Advertisement

ಜನರು ನನ್ನ ಜೀವನದ ಆಯ್ಕೆಯನ್ನು ಅನುಸರಿಸುವುದು ನನಗೆ ಇಷ್ಟವಿಲ್ಲ; ಸನ್ನಿ ಲಿಯೋನ್

04:09 PM Mar 10, 2022 | Team Udayavani |

ಮುಂಬೈ: ಪ್ರಸ್ತುತ ತನ್ನ ಹೊಸ ವೆಬ್ ಸೀರೀಸ್ ‘ಅನಾಮಿಕಾ’ದ ಪ್ರಚಾರದಲ್ಲಿ ನಿರತರಾಗಿರುವ ನಟಿ ಸನ್ನಿ ಲಿಯೋನ್ ತಮ್ಮ ಜೀವನ ಮತ್ತು ವೃತ್ತಿಜೀವನದ ಬಗ್ಗೆ ಮಾತನಾಡಿದ್ದಾರೆ.

Advertisement

“ಜೀವನದಲ್ಲಿ ನನ್ನ ಆಯ್ಕೆಗಳು ಇತರ ಜನರು ಅನುಕರಿಸುವಂತಹದ್ದಲ್ಲ. ಜನರು ಆ ಆಯ್ಕೆಗಳನ್ನು ಮಾಡಬೇಕೆಂದು ನಾನು ಬಯಸುವುದಿಲ್ಲ. ನನಗೆ ನಾನು ಸುಳ್ಳು ಹೇಳುತ್ತಿಲ್ಲ. ನಾನು ಯಾರೆಂಬುದರ ಬಗ್ಗೆ ಇತರರಿಗೆ ಸುಳ್ಳು ಹೇಳುತ್ತಿಲ್ಲ” ಎಂದು ಸನ್ನಿ ಲಿಯೋನ್ ಹೇಳಿದ್ದಾರೆ.

ಕೆನಡಾದಿಂದ ಹತ್ತು ವರ್ಷಗಳ ಹಿಂದೆ ಭಾರತಕ್ಕೆ ಬಂದ ಸನ್ನಿ ಲಿಯೋನ್ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಾಲಿವುಡ್ ಗೆ ಎಂಟ್ರಿ ನೀಡಿದ್ದ ಆಕೆ, ಪೂಜಾ ಭಟ್ ರ ಜಿಸ್ಮ್ 2 ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ:ಗೋವಾ ಬಿಜೆಪಿಯಲ್ಲಿ ಬಂಡಾಯದ ಬಾವುಟ ಹಾರಿಸಿದ್ದ ಪರ್ರಿಕರ್ ಪುತ್ರನಿಗೆ ಅಲ್ಪ ಅಂತರದ ಸೋಲು!

ಸದ್ಯ ತಾನು ಜೀವನದಲ್ಲಿ ತೃಪ್ತಿ ಹೊಂದಿದ್ದೇನೆ. ನಾನು ಮತ್ತು ಡೇನಿಯಲ್ ನಮ್ಮ ಜೀವನವನ್ನು ಪ್ರೀತಿಸುತ್ತೇವೆ. ನಾವು ಅದರ ಪ್ರತಿಯೊಂದು ಭಾಗವನ್ನು ಪ್ರೀತಿಸುತ್ತೇವೆ, ನಾವು ನಮ್ಮ ಕುಟುಂಬವನ್ನು ಪ್ರೀತಿಸುತ್ತೇವೆ ಮತ್ತು ಅವರೊಂದಿಗೆ ಕಳೆಯುವ ಸಮಯವನ್ನು ನಾವು ಪ್ರೀತಿಸುತ್ತೇವೆ ಎಂದು ಒಂದು ಕಾಲದಲ್ಲಿ ನೀಲಿ ಚಿತ್ರತಾರೆಯಾಗಿದ್ದ ಸನ್ನಿ ಲಿಯೋನ್ ಹೇಳುತ್ತಾರೆ.

Advertisement

ಸನ್ನಿ ಲಿಯೋನ್ ಮುಖ್ಯಪಾತ್ರದಲ್ಲಿ ನಟಿಸಿರುವ ‘ಅನಾಮಿಕ’ ವೆಬ್ ಸಿರೀಸ್ ಮಾರ್ಚ್ 10ರಂದು ತೆರೆಕಂಡಿದೆ. ವಿಕ್ರಂ ಭಟ್ ನಿರ್ದೇಶನದ ವೆಬ್ ಸಿರೀಸ್ ನಲ್ಲಿ ಸನ್ನಿ ಏಜೆಂಟ್ ಎಂ ಎಂಬ ಹಂತಕಿಯ ಪಾತ್ರ ನಿರ್ವಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next