Advertisement

CM Siddaramaiahಗೆ ನಾನೇ ಬಂಡೆಯಂತೆ ಬಲ: ಡಿ.ಕೆ.ಶಿವಕುಮಾರ್‌

12:21 AM Aug 09, 2024 | Team Udayavani |

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾನೇ ಬಂಡೆ, ನಾನೇ ಬಲ. ನಾನು ಎಲ್ಲ ಕಾಲಕ್ಕೂ ಅವರ ಪರವಾಗಿ ರುವೆ ಎಂದು ಹೇಳುವ ಮೂಲಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.

Advertisement

ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಜನಾಂದೋಲನ ಸಮಾವೇಶದ ಸಿದ್ಧತೆ ಪರಿಶೀಲಿಸಿ ಸುದ್ದಿಗಾರ
ರೊಂದಿಗೆ ಮಾತನಾಡಿ, ನಾನು ಮಾತ್ರವಲ್ಲದೇ ಪಕ್ಷವೇ ಸಿಎಂ ಪರವಾಗಿ ಗಟ್ಟಿಯಾಗಿ ನಿಲ್ಲುತ್ತದೆ. ಮುಖ್ಯಮಂತ್ರಿಗಳು ಏನಾದರೂ ಹಗರಣ ಮಾಡಿದ್ದರೆ ಅದನ್ನು ಅರಗಿಸಿಕೊಳ್ಳುತ್ತಿದ್ದರು. ಆದರೆ ಹಗರಣವೇ ಮಾಡದ ಕಾರಣ ಅವರಿಗೆ ನೋವಾಗಿದೆ. ಸಿಎಂ ಎಮೋಷನಲ್‌ ಮ್ಯಾನ್‌ ಆಗಿದ್ದು, ಈ ವಿಚಾರವನ್ನು ಮನಸ್ಸಿಗೆ ತೆಗೆದುಕೊಂಡಿದ್ದಾರೆ ಎಂದರು.

ಜನಾಂದೋಲನ ಸಮಾವೇಶಕ್ಕೆ ನೀವು ಬರುವುದು ಬೇಡ, ಜೆಡಿಎಸ್‌-ಬಿಜೆಪಿ ಅವರನ್ನು ನಾವೇ ಹೆದರಿಸುತ್ತೇವೆ ಎಂದು ಸಿಎಂಗೆ ನಾನೇ ಹೇಳಿದೆ . ಆದರೆ ಸಿದ್ದರಾಮಯ್ಯ ಸಮಾವೇಶಕ್ಕೆ ಬರುತ್ತಿದ್ದು, ಇದಕ್ಕೂ ಅವರು ಬರುವ ಆವಶ್ಯಕತೆ ಇರಲಿಲ್ಲ. ಬಿಜೆಪಿ-ಜೆಡಿಎಸ್‌ಗೆ ನಾವೇ ಸರಿಯಾಗಿ ಉತ್ತರ ನೀಡುತ್ತೇವೆ. ಆದರೂ ಸಮಾವೇಶಕ್ಕೆ ಬರುತ್ತೇನೆ, ಕೆಲವು ವಿಚಾರಗಳನ್ನು ಮಾತನಾಡುತ್ತೇನೆ ಎಂದು ಹೇಳಿದ್ದಾರೆ ಎಂದರು. ಕೇಂದ್ರದ ಸಚಿವ ಸ್ಥಾನ ಕಳೆದುಕೊಳ್ಳುವ ಭಯದಲ್ಲಿ ಕುಮಾರಸ್ವಾಮಿ ಪಾದಯಾತ್ರೆಗೆ ಬಂದಿದ್ದಾರೆಂದು ದೂರಿದರು.

ಮೈನಿಂಗ್‌ ಮಿನಿಸ್ಟರ್‌ ಮೈನಿಂಗ್‌ಗೆ ಅನುಮತಿ ಕೊಟ್ಟದ್ದು ಹೇಗೆ?: ಡಿಕೆಶಿ
ರಾಮನಗರ: ನಮ್ಮ ಮೇಲೆ ಆರೋಪ ಮಾಡುವವರು ಮೊದಲು ಅವರ ಸ್ವತ್ಛತೆ ಬಗ್ಗೆ ಉತ್ತರ ನೀಡಲಿ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ ತಿರುಗೇಟು ನೀಡಿದರು.

ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮೈನಿಂಗ್‌ ಮಿನಿಸ್ಟರ್‌ ಮೈನಿಂಗ್‌ಗೆ ಹೇಗೆ ಅನುಮತಿ
ನೀಡಿದರು ಎಂದು ಮಾಧ್ಯಮದಲ್ಲಿ ಚರ್ಚೆಯಾಗುತ್ತಿದೆ. ಮೈನಿಂಗ್‌, ಸ್ಟೀಲ್‌, ಕಬ್ಬಿಣ ಸಚಿವರು ಅನುಮತಿ ಕೊಟ್ಟರು ಎನ್ನುವ ವಿಚಾರವಿದೆ. ಅವರ ಸ್ವತ್ಛತೆ ಬಗ್ಗೆ ತಿಳಿಸಲಿ. ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರಲ್ಲವೇ, ಡೀನೋಟಿಫಿಕೇಶನ್‌ ಸೇರಿದಂತೆ ಇತರ ಆರೋಪಗಳಿಗೆ ಉತ್ತರ ನೀಡಲಿ ಎಂದು ಸವಾಲು ಹಾಕಿದರು.

Advertisement

ಮೈಸೂರಿನಲ್ಲಿ ನಡೆಯಲಿರುವ ಜನಾಂದೋಲನ ಸಭೆಯ ಪೋಸ್ಟರ್‌ನಲ್ಲಿ ತಮ್ಮ ಭಾವಚಿತ್ರ ಇಲ್ಲದಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರು ನಮ್ಮ ಮುಖ್ಯಮಂತ್ರಿ. ಸರಕಾರದ ನಾಯಕರು. ನನ್ನ ಭಾವಚಿತ್ರ ಇಲ್ಲದಿದ್ದರೂ ಚಿಂತೆ ಇಲ್ಲ ಎಂದರು.

ಜನಾಂದೋಲನದಲ್ಲಿ ಮೈತ್ರಿ ಭ್ರಷ್ಟಾಚಾರ ಬಿಚ್ಚಿಡುತ್ತೇವೆ: ಸಚಿವ
ಬೆಂಗಳೂರು: ಮೈಸೂರಿನಲ್ಲಿ ನಡೆಯುವ ಜನಾಂದೋಲನ ಸಮಾವೇಶ ದಲ್ಲಿ ಬಿಜೆಪಿ-ಜೆಡಿಎಸ್‌ನವರ ಭ್ರಷ್ಟಾಚಾರದ ವಿವರ ಬಿಚ್ಚಿಡುತ್ತೇವೆ ಎಂದು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಸುದ್ದಿಗಾರರ ಜತೆಗೆ ಮಾತನಾಡಿ, ಕುಮಾರಸ್ವಾಮಿ ವಿರುದ್ಧ ಇರುವ ಲೋಕಾಯುಕ್ತ ಪ್ರಕರಣದ ಬಗ್ಗೆ ಮಾಧ್ಯಮಗಳಲ್ಲಿ ವರದಿ ನೋಡಿದ್ದೇನೆ. ಇನ್ನೊಂದು ವಾರದಲ್ಲಿ ಬಿಜೆಪಿ-ಜೆಡಿಎಸ್‌ನವರ ಇನ್ನಷ್ಟು ಹಗರಣಗಳು ಬೆಳಕಿಗೆ ಬರಲಿವೆ. ಅವರೇ ಪರಸ್ಪರ ಹಗರಣಗಳನ್ನು ಬಯಲು ಮಾಡಿಕೊಳ್ಳುತ್ತಾರೆ. ಕುಮಾರಸ್ವಾಮಿ ಹಾಗೂ ವಿಜಯೇಂದ್ರ ಅವರ ತಪ್ಪುಗಳನ್ನು ನಾವು ಹೇಳುವುದಿಲ್ಲ. ಆ. 10ರ ಬಳಿಕ ಅವರೇ ಆರಂಭಿಸುತ್ತಾರೆ ಎಂದು ವ್ಯಂಗ್ಯವಾಡಿದರು.

ಬಿಜೆಪಿ ನಡೆಸುವ ಪಾದಯಾತ್ರೆ ತಪ್ಪು ಎಂದು ನಾನು ಹೇಳುವುದಿಲ್ಲ. ಕೇಂದ್ರದಿಂದ ರಾಜ್ಯಕ್ಕೆ ಸೌಲಭ್ಯ ಸಿಗುತ್ತಿಲ್ಲ ಎಂದು ಅವರು ಪಾದಯಾತ್ರೆ ನಡೆಸಲಿ ಎಂದು ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next