Advertisement

ಪ್ರಧಾನಿ ಸ್ಥಾನಕ್ಕೆ ನಾನು ಸಿದ್ಧ: ರಾಹುಲ್‌ ಗಾಂಧಿ

06:00 AM Sep 13, 2017 | Team Udayavani |

ಬರ್ಕ್‌ಲೀ (ಕ್ಯಾಲಿಫೋರ್ನಿಯಾ): “ನಾನು ಪ್ರಧಾನಿ ಹುದ್ದೆಗೆ ಸಿದ್ಧನಿದ್ದೇನೆ, ಅವಕಾಶ ಬಂದರೆ ಒಪ್ಪಿಕೊಳ್ಳುತ್ತೇನೆ. ಆದರೆ ಕಾಂಗ್ರೆಸ್‌ನಲ್ಲಿ ಸಂಘಟನಾ ವ್ಯವಸ್ಥೆ ಇದ್ದು, ಆರಿಸಿ ಬರಬೇಕಾಗುತ್ತದೆ’ ಎಂದು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ.

Advertisement

2 ವಾರಗಳ ಅಮೆರಿಕ ಪ್ರವಾಸ ಆರಂಭಿಸಿ ರುವ ಅವರು, ಕ್ಯಾಲಿಫೋರ್ನಿಯಾದ ಬರ್ಕ್‌ಲೀಯಲ್ಲಿನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾ ನಿಲಯದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದು 70 ವರ್ಷವಾದ ನೆನಪಿನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಂಶಾಡಳಿತ ರಾಜಕಾರಣದ ಬಗ್ಗೆ ಸಂವಾದ ದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಭಾರತದಲ್ಲಿ ಇದು ಮಾಮೂಲು. ನಾನಷ್ಟೇ ಅಲ್ಲ, ಅಖೀಲೇಶ್‌ ಯಾದವ್‌, ಪ್ರೇಮ್‌ಕುಮಾರ್‌ ಧುಮಾಲ್‌ ಪುತ್ರ, ಎಂ.ಕೆ. ಸ್ಟಾಲಿನ್‌ ಹೆಸರುಗಳನ್ನು ಪ್ರಸ್ತಾವಿಸಿದ್ದಾರೆ. ರಾಜಕಾರಣದಲ್ಲಷ್ಟೇ ಅಲ್ಲ, ಅಂಬಾನಿ ಮಕ್ಕಳು, ಅಭಿಷೇಕ್‌ ಬಚ್ಚನ್‌ ಕೂಡ ವಂಶಪಾರಂಪರ್ಯದ ಕೂಸುಗಳೇ ಎಂದು ಹೇಳಿದ್ದಾರೆ. ಹಾಗಂತ ವಂಶಾಡಳಿತ ರಾಜಕಾರಣವನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಬೇಡ ಎನ್ನುವುದು ಕಷ್ಟ. ಬೇರೆ ಪಕ್ಷಗಳಿಗೆ ಹೋಲಿಕೆ ಮಾಡಿದರೆ ಕಾಂಗ್ರೆಸ್‌ನಲ್ಲೇ ಕಡಿಮೆ ಎಂದಿದ್ದಾರೆ.

ಈ ಸಂದರ್ಭದಲ್ಲಿ ಪ್ರಧಾನಿ ಹುದ್ದೆಗೂ ತಾವು ಸಿದ್ಧವಿರುವುದಾಗಿ ಹೇಳಿದ ಅವರು, ಕಾಂಗ್ರೆಸ್‌ನಲ್ಲಿ ಸಂಘಟನಾ ಚುನಾವಣಾ ವ್ಯವಸ್ಥೆ ಇದೆ. ಈ ಮೂಲಕವೇ ಅದು ನಿರ್ಧಾರವಾಗಬೇಕು. ಪಕ್ಷ ಒಪ್ಪಿದಲ್ಲಿ, ಇದಕ್ಕಾಗಿ ಆರಿಸಿ ಕಳುಹಿಸಿದಲ್ಲಿ ಈ ಹೊಣೆ ಹೊರಲು ಸಿದ್ಧವಿರುವುದಾಗಿ ಹೇಳಿದ್ದಾರೆ.

ರಾಹುಲ್‌ ಭಾಷಣದ ಪ್ರಮುಖಾಂಶಗಳು
– ಭಾರತ ಅಹಿಂಸಾ ದಾರಿಯಲ್ಲಿ ಬೆಳೆದು ಬಂದದ್ದು. ಆದರೆ ಜಗತ್ತಿನ ತುಂಬಾ ಮಂದಿಗೆ ಭಾರತದ ಬಗ್ಗೆ ಅರ್ಥವೇ ಆಗಿಲ್ಲ. ಅಹಿಂಸಾ ತತ್ವವನ್ನು ಪಸರಿಸಿದ್ದು ಮಹಾತ್ಮಾ ಗಾಂಧೀಜಿ. ಆದರೆ ಇದನ್ನು ಪಾಲಿಸುವುದು ತುಂಬಾ ಕಷ್ಟದ ಕೆಲಸ. ಇದನ್ನೇ ಭಾರತ ಪಾಲಿಸಿಕೊಂಡು ಹೋಗುತ್ತದೆ.

Advertisement

– ನೋಟು ಅಮಾನ್ಯ ಮತ್ತು ಜಿಎಸ್‌ಟಿ ಈಗಿನ ಸರಕಾರ ಮಾಡಿದ ಎರಡು ಮಹಾ ತಪ್ಪುಗಳು. ಆರ್ಥಿಕ ಸಲಹೆಗಾರ ಮತ್ತು ಸಂಸತ್‌ಗೆ ಗೊತ್ತಿಲ್ಲದಂತೆ ಇದನ್ನು ಘೋಷಿಸಿ ಇಡೀ ದೇಶವೇ ಕಷ್ಟದಲ್ಲಿ ಬೀಳುವಂತೆ ಮಾಡಿದರು. 

– ಕಾಂಗ್ರೆಸ್‌ ಪಕ್ಷ ಸಂವಾದ ಮತ್ತು ಚರ್ಚೆಗೆ ಆದ್ಯತೆ ನೀಡುತ್ತದೆ. ಆದರೆ 2012ರಲ್ಲಿ ನಾವು ಈ ಚರ್ಚೆ ಮತ್ತು ಸಂವಾದವನ್ನು ಸಂಪೂರ್ಣವಾಗಿ ಮರೆತೆವು. ಹೀಗಾಗಿಯೇ 2014ರಲ್ಲಿ ಕಾಂಗ್ರೆಸ್‌ ಸೋಲಲು ಕಾರಣವಾಯಿತು. ಪ್ರತಿ ನಿರ್ಧಾರವನ್ನೂ ಸಂವಾದದ ಮೂಲಕವೇ ನಾನು ತೆಗೆದುಕೊಳ್ಳುತ್ತೇನೆ.

– ಯುಪಿಎ ಸರಕಾರವಿದ್ದಾಗ 9ವರ್ಷ ಕಾಶ್ಮೀರ  ಸಮಸ್ಯೆ ಬಗೆಹರಿಸಿದ್ದೆವು. ಈಗಿನ ಸರಕಾರದ ತಪ್ಪು ನಿರ್ಧಾರದಿಂದಾಗಿ ಕಾಶ್ಮೀರದಲ್ಲಿ ಮತ್ತೆ ಹಿಂಸೆ ಶುರುವಾಗಿದೆ.

– ನರೇಂದ್ರ ಮೋದಿ ಅವರು ನನಗೂ ಪ್ರಧಾನಿಯೇ. ಅವರು ಅತ್ಯುತ್ತಮ ಸಂವಹನಕಾರರು. ಅವರು ಯಾವುದೇ ವಿಚಾರವನ್ನು ಜನರಿಗೆ ಅರ್ಥವಾಗುವಂತೆ ಹೇಳುತ್ತಾರೆ. ಆದರೆ ಅವರು ಜನರ ಮಾತು ಕೇಳುವಲ್ಲಿ ವಿಫ‌ಲರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next