ಲಕ್ನೋ: ದಕ್ಷಿಣ ಅಫ್ರಿಕಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಎಡವಿದ ಭಾರತ ತಂಡ 9 ರನ್ ಅಂತರದ ಸೋಲು ಕಂಡಿದೆ. ಬೌಲರ್ ಗಳಿಗೆ ಹೆಚ್ಚಿನ ನೆರವು ಲಭಿಸುತ್ತಿದ್ದ ಪಿಚ್ ನಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅಜೇಯ ಆಟವಾಡಿದರು. ಭಾರತಕ್ಕೆ ಗೆಲುವಿನ ಆಸೆ ಚಿಗುರಿಸಿದ್ದ ಸಂಜು 86 ರನ್ ಗಳಿಸಿದರು.
40 ಓವರ್‌ಗಳಲ್ಲಿ ಗೆಲ್ಲಲು 250 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತೀಯ ಬ್ಯಾಟರ್ ಗಳು ಆರಂಭದಲ್ಲಿ ಕಷ್ಟಪಟ್ಟರು. ಮೊದಲು ಶ್ರೇಯಸ್ ಅಯ್ಯರ್ ಅವರೊಂದಿಗೆ ಉತ್ತಮ ಜೊತೆಯಾಟ ನಡೆಸಿದ ಸ್ಯಾಮ್ಸನ್ ಬಳಿಕ ಶಾರ್ದೂಲ್ ಠಾಕೂರ್ ಅವರೊಂದಿಗೆ ಪ್ರಮುಖ ಪಾರ್ಟ್ನರ್ ಶಿಪ್ ಮಾಡಿದರು. ಕೊನೆಯ ಓವರ್ ನಲ್ಲಿ ಗೆಲುವಿಗೆ 30 ರನ್ ಅಗತ್ಯವಿದ್ದಾಗ ಸಂಜು 20 ರನ್ ಅಷ್ಟೇ ಮಾಡಿದರು.
ಇದನ್ನೂ ಓದಿ:ಕಂಟೆಂಟೇ ಸ್ಟ್ರಾಂಗು ಗುರೂ… ದೇಸಿ ಸೊಗಡಿಗೆ ಪ್ರೇಕ್ಷಕನ ಜೈಕಾರ
“ಪಿಚ್ ನಲ್ಲಿ ಸಮಯ ಕಳೆಯಲು ಯಾವಾಗಲೂ ಸಂತೋಷವಾಗುತ್ತದೆ. ಗೆಲುವಿಗೆ ಪ್ರಯತ್ನ ಪಟ್ಟೆವು. ಕೊನೆಯಲ್ಲಿ ಎರಡು ಶಾಟ್ ತಪ್ಪಿಸಿದೆ, ಮುಂದಿನ ಬಾರಿ ನಾನು ಇನ್ನೂ ಹೆಚ್ಚು ಶ್ರಮಿಸುತ್ತೇನೆ. ಆದರೆ ನನ್ನ ಕೊಡುಗೆಯಿಂದ ನಾನು ತೃಪ್ತನಾಗಿದ್ದೇನೆ.” ಎಂದು ಸಂಜು ಸ್ಯಾಮ್ಸನ್ ಪಂದ್ಯದ ಬಳಿಕ ಹೇಳಿದರು.
ಸ್ಯಾಮ್ಸನ್ ಅವರು ಡೇವಿಡ್ ಮಿಲ್ಲರ್ ಅವರನ್ನು ಹೊಗಳಿದರು. ಮಿಲ್ಲರ್ ಪ್ರಸ್ತುತ ವಿಶ್ವದ ಅತ್ಯುತ್ತಮ ಫಿನಿಶರ್ ಎಂದು ಸಂಜು ಹೇಳಿದರು.