Advertisement
ಈ ವೇಳೆ ಬಸವರಾಜ ಬೊಮ್ಮಾಯಿ ಅವರು ಸಿದ್ದರಾಮಯ್ಯ ಅವರ ನಡೆ ಬಗ್ಗೆ ಗುಣಗಾನ ಮಾಡಿದರು. ಸೋಮಣ್ಣ ಅವರು, ಮುಂದಿನ ಬಾರಿಯೂ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ನೀವೇ ಸಿಎಂ ಆಗಿ ಬನ್ನಿ ಎಂದು ಸಿದ್ದರಾಮಯ್ಯ ಅವರಿಗೆ ಶುಭ ಹಾರೈಸಿದರು.
ಸಿಎಂ ಮಾತನಾಡಿ, ಮಾಜಿ ಸಚಿವ ವಿ.ಸೋಮಣ್ಣ ಮೇಲೆ ನನಗೆ ದ್ವೇಷ, ಅಸೂಯೆ ಇಲ್ಲ. ಆದರೆ ಪ್ರೀತಿಯಿದೆ. ಸೋಮಣ್ಣ, ಬಸವರಾಜ ಬೊಮ್ಮಾಯಿ ನಾವೆಲ್ಲ ಒಟ್ಟಿಗೆ ಇದ್ದವರು. ನಮಗೆಲ್ಲ ವೈಯಕ್ತಿಕವಾಗಿ ಪ್ರೀತಿ ಇದೆ, ಆದರೆ ರಾಜಕೀಯವಾಗಿ ಬೇರೆ ಇದ್ದೇವೆ. ಬೊಮ್ಮಾಯಿ ಅವರ ತಂದೆ ಎಸ್.ಆರ್. ಬೊಮ್ಮಾಯಿ ಅವರು ರಾಜಕೀಯವಾಗಿ ನನಗೆ ಬಹಳಷ್ಟು ಸಹಾಯ ಮಾಡಿದ್ದಾರೆ ಎಂದು ಸ್ಮರಿಸಿದರು.ವರುಣಾ ಕ್ಷೇತ್ರದಲ್ಲಿ ನನ್ನ ವಿರುದ್ಧ ಸ್ಪರ್ಧಿಸುವ ಇಚ್ಛೆ ಸೋಮಣ್ಣ ಅವರಿಗೆ ಇರಲಿಲ್ಲ. ಅವರ ವರಿಷ್ಠರು ಸೂಚಿಸಿದ್ದರಿಂದ ಕಣಕ್ಕಿಳಿದಿದ್ದರು ಎಂದು ಹೇಳಿದರು. ಸಿದ್ದುವನ್ನು ಕೊಂಡಾಡಿದ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ ಮಾತನಾಡಿ, ಸಿದ್ದರಾಮಯ್ಯ ಅವರ ಸಮಾಜವಾದಕ್ಕೆ ಮೂಲ ಪ್ರೇರಣೆ ಬಸವಣ್ಣ ಮತ್ತು ವಚನ ಸಾಹಿತ್ಯ. ಅವರು ಬಸವಣ್ಣನವರ ತತ್ವಗಳನ್ನು ನಂಬಿದವರು ಎಂದು ಬಲವಾಗಿ ಹೇಳುತ್ತಾರೆ. ಹೀಗಾಗಿ ಅವರ ಕೆಲಸಗಳು ಮತ್ತು ನಡೆ ಎಲ್ಲರಿಗಿಂತ ಭಿನ್ನವಾಗಿರುತ್ತದೆ ಎಂದು ಕೊಂಡಾಡಿದರು.
Related Articles
ವಿ.ಸೋಮಣ್ಣ ಮಾತನಾಡಿ, ಸಿದ್ದರಾಮಯ್ಯ, ಬಸವರಾಜ ಬೊಮ್ಮಾಯಿ ಹಾಗೂ ನಾನು ಒಂದೇ ಪರಿವಾರದಿಂದ ಬಂದವರು. ಆದರೆ ಈಗ ಬೇರೆ, ಬೇರೆ ಆಗಿದ್ದೇವೆ. ಆದರೂ ಸ್ನೇಹ ಇದೆ ಎಂದರು.
ಇದೇ ವೇಳೆ ಜಿಲ್ಲಾ ಕಾರಾಗೃಹದ ಅಧಿಧೀಕ್ಷಕಿ ಮಹಾದೇವಿ ಎಂ. ಮರಕಟ್ಟಿ ನ್ಯಾಯಾ ಧೀಶರ ಎದುರು ಹಾಜರಾಗಿ, ಬಿಡುಗಡೆಗೆ ಇರುವ ಕಾನೂನು ತೊಡಕಿನ ಬಗ್ಗೆ ನ್ಯಾಯಾಧಿಧೀಶರ ಅಭಿಪ್ರಾಯ ಕೇಳಿದರು. ಇದಕ್ಕೆ ನ್ಯಾಯಾ ಧೀಶರು ಲಿಖೀತವಾಗಿ ಸಂವಹನ ನಡೆಸುವಂತೆ ತಿಳಿಸಿ ವಿಚಾರಣೆಯನ್ನು ಮಧ್ಯಾಹ್ನಕ್ಕೆ ಮುಂದೂಡಿದರು. ಇದಾದ ಬಳಿಕ ಕಾರಾಗೃಹದಲ್ಲಿ ಶರಣರ ಬಿಡುಗಡೆಯಾಯಿತು.
Advertisement
ಹೈಕೋರ್ಟ್ ನೀಡಿರುವ ಜಾಮೀನಿನ ಷರತ್ತಿನಲ್ಲಿ ಮುರುಘಾ ಶರಣರು ಚಿತ್ರದುರ್ಗ ಜಿಲ್ಲೆಗೆ ಪ್ರವೇಶಿಸುವಂತಿಲ್ಲ ಎನ್ನುವ ಕಾರಣಕ್ಕೆ ಬಿಡುಗಡೆಯಾದ ಕೂಡಲೇ ದಾವಣಗೆರೆಗೆ ತೆರಳಿದರು.
ಎರಡನೇ ಪೋಕ್ಸೋ ಪ್ರಕರಣದಲ್ಲಿ ಮುಂದಿನ ಚಟುವಟಿಕೆಗಳಿಗೆ ತಡೆಯಾಜ್ಞೆ ಇದೆ. ಜತೆಗೆ ಮೊದಲನೇ ಪ್ರಕರಣದಲ್ಲಿ ನೀಡಿದ ಜಾಮೀನಿನಲ್ಲಿ ಶ್ರೀಗಳು ಚಿತ್ರದುರ್ಗ ಜಿಲ್ಲೆ ಪ್ರವೇಶಿಸಬಾರದು ಎಂದಿದೆ. ಹಾಗಾಗಿ ವೀಡಿಯೋ ಕಾನ್ಫ ರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಲು ಸೂಚಿಸಿದೆ. ಹೀಗಿರುವಾಗ ಎರಡನೇ ಪ್ರಕರಣದಲ್ಲಿ ಜಿಲ್ಲೆಗೆ ಕರೆತರುವುದು ಈ ಆದೇಶದ ಉಲ್ಲಂಘನೆಯಾಗುತ್ತದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ಶರಣರ ಪರ ನ್ಯಾಯವಾದಿ ಕೆ.ಎನ್.ವಿಶ್ವನಾಥಯ್ಯ ತಿಳಿಸಿದರು.
ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಬಗ್ಗೆ ಹೈಕೋರ್ಟ್‌ನಿಂದ ಸೂಕ್ತ ನಿರ್ದೇಶನ ಪಡೆದುಕೊಳ್ಳುವಂತೆ ಪ್ರಾಸಿಕ್ಯೂಷನ್‌ಗೆ ತಿಳಿಸಿ, ನ.18ಕ್ಕೆ ವಿಚಾರಣೆಯನ್ನು ಮುಂದೂಡಿದೆ.