Advertisement

#MeToo: ಧ್ವನಿ ಎತ್ತಿದ ಎಲ್ಲರನ್ನು ನಾನು ನಂಬುತ್ತೇನೆ: ಸಚಿವೆ ಮೇನಕಾ

03:59 PM Oct 12, 2018 | Team Udayavani |

ಹೊಸದಿಲ್ಲಿ : #MeToo ಆಂದೋಲನದಡಿ ಈ ತನಕ ಯಾವೆಲ್ಲ ಮಹಿಳೆಯರು ತಮ್ಮ ವಿರುದ್ಧದ ಲೈಂಗಿಕ ಕಿರುಕುಳದ ಬಗ್ಗೆ ಧ್ವನಿ ಎತ್ತಿದ್ದಾರೋ ಅವರನ್ನೆಲ್ಲ ನಾನು ನಂಬುತ್ತೇನೆ; ನನಗೆ ಅವರ ಮಾತುಗಳಲ್ಲಿ ವಿಶ್ವಾಸವಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಹೇಳಿದ್ದಾರೆ.

Advertisement

#MeToo ಆಂದೋಲನದಡಿಯ ಎಲ್ಲ ಪ್ರಕರಣಗಳನ್ನು ಪರಾಮರ್ಶಿಸಲು ತಾನು ಶೀಘ್ರವೇ ಸಮಿತಿಯೊಂದನ್ನು ರೂಪಿಸುವ ಪ್ರಸ್ತಾವವನ್ನು ಮುಂದಿಡಲಿದ್ದೇನೆ; ಈ ಸಮಿತಿಯಲ್ಲಿ   ಹಿರಿಯ ನ್ಯಾಯಾಧೀಶರು, ನ್ಯಾಯವೇತ್ತರು ಸದಸ್ಯರಾಗಿರುತ್ತಾರೆ ಎಂದು ಸಚಿವೆ ಮೇನಕಾ ಹೇಳಿದರು. 

ಸಮಿತಿಯು ಲೈಂಗಿಕ ಕಿರುಕುಳ ದೂರುಗಳನ್ನು ನಿಭಾಯಸುವುದಕ್ಕೆ ಅವಶ್ಯವಿರುವ ಸಾಂಸ್ಥಿಕ ಚೌಕಟ್ಟನ್ನು ರೂಪಿಸಲಿದೆ ಎಂದು ಸಚಿವೆ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next