Advertisement

ನಾನೇನೆಂದು ಬ್ಯಾನರ್‌ ಹಿಡಿದು ತೋರಿಸಬೇಕಿಲ್ಲ: ಕೊಹ್ಲಿ

06:00 AM Dec 26, 2018 | |

ಮೆಲ್ಬರ್ನ್: ಆಸ್ಟ್ರೇಲಿಯ ವಿರುದ್ಧ 2ನೇ ಟೆಸ್ಟ್‌ನಲ್ಲಿ ಭಾರತ ಸೋತ ಅನಂತರ ನಾಯಕ ಕೊಹ್ಲಿಗೆ ಟೀಕೆಗಳು ಹೆಚ್ಚಾಗಿವೆ. ಅವರ ನಾಯಕತ್ವದ ಸಾಮರ್ಥ್ಯವನ್ನೇ ಮರುಪರಿಶೀಲನೆ ಮಾಡ ಬೇಕೆಂದು ಕ್ರಿಕೆಟ್‌ ದಂತಕತೆ ಸುನೀಲ್‌ ಗಾವಸ್ಕರ್‌ ಕುಟುಕಿದ್ದಾರೆ. ಆಸ್ಟ್ರೇಲಿಯ ಮಾಧ್ಯಮಗಳಂತೂ ಅವರನ್ನು ಖಳನಾಯಕನೆಂಬಂತೆ ಚಿತ್ರಿಸುತ್ತಿವೆ. 

Advertisement

ಇವಕ್ಕೆಲ್ಲ ಉತ್ತರ ನೀಡಿರುವ ಕೊಹ್ಲಿ, “ಬ್ಯಾನರ್‌ ಹಿಡಿದುಕೊಂಡು ನಾನೇನೆಂದು ಹೊರಜಗತ್ತಿಗೆ ತೋರಿಸಬೇಕಿಲ್ಲ. ಇದು ಹೀಗೆ, ಅದು ಈ ಕಾರಣಕ್ಕೆ ಎಂದು ಹೇಳಬೇಕಿಲ್ಲ. ಹೊರಜಗತ್ತಿನಲ್ಲಿ ನಡೆಯುವ ವಿದ್ಯಮಾನಗಳ ಮೇಲೆ ನನ್ನ ನಿಯಂತ್ರಣವಿರುವುದಿಲ್ಲ. ಅದು ನನ್ನ ಕೆಲಸವೂ ಅಲ್ಲ’ ಎಂದು ಖಾರವಾಗಿ ಹೇಳಿದ್ದಾರೆ. 

ಇನ್ನೂ ಅಚ್ಚರಿಯ ಉತ್ತರ ನೀಡಿರುವ ಕೊಹ್ಲಿ, “ನನ್ನ ಬಗ್ಗೆ ಯಾರು ಬರೆಯುತ್ತಾರೋ ಅದೆಲ್ಲ ಅವರ ವೈಯಕ್ತಿಕ ಅಭಿಪ್ರಾಯ. ಅದನ್ನು ನಾನು ಗೌರವಿಸುತ್ತೇನೆ. ಆದರೆ ನಾನು ಅದನ್ನೆಲ್ಲ ಓದುವುದಿಲ್ಲ, ಹಾಗಾಗಿ ಯಾರೇನು ಬರೆದಿದ್ದಾರೆಂದು ತನಗೆ ಗೊತ್ತಿಲ್ಲ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next