Advertisement

ನಾನು ಇರೋದೇ ಹೀಗೆ!

12:28 PM Jan 26, 2018 | |

“ನೋಡಿ ಸ್ವಾಮಿ ನಾನಿರೋದೇ ಹೀಗೆ. ಅಪ್ಪಾಜಿ ತರಹ ಇರೋಕೆ ನನಗೆ ಆಗಲ್ಲ. ಅಪ್ಪಾಜಿ ಅಪ್ಪಾಜಿನೇ. ದಯವಿಟ್ಟು ಅವರಿಗೆ ನನ್ನನ್ನು ಎಂದಿಗೂ ಹೋಲಿಸಬೇಡಿ …’

Advertisement

– ಹೀಗೆ ಹೇಳಿಕೊಂಡಿದ್ದು ಶಿವರಾಜಕುಮಾರ್‌. ಅವರು ಈ ಹಿಂದೆ ಅದೆಷ್ಟೋ ಸಲ ಈ ಮಾತನ್ನು ಹೇಳಿಕೊಂಡಿದ್ದಾರೆ. ಪುನಃ, ಈ ಮಾತು ಪ್ರಜ್ವಲಿಸಿದ್ದು, “ಮಪ್ತಿ’ 50 ರ ಸಂಭ್ರಮದಲ್ಲಿ. ಇತ್ತೀಚೆಗೆ “ಮಪ್ತಿ’ ಚಿತ್ರದ 50ನೇ ದಿನದ ಸಂಭ್ರಮಾಚರಣೆಯನ್ನು ಶಿವರಾಜಕುಮಾರ್‌ ಅವರ ಮನೆಯಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಚಿತ್ರೀಕರಣ ಸಮಯದಲ್ಲಿ
ನಿರ್ದೇಶಕರು, ಕೆಲ ದೃಶ್ಯದಲ್ಲಿ ಹೀಗೆ ಮಾಡಿ, ಹಾಗೆ ಮಾಡಿ ಅಂತ ತೋರಿಸುತ್ತಿದ್ದರು. ನೀನೇ ಮಾಡಿ ತೋರಿಸುವುದಾದರೆ, 
ನಾನ್ಯಾಕೆ ಬೇಕಿತ್ತು. ನೀನೇ ಮಾಡಬಹುದಲ್ವಾ ಅಂತ ತಮಾಷೆಯಲ್ಲೇ ಜಗಳಕ್ಕಿಳಿಯುತ್ತಿದ್ದೆ. ನಾನು ಎಲ್ಲರ ಮೇಲೂ ರೇಗಾಡಿದ್ದೇನೆ. ನಾನು ಇರೋದೇ ಹೀಗೆ. ಅಪ್ಪಾಜಿ ತರಹ ಇರೋಕೆ ಆಗೋದಿಲ್ಲ. ಅಪ್ಪಾಜಿ ಅಪ್ಪಾಜಿನೇ. ಅವರಿಗೆ ನನ್ನನ್ನು ಎಂದಿಗೂ ಹೋಲಿಸಬೇಡಿ’ ಅಂತ ನೇರವಾಗಿ ಹೇಳುವ ಮೂಲಕ, ನಾನು ಎಷ್ಟೇ ರೇಗಿದರೂ, ಅದು ತಮಾಷೆಯಾಗಿರುತ್ತೆ ಅನ್ನುವುದನ್ನೂ ಸ್ಪಷ್ಟಪಡಿಸುತ್ತಾರೆ ಶಿವರಾಜಕುಮಾರ್‌.

“ಮಪ್ತಿ’ ಚಿತ್ರದ ಕಥೆಯನ್ನು ನಿರ್ದೇಶಕ ನರ್ತನ್‌ ಹೇಳಿದಾಗ, ಶಿವರಾಜಕುಮಾರ್‌ ಸ್ವಲ್ಪ ಬದಲಾವಣೆ ಮಾಡುವಂತೆ ಸೂಚಿಸಿದ್ದರಂತೆ. ಹೆಂಡತಿ ಪಾತ್ರ ಬದಲಾಗಿ ತಂಗಿ ಪಾತ್ರ ಮಾಡಿ ಅಂದಿದ್ದರಂತೆ. ಬದಲಾವಣೆ ಮಾಡುವುದಾದರೆ, ಮಾಡಿ ಇಲ್ಲದಿದ್ದರೆ ಪರವಾಗಿಲ್ಲ. ಒಂದು ವೇಳೆ ಆ ಪಾತ್ರಕ್ಕೆ ಬೇರೆ ಯಾರೇ ಸರಿಹೊಂದಿದರೂ ಅವರನ್ನು ಹಾಕಿಕೊಂಡು ಸಿನಿಮಾ ಮಾಡಿ ಅಂದಿದ್ದರಂತೆ. ಶಿವರಾಜಕುಮಾರ್‌ ಹೇಳಿದಂತೆಯೇ, ಆ ನಿರ್ದೇಶಕರು ಸ್ವಲ್ಪ ಬದಲಾವಣೆಯನ್ನೂ ಮಾಡಿದ್ದಾರೆ. ಈಗ ನೋಡಿದರೆ, ಅದೇ
ಅಂಶ ಪ್ರೇಕ್ಷಕರ ವಲಯದಲ್ಲಿ ಹಿಟ್‌ ಆಗಿದೆ. 

“ಮಪ್ತಿ’ಯ ಖುಷಿಯಲ್ಲಿ ಇನ್ನಷ್ಟು ಹೊಸತನದ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕೆಂಬ ಉತ್ಸಾಹದಲ್ಲಿರುವ ಶಿವರಾಜಕುಮಾರ್‌,
“ಪ್ರೀತಿಯಿಂದ ಎಲ್ಲರೂ ನನ್ನನ್ನು ಹಿರಿಯನನ್ನಾಗಿಸಿಬಿಟ್ಟಿದ್ದಾರೆ. ನಾನಿನ್ನೂ ಚಿತ್ರರಂಗದಲ್ಲಿ ಕೆಲಸ ಮಾಡಬೇಕು. ಎಷ್ಟೇ ಚಿತ್ರ ಮಾಡಿದರೂ, ಮಗುವಂತೆ ಇರಿ¤àನಿ. ನಾನು ಇನ್ನೂ ಹತ್ತು ವರ್ಷಗಳ ಕಾಲ ಚಿತ್ರರಂಗದಲ್ಲಿದ್ದು, ಇದೇ ಎನರ್ಜಿ ಇಟ್ಟುಕೊಂಡು ಹೊಸ ತರಹದ ಸಿನಿಮಾಗಳನ್ನು ಮಾಡುವ ಆಸೆ ಇದೆ. ಮುಂದಿನ ಹತ್ತು ವರ್ಷಗಳಲ್ಲಿ ಎಷ್ಟು ಸಿನಿಮಾಗಳು ಆಗುತ್ತೋ ಆಗಲಿ, ಮಾಡುತ್ತಲೇ ಇರುವ ಆಸೆ ನನ್ನದು’ ಎನ್ನುವ ಶಿವರಾಜಕುಮಾರ್‌, “ನನಗೆ ಎಲ್ಲಾ ಅಭಿಮಾನಿಗಳು ಬೇಕು. ನಾನು ಎಲ್ಲರೊಂದಿಗೂ ಇರುತ್ತೇನೆ. ಎಲ್ಲರೂ ಒಟ್ಟಿಗೆ ಸೇರಿ ಕಾರ್ಯಕ್ರಮ ರೂಪಿಸಿ, ಸಂಭ್ರಮಿಸಿ, ನಿಮ್ಮಗಳ ಮಧ್ಯೆ ಕೋಪ, ಮುನಿಸು ಬೇಡ. ನನಗೆ ಎಲ್ಲರೂ ಒಂದೇ ಎಲ್ಲಾ ಸಂಘ, ಸಮಿತಿಗಳು ಮುಖ್ಯ ಅಂತ ಹೇಳುವ ಮೂಲಕ ಅಭಿಮಾನಿ ಸಂಘ, ಸಮಿತಿಗಳ ನಡುವಿನ ಮುನಿಸು’ ಕುರಿತು
ಹೇಳಿಕೊಂಡರು. 

ಮಪ್ತಿ’ 50ನೇ ದಿನದ ಸಂಭ್ರಮಚಾರಣೆಯನ್ನು ತಮ್ಮ ಮನೆಯಲ್ಲಿ ಆಯೋಜಿಸಿದ್ದರ ಕುರಿತು ಮಾತನಾಡಿದ ಅವರು, “50ರ ಸಂಭ್ರಮಕ್ಕೆ ಕಾರಣರಾದ ಅಭಿಮಾನಿಗಳಿಗೆ ಚಿರಋಣಿ. ಅವರ ಈ ಪ್ರೀತಿಯನ್ನು ಎಂದಿಗೂ ಮರೆಯಲಾರೆ. ಮೊದಲಿನಿಂದಲೂ ನಾನು ಅಭಿಮಾನಿಗಳಿಗೆ ಹೇಳುತ್ತಲೇ ಬಂದಿದ್ದೇನೆ. ಇದು ನನ್ನ ಮನೆಯಲ್ಲ. ಇದು ಅಭಿಮಾನಿಗಳ ಮನೆ. ಅವರ ಮನೆಯಲ್ಲಿ ಅವರು ಸಂಭ್ರಮಿಸೋಕೆ ಯಾವುದೇ ಅಡ್ಡಿಯಿಲ್ಲ. ನನ್ನ ಪ್ರಕಾರ ಹೇಳುವುದಾದರೆ, ಯಾವುದೇ ಒಬ್ಬ ನಟ ಎತ್ತರಕ್ಕೆ ಬೆಳೆದು ನಿಲ್ಲೋಕೆ ಕಾರಣ
ಅಭಿಮಾನಿಗಳ ಪ್ರೀತಿ. ಪ್ರತಿ ಸಿನಿಮಾಗೂ ಅವರು ತೋರುವ ಪ್ರೀತಿ, ಅಭಿಮಾನದಿಂದಲೇ ಇಂದು ಹೀರೋಗಳು ಗೆಲುವು 
ಕಾಣುತ್ತಿದ್ದಾರೆ’ ಎನ್ನುತ್ತಾರೆ ಶಿವರಾಜಕುಮಾರ್‌.

Advertisement

 ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next