಲ್ಯಾಟ್‌ ಇದೆ, ಹೆಂಡತಿಗೆ ಹದಿನೈದು ಸಾವಿರ ಪೆನ್ಶನ್‌ ಬರುತ್ತದೆ” ಮುಂತಾದ ಮಾತುಗಳೆಲ್ಲ “ನನ್ನ’ ಬಗ್ಗೆಯೇ ಇರುವಂಥಾದ್ದು. “ನನ್ನ ಇಪ್ಪತ್ತೈದು ಪುಸ್ತಕಗಳು ಪ್ರಕಟವಾಗಿವೆ’, “ನನಗೆ ಹದಿಮೂರು ಕಡೆಯಲ್ಲಿ ಸಂಮಾನವಾಗಿದೆ’, “ನನ್ನಲ್ಲಿ ಮೂರು ಕಾರುಗಳಿವೆ’- ಹೆಚ್ಚಿನವರಲ್ಲಿ ಇಂಥವೇ ಮಾತುಗಳು. 

ಖ್ಯಾತ ಮನಶಾಸ್ತ್ರಜ್ಞ  ಕಾರ್ಲ್ ಯೂಂಗ್‌ extravarsion ಮತ್ತು Introvarsion  ಎಂಬ ಎರಡು ಪದಗಳನ್ನು ಜನಪ್ರಿಯವಾಗಿಸಿದ. ಕೆಲವರದ್ದು ಯಾವಾಗಲೂ ಬಹಿರ್ಮುಖ ವ್ಯಕ್ತಿತ್ವ. ಅವರಿಗೆ ಎಲ್ಲವನ್ನೂ ಹೇಳಿಕೊಳ್ಳುವ ತವಕ. ಇನ್ನು ಕೆಲವರದ್ದು ಸದಾ ಅಂತರ್ಮುಖತೆ. ಮಾತು ಕಮ್ಮಿ, ಮೌನವೇ ಯಾವತ್ತೂ. ಶ್ರೀರಾಮಚಂದ್ರ ಸದಾ ಅಂತರ್ಮುಖೀಯಾಗಿರುತ್ತಿದ್ದ. ಹಾಗಾಗಿ, ಅಂತರ್ಮುಖೀಯಾಗಿದ್ದ ಹನೂಮಂತ‌, ಅವನಿಗೆ ಪ್ರಿಯಸಖನಾದ. ಮೊದಲ ಭೇಟಿಯಲ್ಲಿ, ಹನೂಮಂತ ತನ್ನ ಬಗ್ಗೆ ಹೇಳಿಕೊಳ್ಳುವ ಬದಲು, “ನೀವು ಯಾರು, ಎಲ್ಲಿಂದ ಬಂದಿರಿ?’ ಎಂಬ ಕುತೂಹಲವನ್ನು ವ್ಯಕ್ತಪಡಿಸುತ್ತಾನೆ. ನಮ್ಮ ಪರಂಪರೆಯೇ ಹಾಗೆ. ಪರಿಚಯಸ್ಥರು ಸಿಕ್ಕಿದ ತ‌ಕ್ಷಣ, “ಹೇಗಿದ್ದೀರಿ?’ ಎಂದು ಕೇಳುತ್ತೇವೆ. ತಮ್ಮ ಬಗ್ಗೆಗಿಂತ ಇನ್ನೊಬ್ಬರ ಬಗ್ಗೆಯೇ ಆಸಕ್ತಿ ಹೆಚ್ಚು.

ಆದರೆ, ಸಂವಹನಕ್ಕೆ ಆಧುನಿಕ ಪರಿಕರಗಳು ಸೇರಿಕೊಂಡ ಮೇಲೆ ನಮ್ಮನ್ನು ನಾವೇ ಪರಿಚಯಿಸಿಕೊಳ್ಳುವುದು ಮೊದಲ ಆದ್ಯತೆ ಎನ್ನಿಸಿಕೊಂಡಿದೆ. ಇಂದು ಮೀಟಿಂಗ್‌ಗಳೆಲ್ಲ ಸ್ವ-ಪರಿಚಯ ಹೇಳಿಕೊಳ್ಳುವುದರ ಮೂಲಕವೇ ಆರಂಭವಾಗುತ್ತವೆ. Hello, I am… ಎಂದೇ ನಮ್ಮ ಸಂಭಾಷಣೆೆ ಆರಂಭವಾಗುತ್ತದೆ. ದೂರವಾಣಿಯಲ್ಲಿ ನಾನು ಯಾರು ಎಂಬುದನ್ನು ಮೊದಲು ಹೇಳಿಕೊಳ್ಳುವುದೇ ಸೌಜನ್ಯ. ಯಾರಾದರೂ ಎದುರು ಸಿಕ್ಕಿದಾಗ ನಮ್ಮೆಲ್ಲ ವಿವರಗಳಿರುವ ವಿಸಿಟಿಂಗ್‌ ಕಾರ್ಡ್‌ ಕೂಡ ಕೊಡುತ್ತೇವೆ. ನಾವೇ ನಮ್ಮ ಬಗ್ಗೆ ಹೇಳಿಬಿಡುವುದು ಈ ಕಾಲದ ಗುಣ! ಫೇಸ್‌ಬುಕ್‌, ವಾಟ್ಸಾಪ್‌ಗ್ಳಲ್ಲಂತೂ ಹೇಳುವುದೇ ಬೇಡ. ಆತ್ಮಲೋಲುಪತೆಯೇ ಅಧಿಕವಾಗುತ್ತಿದೆ. ಅವರವರ ಬಗ್ಗೆ ಅವರವರು ಹೇಳಿಕೊಳ್ಳುವುದರಲ್ಲಿ ಎಷ್ಟು ಸತ್ಯ ; ಎಷ್ಟು ಸುಳ್ಳು 

Advertisement

Udayavani is now on Telegram. Click here to join our channel and stay updated with the latest news.

Next