Advertisement
ಇದು ಸಭ್ಯ ರಾಜಕಾರಣಿಯ ಲಕ್ಷಣವಲ್ಲ, ನನ್ನ ವಿರುದ್ಧ ಆಡಿರುವ ಮಾತನ್ನು ಹಿಂಪಡೆಯಬೇಕೆಂದು ಶಾಸಕ ಎಚ್.ವಿಶ್ವನಾಥ್ ತಾಕೀತು ಮಾಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಜುನಾಥ್ ಎರಡು ಬಾರಿ ಶಾಸಕರಾದರೂ ಅವರಿಗೆ ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕೆಂದು ತಿಳಿದಿಲ್ಲ.
Related Articles
Advertisement
ರಿಯಲ್ ಟೈಗರ್: ಮಾಜಿ ಮುಖ್ಯಮಂತ್ರಿಯನ್ನೇ ಕ್ಯಾರೇ ಅನ್ನದೇ ನನ್ನವಾದ ಮಂಡಿಸಿದವನು ನಾನು. ಚಮಚಾ ರಾಜಕಾರಣಿ ನಾನಲ್ಲ. ಪೇಪರ್ ಹುಲಿಯೂ ಅಲ್ಲ, ನಾನು ರಾಜಕೀಯದಲ್ಲಿ ನಿಜವಾದ ಹುಲಿಯೇ ಐ ಯಾಮ್ ರಿಯಲ್ ಟೆ„ಗರ್ ಹೌದೆಂದು ತಿರುಗೇಟು ನೀಡಿದರು. ಜಾತಿ-ಜಾತಿ ನಡುವೆ ಸಂಘರ್ಷ ತಂದಿಟ್ಟಿರಿ. ಈ ವಿಶ್ವನಾಥ್‌ನನ್ನು ದಾರಿ ತಪ್ಪಿಸಲು ನಿಮಗೆ ಸಾಧ್ಯವಿಲ್ಲ.
ನಾನೆ ಟಿಕೇಟ್ ಕೊಡಿಸಿದ್ದೆ: 10ವರ್ಷದ ಹಿಂದೆ ನಿಮಗೆ ಟಿಕೇಟ್ ಕೊಡಿಸುವಲ್ಲಿ ನಾನೇ ಪ್ರಮುಖ ಪಾತ್ರ ವಹಿಸಿದ್ದೆ. ಅದರ ಕನಿಷ್ಠ ಕೃತಜ್ಞತೆಯೂ ನಿಮಗಿಲ್ಲ. ಕಲ್ಲಹಳ್ಳಿ ಅಬಿವೃದ್ಧಿಗೆ 10ಕೋಟಿ ರೂ. ಕೊಡಿಸಿದ್ದೆ. ಏನಾಯಿತು ತಿಳಿಸಿ. ಯಾಕೆ ಅಭಿವೃದ್ಧಿಯಗಿಲ್ಲ ಕಾರಣಕೊಡಿ ಎಂದು ಪ್ರಶ್ನಿಸಿ, ಮುಂದಿನ ದಿನಗಳಲ್ಲಿ ನನ್ನ ವಿರುದ್ಧ ವೈಯಕ್ತಿಕ ಟೀಕೆ, ನನ್ನ ಸಮುದಾಯ ಹಾಗೂ ಪಕ್ಷದ ವಿರುದ್ಧವಾಗಲೀ ಟೀಕಿಸಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲವೆಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ಜೆಡಿಎಸ್ ತಾಲೂಕು ಅಧಕ್ಷ ಹರಳಹಳ್ಳಿ ಮಾದೇಗೌಡ, ನಗರಸಭಾಧ್ಯಕ್ಷ ಎಂ.ಶಿವಕುಮಾರ್, ಕುರುಬ ಸಮಾಜದ ಅಧ್ಯಕ್ಷ ಡಿ.ಕೆ.ಕುನ್ನೇಗೌಡ, ಮುಖಂಡ ಬಸವಲಿಂಗಯ್ಯ ಸುದ್ದಿಗೋಷ್ಟಿಯಲ್ಲಿ ಹಾಜರಿದ್ದರು.
ಮಾಜಿ ಶಾಸಕ ಮಂಜನಾಥ್ ಹೇಳಿದ್ದೇನು?: ಕಳಪೆ ಕಾಮಗಾರಿಗಳು ನಡೆದಿವೆ ಎಂದು ಆರೋಪಿಸುತ್ತಿರುವ ಶಾಸಕ ವಿಶ್ವನಾಥರು ನಿರ್ದಿಷ್ಟ ಕಾಮಗಾರಿ ಬಗ್ಗೆ ತಿಳಿಸಲಿ, ತಪ್ಪೆಸಗಿದ್ದಲ್ಲಿ ಇಂಜಿನಿಯರ್, ಗುತ್ತಿಗೆದಾರರ ವಿರುದ್ಧ ತನಿಖೆಗೆ ಆದೇಶಿಸಬೇಕಾದವರು ಮಾದ್ಯಮದ ಮುಂದೆ ಕುಳಿತು ಹೇಳಿಕೆ ನೀಡುವ ಪೇಪರ್ ಹುಲಿ ಕೆಲಸ ಮಾಡುತ್ತಿದ್ದಾರೆಂದು ಶುಕ್ರವಾರ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಛೇಡಿಸಿದ್ದರು.
ಚಿಲ್ಕುಂದ ಏತ ನೀರಾವರಿಯೋಜನೆ ಕಾಮಗಾರಿ ಕಳಪೆ ಎಂದಿರುವ ಶಾಸಕರ ಆರೋಪಕ್ಕೆ ಈ ಕಾಮಗಾರಿಯನ್ನು ಇಂಜಿನಿಯರ್ ಆಗಿರುವ ಅವರ ಅಳಿಯರವರದ್ದೇ ಉಸ್ತುವಾರಿಯಲ್ಲಿ ನಡೆದಿದ್ದು, ಅವರ ಹತ್ತಿರದ ಸಂಬಂಧಿಕರೇ ಈ ಕಾಮಗಾರಿ ನಡೆಸಿದ್ದು, ತಾವು ಹಿಂದೆಯೇ ಕಳಪೆ ಕಾಮಗಾರಿ ಬಗ್ಗೆ ತನಿಖೆಗೆ ಒತ್ತಾಯಿಸಿದಾಗ ಇವರೇ ತಡೆ ಹಿಡಿದಿರುವುದನ್ನು ಮರೆತಿದ್ದಾರೆಂದು ವ್ಯಂಗ್ಯವಾಡಿ, ಈ ಕಾಮಗಾರಿಯ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮವಾಗಲಿ, ಗುತ್ತಿಗೆದಾರರನ್ನು ಬ್ಲಾಕ್ ಲೀಸ್ಟ್‌ಗೆ ಸೇರಿಸಲಿ ಎಂದು ಸವಾಲೆಸೆದಿದ್ದರು.
ಇನ್ನು ಮುಂದಾದರೂ ತಾಲೂಕಿನಲ್ಲಿ ಈವರೆಗೆ ನಡೆದಿರುವ ಯಾವ ಕಾಮಗಾರಿಗಳು ಕಳಪೆ ಎಂದು ಕಂಡುಬಂದಲ್ಲಿ ತನಿಖೆ ನಡೆಸಲು ಸರಕಾರಕ್ಕೆ ಪತ್ರ ಬರೆಯಿರಿ, ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯೋದು ಬೇಡ, ತಪ್ಪಿತಸ್ಥರ ವಿರುದ್ದಕ್ರಮವಾಗಲಿ ಎಂದು ವಿಶ್ವನಾಥರನ್ನು ಒತ್ತಾಯಿಸಿದರು.