Advertisement

ನಾನು ಈಗಲೂ ಆಸ್ಟ್ರೇಲಿಯಯದ ಟಾಪ್‌ 6 ಬ್ಯಾಟ್ಸ್‌ಮನ್‌: ಖ್ವಾಜಾ

08:08 AM May 07, 2020 | Sriram |

ಮೆಲ್ಬರ್ನ್: ತಾನು ಈಗಲೂ ಆಸ್ಟ್ರೇಲಿಯದ ಟಾಪ್‌ 6 ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬ, ಹೀಗಾಗಿ ತನಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವ ಅರ್ಹತೆ ಇದೆ, ಖಂಡಿತ ವಾಪಸಾಗುತ್ತೇನೆ ಎಂಬುದಾಗಿ ಉಸ್ಮಾನ್‌ ಖ್ವಾಜಾ ಹೇಳಿದ್ದಾರೆ.

Advertisement

“ಕ್ರಿಕೆಟ್‌ ಆಸ್ಟ್ರೇಲಿಯ’ ತನ್ನ ನೂತನ ಗುತ್ತಿಗೆ ಒಪ್ಪಂದದಿಂದ ಖ್ವಾಜಾ ಅವರನ್ನು ಕೈಬಿಟ್ಟಿತ್ತು. ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ಸ್ವತಃ ಖ್ವಾಜಾ ಅವರೇ ಪ್ರತಿಕ್ರಿಯೆ ನೀಡಿದ್ದಾರೆ.

“ವಯಸ್ಸು ಕೇವಲ ಒಂದು ಸಂಖ್ಯೆ. ಫಾರ್ಮ್ ನಲ್ಲಿರುವಾಗ ವಯಸ್ಸಿನ ಗೊಡವೆ ಇರಬಾರದು. ನನಗೇನೂ 37 38 ವರ್ಷ ಆಗಿಲ್ಲ. ಖಂಡಿತವಾಗಿಯೂ ಆಸ್ಟ್ರೇಲಿಯ ತಂಡಕ್ಕೆ ಮರಳುವ ನಂಬಿಕೆ ಇದೆ’ ಎಂಬುದಾಗಿ ಖ್ವಾಜಾ “ಫಾಕ್ಸ್‌ ಸ್ಪೋರ್ಟ್ಸ್’ ಕಾರ್ಯಕ್ರಮದಲ್ಲಿ ಹೇಳಿದರು.

“ಆಸ್ಟ್ರೇಲಿಯದ ಕ್ರಿಕೆಟಿಗರಲ್ಲೇ ನಾನು ಸ್ಪಿನ್‌ ಎಸೆತಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಬಲ್ಲ ಛಾತಿ ಹೊಂದಿದ್ದೇನೆ. ಆದರೆ ರನ್‌ ಗಳಿಸುವುದು ಅತ್ಯಗತ್ಯ. ಅಲ್ಲದೇ ಆಸ್ಟ್ರೇಲಿಯವೀಗ ನಂಬರ್‌ ವನ್‌ ಟೆಸ್ಟ್‌ ತಂಡ. ಇಲ್ಲಿ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಇದೆ’ ಎಂದೂ ಖ್ವಾಜಾ ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next