Advertisement
ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ (ಡಿ18) ತ್ರಿಪುರಾ ಮತ್ತು ಮೇಘಾಲಯಕ್ಕೆ ಭೇಟಿ ನೀಡಿದ್ದು, 6,800 ಕೋಟಿ ರೂ.ಗೂ ಹೆಚ್ಚು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ್ದಾರೆ.
Related Articles
Advertisement
”ದೀರ್ಘ ಕಾಲ ಅಧಿಕಾರದಲ್ಲಿದ್ದ ಪಕ್ಷಗಳು ಈಶಾನ್ಯವನ್ನು ವಿಭಜನೆ ಮಾಡುವ ಆಲೋಚನೆ ಹೊಂದಿದ್ದು, ವಿಭಜನೆಯನ್ನು ತೆಗೆದುಹಾಕುವ ಉದ್ದೇಶದಿಂದ ನಾವು ಬಂದಿದ್ದೇವೆ. ಬೇರೆ ಬೇರೆ ಸಮುದಾಯಗಳಿರಲಿ ಅಥವಾ ಬೇರೆ ಬೇರೆ ಪ್ರದೇಶಗಳಿರಲಿ, ನಾವು ಎಲ್ಲಾ ರೀತಿಯ ವಿಭಜನೆಗಳನ್ನು ತೆಗೆದುಹಾಕುತ್ತಿದ್ದೇವೆ” ಎಂದರು.
ಹೊಸ ಮೂಲಸೌಕರ್ಯವು ಯುವಕರಿಗೆ ಹೆಚ್ಚಿನ ಅವಕಾಶಗಳನ್ನು ತರುತ್ತದೆ. ಐಐಎಂಗಳು ಮತ್ತು ತಂತ್ರಜ್ಞಾನ ಪಾರ್ಕ್‌ಗಳ ಉದ್ಘಾಟನೆಯು ರಾಜ್ಯದ ಯುವಜನರಿಗೆ ಶಿಕ್ಷಣದ ಜೊತೆಗೆ ಜೀವನೋಪಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ” ಎಂದರು.
2014ಕ್ಕಿಂತ ಮೊದಲು ಅಭಿವೃದ್ಧಿಯನ್ನೂ ಮಾಡಲಾಗಿತ್ತು ಆದರೆ ಈಗ ಏನು ಬದಲಾಗಿದೆ? ನಮ್ಮ ಗುರಿ, ಆದ್ಯತೆಗಳು ಮತ್ತು ಕೆಲಸದ ಸಂಸ್ಕೃತಿಯಲ್ಲಿನ ಬದಲಾವಣೆಯು ಫಲಿತಾಂಶಗಳಲ್ಲಿ ಬದಲಾವಣೆಯನ್ನು ತಂದಿದೆ. ಎಲ್ಲಾ ಪ್ರದೇಶಗಳ ತಡೆರಹಿತ ಸಂಪರ್ಕ ಮತ್ತು ಅಂತರ್ಗತ ಅಭಿವೃದ್ಧಿಯನ್ನು ಒದಗಿಸುವುದು ಅಂತಿಮ ಗುರಿಯಾಗಿದೆ ಎಂದರು.
”ಕಳೆದ 8 ವರ್ಷಗಳಲ್ಲಿ, ಈಶಾನ್ಯ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಅಡೆತಡೆಗಳಿಗೆ ನಾವು ರೆಡ್ ಕಾರ್ಡ್ ತೋರಿಸಿದ್ದೇವೆ. ಭ್ರಷ್ಟಾಚಾರ, ತಾರತಮ್ಯ, ಸ್ವಜನಪಕ್ಷಪಾತ, ಹಿಂಸಾಚಾರ, ಯೋಜನೆಗಳ ನೆನೆಗುದಿ, ಗೊಂದಲ, ವೋಟ್ ಬ್ಯಾಂಕ್ ರಾಜಕಾರಣವನ್ನು ತೊಡೆದುಹಾಕಲು ನಾವು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿದ್ದೇವೆ” ಎಂದರು.
”ನಮಗೆ, ಈಶಾನ್ಯ ಗಡಿ ಪ್ರದೇಶವು ಅಂತಿಮ ಬಿಂದುವಲ್ಲ, ಆದರೆ ಭದ್ರತೆ ಮತ್ತು ಸಮೃದ್ಧಿಯ ಹೆಬ್ಬಾಗಿಲು. ಆದ್ದರಿಂದ ಇಂದು ಗಡಿಯಲ್ಲಿ ಹೊಸ ರಸ್ತೆಗಳು, ಹೊಸ ಸುರಂಗಗಳು, ಹೊಸ ಸೇತುವೆಗಳು, ಹೊಸ ರೈಲು ಮಾರ್ಗಗಳು, ಹೊಸ ಏರ್‌ಸ್ಟ್ರಿಪ್‌ಗಳ ನಿರ್ಮಾಣ ಕಾರ್ಯವು ತ್ವರಿತ ಗತಿಯಲ್ಲಿ ನಡೆಯುತ್ತಿದೆ” ಎಂದರು.