Advertisement

ನೊಬೆಲ್‌ ಶಾಂತಿ ಪುರಸ್ಕಾರಕ್ಕೆ ನಾನು ಅರ್ಹನಲ್ಲ: ಪಾಕ್‌ PM ಇಮ್ರಾನ್‌

10:00 AM Mar 04, 2019 | udayavani editorial |

ಇಸ್ಲಾಮಾಬಾದ್‌ : ನೊಬೆಲ್‌ ಶಾಂತಿ ಪುರಸ್ಕಾರಕ್ಕೆ ನಾನು ಅರ್ಹನಲ್ಲ ಎಂದು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿದ್ದಾರೆ. 

Advertisement

ಪುಲ್ವಾಮಾ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತ ಎಲ್‌ಓಸಿ ಉಲ್ಲಂಘನೆ ಗೈದು ಪಾಕಿಸ್ಥಾನದ ಉಗ್ರ ಶಿಬಿರಗಳ ಮೇಲೆ ನಡೆಸಿದ ದಾಳಿಯ ಪರಿಣಾಮವಾಗಿ ನೆರೆಹೊರೆಯ ಈ ಎರಡು ಅಣ್ವಸ್ತ್ರ ದೇಶಗಳ ನಡುವೆ ಯುದ್ಧ  ಸ್ಫೋಟಗೊಳ್ಳುವುದನ್ನು ಸಕಾಲದಲ್ಲಿ  ನಿಲ್ಲಿಸಿದರೆಂಬ ಕಾರಣಕ್ಕೆ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ಗೆ ನೊಬೆಲ್‌ ಶಾಂತಿ ಪುರಸ್ಕಾರ ಸಲ್ಲಬೇಕೆಂಬ ಠರಾವನ್ನು ಪಾಕ್‌ ಸಂಸತ್ತಿನಲ್ಲಿ ಮಂಡಿಸಲಾಗಿತ್ತು.  

ಈ ಹಿನ್ನೆಲೆಯಲ್ಲಿ ಇಮ್ರಾನ್‌ ಖಾನ್‌ ತಾನು ನೊಬೆಲ್‌ ಶಾಂತಿ ಪುರಸ್ಕಾರಕ್ಕೆ ಅರ್ಹ ವ್ಯಕ್ತಿ ಅಲ್ಲ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

“ನಾನು ನೊಬೆಲ್‌ ಶಾಂತಿ ಪುರಸ್ಕಾರಕ್ಕೆ ಅರ್ಹನಲ್ಲ; ಕಾಶ್ಮೀರ ವಿವಾದವನ್ನು ಯಾರು ಕಾಶ್ಮೀರೀ ಜನರ ಆಶೋತ್ತರಗಳಿಗೆ ಅನುಗುಣವಾಗಿ ಬಗೆಹರಿಸಿ ಈ ಉಪ ಖಂಡದಲ್ಲಿ ಶಾಂತಿ ಮತ್ತು ಮನುಕುಲದ ಅಭಿವೃದ್ಧಿಗೆ ಹಾದಿ ಮಾಡಿಕೊಡುತ್ತಾರೋ ಅವರಿಗೆ ನೊಬೆಲ್‌ ಶಾಂತಿ ಪುರಸ್ಕಾರ ಸಲ್ಲಬೇಕು; ನನಗಲ್ಲ” ಎಂದು ಇಮ್ರಾನ್‌ ಇಂದು ಸೋಮವಾರ ಬೆಳಗ್ಗೆ ಟ್ವಿಟರ್‌ನಲ್ಲಿ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next