ನವ ದೆಹಲಿ/ಕೊಲ್ಕತ್ತಾ : ಮಾರ್ಚ್ 27 ರಿಂದ ಪ್ರಾರಂಭವಾಗುವ ಎಂಟು ಹಂತದ ಪಶ್ಚಿಮ ಬಂಗಾಳದ ವಿಧಾನ ಸಭಾ ಚುನಾವಣೆಗೂ ಮುನ್ನವೇ ಟಿ ಎಮ್ ಸಿ ಗೂಂಡಾಗಳು ಪಕ್ಷದ ಕಾರ್ಯಕರ್ತ ಹಾಗೂ ಅವರ ತಾಯಿಯನ್ನು ನಿರ್ದಯವಾಗಿ ಹೊಡೆದಿದ್ದಾರೆ ಎಂದು ಬಿಜೆಪಿ ತೃಣಮೂಲ ಕಾಂಗ್ರೆಸ್ ನ್ನು ಆರೋಪಿಸಿದೆ. ಆದರೇ, ಬಿಜೆಪಿಯ ಈ ಆರೋಪವನ್ನು ಟಿ ಎಮ್ ಸಿ ನಿರಾಕರಿಸಿದೆ.
“ಅವರು ನನ್ನ ತಲೆಗೆ ಮತ್ತು ಕುತ್ತಿಗೆಗೆ ಹೊಡೆದಿದ್ದಾರೆ. ನನ್ನ ಮುಖಕ್ಕೆ ಗುದ್ದಿದ್ದಾರೆ. ನಾನು ಇದರಿಂದ ಹೆದರಿದ್ದೇನೆ. ಈ ವಿಚಾರವನ್ನು ಯಾರಿಗೂ ಹೇಳಬಾರದು ಎಂದು ಅವರು ಬೆದರಿಸಿದ್ದಾರೆ. ನನ್ನ ಇಡೀ ದೇಹಕ್ಕೆ ನೋವಾಗಿದೆ” ಎಂದು ಬಿಜೆಪಿ ಕಾರ್ಯಕರ್ತ ಗೋಪಾಲ್ ಮಜುಂದಾರ್ ಅವರ ತಾಯಿ ಶೋವಾ ಮಜುಂದಾರ್ ಸುದ್ದಿ ಸಂಸ್ಥೆ ಎ ಎನ್ ಐ ವಿಡಿಯೋಂದರಲ್ಲಿ ಬಂಗಾಳಿ ಭಾಷೆಯಲ್ಲಿ ಹೇಳಿದ್ದಾರೆ.
ಓದಿ : ಕಿಷ್ಕಿಂದಾ ಅಂಜನಾದ್ರಿಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ದಂಪತಿಗಳಿಂದ ಹೋಮ- ಹವನ
ಬಿಜೆಪಿ, ಆ ವೀಡಿಯೊವನ್ನು ತನ್ನ ಅಧಿಕೃತ ಟ್ವೀಟರ್ ಖಾತೆಯಲ್ಲಿಯೂ ಹಂಚಿಕೊಂಡಿದ್ದು, ಬಿಜೆಪಿ ಕಾರ್ಯಕರ್ತ ಗೋಪಾಲ್ ಮಜುಂದಾರ್ ಅವರ ತಾಯಿಯ ಮಾತುಗಳನ್ನು ಕೇಳಿ. ಟಿ ಎಮ್ ಸಿ ಗೂಂಡಾಗಳು ನಿರ್ದಯವಾಗಿ ಥಳಿಸಿದ್ದಾರೆ ಎಂದು ಟ್ವೀಟರ್ ನಲ್ಲಿ ವೀಡಿಯೊದೊಂದಿಗೆ ಬರೆದುಕೊಂಡಿದೆ.
Related Articles
ಉತ್ತರ 24 ಪರಾಗಣಸ್ ಜಿಲ್ಲೆಯ ನಿಮ್ಟಾ ಪ್ರದೇಶದ ಬಿಜೆಪಿ ಕಾರ್ಯಕರ್ತ ಗೋಪಾಲ್ ಮಜುಂದಾರ್, ತೃಣಮೂಲ ಕಾಂಗ್ರೆಸ್ ನ ಮೂವರು ಕಾರ್ಯಕರ್ತರು ನಮ್ಮ ಮನೆ ಮೇಲೆ ದಾಳಿ ಮಾಡಿ, ಹೊಡೆದಿದ್ದಾರೆ ಎಂದು ಶಣಿವಾರ ಆರೋಪಿಸಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ. ಸದ್ಯ, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಜೆಪಿ ಮಾಡಿದ ಟ್ವೀಟ್ ಗೆ ಪ್ರತಿಕ್ರಿಯೆಯಾಗಿ ತೈಣಮೂಲ ಕಾಂಗ್ರೆಸ್ ನ ಸಂಸದ ಡೆರೆಕ್ ಓಬ್ರಿಯೆನ್ ನಿನ್ನೆ ರಾತ್ರಿ ಟ್ವೀಟ್ ಮಾಡಿದ್ದು, ತೃಣಮೂಲ ಸಕಾರಾತ್ಮಕವಾಗಿ ಚುನಾವಣಾ ಅಭಿಯಾನವನ್ನು ಮಾಡುತ್ತಿದೆ. ಇದರಿಂದ ಬಿಜೆಪಿಗೆ ಹತಾಶೆಯುಂಟಾಗಿದೆ. ಮಮತಾ ಅವರಿಗೆ ಏನು ಕೌಂಟರ್ ನೀಡಲು ಬಿಜೆಪಿಯವರಲ್ಲಿ ಏನು ವಿಷಯವಿಲ್ಲ. ಅವರು ಎಷ್ಟು ಕೇಳ ಮಟ್ಟಕ್ಕೆ ಇಳಿಯುತ್ತಾರ..? ಮೋಸ. ಇಲ್ಲಿ ಯಾರನ್ನೂ ಬಿಡಲಾಗುವುದಿಲ್ಲ. ಹಿರಿಯ ನಾಗರಿಕರನ್ನೂ ಸಹ. #FakeNews factory. Exposed again. Pukeworthy ಎಂದು ಅವರು ಟ್ವೀಟ್ ಮಾಡಿದ್ದಾರೆ.
ಮಾರ್ಚ್ 27 ರಿಂದ ಏಪ್ರಿಲ್ 29 ರವರೆಗೆ ಪಶ್ಚಿಮ ಬಂಗಾಳ ಚುನಾವಣೆ ಎಂಟು ಹಂತಗಳಲ್ಲಿ ನಡೆಯಲಿದ್ದು, ಫಲಿತಾಂಶಗಳನ್ನು ಮೇ 2 ರಂದು ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗ ಶುಕ್ರವಾರ ಪ್ರಕಟಿಸಿದೆ.
ಚುನಾವಣಾ ಸಂದರ್ಭದಲ್ಲಿ ಇಂತಹ ಘಟನೆಗಳು ರಾಜ್ಯದಲ್ಲಿ ಸಾಮಾನ್ಯವಾಗಿದೆ. ಕೇಂದ್ರವು ಈಗಾಗಲೇ ಚುನಾವಣೆಗೆ ಮುಂಚಿತವಾಗಿ ಭದ್ರತಾ ವ್ಯವಸ್ಥೆಯನ್ನು ತೀವ್ರಗೊಳಿಸಿದೆ.
ಓದಿ : ರೈತರಿಗೆ ಸಿಗಲಿ ತಂತ್ರಜ್ಞಾನ- ಅರಿವಿನ ಉತ್ತೇಜನ – ಮಾಜಿ ಸಚಿವ ಕೃಷ್ಣ ಭೈರೇಗೌಡ