Advertisement
ಪಕ್ಷದ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ನನ್ನನ್ನು ಮೂರು ತಿಂಗಳು ಮನೆಯಲ್ಲಿ ಮಲಗಿಸಿದ್ದೀರಿ. ಈ ದೇಶದಲ್ಲಿ ನಾನು ಅಷ್ಟೊಂದು ತಲೆಮರೆಸಿಕೊಳ್ಳುವ ರಾಜಕಾರಣಿ ಆಗಿದ್ದೇನಾ? 62 ವರ್ಷ ಶಾಸಕನಾಗಿ, ವಿಪಕ್ಷದ ನಾಯಕನಾಗಿ, ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ಪ್ರಧಾನಿ ಯಾಗಿ ಕೆಲಸ ಮಾಡಿದ್ದೇನೆ. ಯಾವ ದೇವೇಗೌಡ ಹೋರಾಟ ಮಾಡಿದ್ದನೋ, ಮೋದಿಯವರ ಜತೆ ಕೂತು ಚಿಕ್ಕಬಳ್ಳಾಪುರ ಮತ್ತು ಮೈಸೂರಿನಲ್ಲಿ ಪ್ರಚಾರ ಮಾಡಿದ್ದೇನೋ ಅದೇ ದೇವೇಗೌಡ ಮತ್ತೆ ಹೋರಾಟಕ್ಕೆ ನಿಂತಿದ್ದೇನೆ ಎಂದರು.ಇನ್ನು ಮುಂದೆ ಎಲ್ಲ ಕಡೆಗಳಲ್ಲಿ ಪ್ರವಾಸ ಮಾಡುತ್ತೇನೆ. ಪಕ್ಷದ ಕಚೇರಿಗೂ ಬರುತ್ತೇನೆ. ಎನ್ಡಿಎ ಮೈತ್ರಿ ಕೂಟದಲ್ಲಿ ನಾವು ಸೇರಿದ್ದು, ಜೆಡಿಎಸ್ ಪಕ್ಷ ಮೈತ್ರಿಗೆ ಯಾವುದೇ ಧಕ್ಕೆ ತರುವುದಿಲ್ಲ ಎಂದರು.