Advertisement

ಪಠ್ಯಪುಸ್ತಕ ಗೊಂದಲ ನನಗೆ ಗೊತ್ತಿಲ್ಲ: ಬಸವರಾಜ ಹೊರಟ್ಟಿ

09:40 PM Jun 05, 2022 | Team Udayavani |

ಹುಬ್ಬಳ್ಳಿ: ಪಠ್ಯಪುಸ್ತಕಗಳ ಗೊಂದಲ ಕುರಿತು ವಿಷಯ ತಿಳಿದಿದ್ದೇನೆ. ವಾಸ್ತವ ಏನಿದೆ ಎಂಬುದರ ಬಗ್ಗೆ ಆಳವಾದ ಮಾಹಿತಿ ನನಗಿಲ್ಲ. ಏನೇ ಗೊಂದಲ, ತಪ್ಪುಗಳಿದ್ದರೆ ಅವುಗಳನ್ನು ಸರಿಪಡಿಸುವುದು ಸರ್ಕಾರದ ಕಾರ್ಯ. ಅಧಿಕಾರ ಇದ್ದರೆ ಸಾಲದು ಬದ್ಧತೆ ಇರಬೇಕೆಂದು ವಿಧಾನ ಪರಿಷತ್‌ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಸಚಿವ ನಾಗೇಶ ಅಸಮರ್ಥರು ಎಂದು ಹೇಳಲ್ಲ. ಅಧಿಕಾರಿಗಳು ಸರಿಯಾದ ಸಹಕಾರ ಕೊಡಲ್ಲ. ಯಾವುದೇ ಸರ್ಕಾರವಿರಲಿ ಸಕಾಲಕ್ಕೆ ಪಠ್ಯಪುಸ್ತಕಗಳ ವಿಚಾರದಲ್ಲಿ ರಾಜಕೀಯ, ಸಿದ್ಧಾಂತಗಳು ಸರಿಯಲ್ಲ. ಪಠ್ಯಪುಸ್ತಕಗಳಲ್ಲಿ ತಪ್ಪುಗಳಿದ್ದರೆ ಸಮಿತಿ ರಚಿಸಿ ಪರಿಷ್ಕರಣೆ ಮಾಡುವ ಕೆಲಸ ಆಗಬೇಕು ಎಂದರು.

ಹಿಂದೆ ಏನು ಕಲಿತುಕೊಂಡು ಬಂದಿದ್ದೇವೆಯೋ ಅದೇ ಬಸವಣ್ಣನವರ ನಿಜವಾದ ಇತಿಹಾಸ. ಈಗ ಬರೆದಿರುವುದೆಲ್ಲಾ ಸುಳ್ಳು. ಪಠ್ಯಪುಸ್ತಕದ ಗೊಂದಲ ಕುರಿತು ಮಾಹಿತಿ, ಒಂದಿಷ್ಟು ಅಧ್ಯಯನ ಮಾಡಿ ಸರ್ಕಾರಕ್ಕೆ ಸಲಹೆ ಕೊಡುತ್ತೇನೆ. ಯಾವುದೇ ತಪ್ಪುಗಳನ್ನು ನೇರವಾಗಿ ಹೇಳುವ ವ್ಯಕ್ತಿತ್ವ ನನ್ನದು. ಇದನ್ನು ಯಾರೂ ವೈಯಕ್ತಿಕವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ. ಹಿಂದೆ ನಾನು ಹೊಸ ಶಿಕ್ಷಣ ನೀತಿಯನ್ನು ಸಂಪೂರ್ಣ ವಿರೋಧಿಸಿರಲಿಲ್ಲ. ಅದರಲ್ಲಿರುವ ಕೆಲ ತಪ್ಪುಗಳನ್ನು ಸರಿಪಡಿಸಿ, ಶಾಲೆ, ಕಾಲೇಜುಗಳ ಹಂತಗಳಲ್ಲಿ ಚರ್ಚೆ ಮಾಡಿ ಅನುಷ್ಠಾನಕ್ಕೆ ತರಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next