ಬಳ್ಳಾರಿ: ಸಿಎಂ ಬದಲಾವಣೆ ಮತ್ತು ಹೆಚ್ಚುವರಿ ಡಿಸಿಎಂ ಚರ್ಚೆಯಲ್ಲಿ ನಾನಿಲ್ಲ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶನಿವಾರ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ‘ಕಾಂಗ್ರೆಸ್ ಒಂದು ಶಿಸ್ತಿನ ಪಕ್ಷ, ನಾನು ಶಿಸ್ತಿನ ಸಿಪಾಯಿ .ಸಿಎಂ ಬದಲಾವಣೆ ಮತ್ತು ಹೆಚ್ಚುವರಿ ಡಿಸಿಎಂ ಚರ್ಚೆ ವಿಚಾರ ಬಿಟ್ಟು ಬೇರೆ ವಿಚಾರ ಕೇಳಿ ಎಂದು ಜಾರಿಕೊಂಡರು.
ಚುನಾವಣೆ ಬಳಿಕ ಗೃಹಲಕ್ಷ್ಮೀ ಹಣ ಬಾರದಿರೋ ವಿಚಾರಕ್ಕೆ ಪ್ರತಿಕ್ರಿಯಿಸಿ ‘ಮೇ 5ನೇ ತಾರೀಖು ಕೊನೆಯದಾಗಿ ಗೃಹಲಕ್ಷ್ಮಿ ಹಣ ಹಾಕಲಾಗಿದೆ. ಜೂನ್ , ಜುಲೈ ಮಾತ್ರ ಗೃಹಲಕ್ಷ್ಮಿ ಹಣ ಬಂದಿಲ್ಲ. ಅದರೆ ಎಸ್ಸಿ, ಎಸ್ಟಿಗಳಿಗೆ ಬಂದಿದೆ. ಉಳಿದವರಿಗೆ ಶೀಘ್ರದಲ್ಲೇ ಡಿಬಿಟಿ ಮೂಲಕ ಅದನ್ನ ಹಾಕುತ್ತೆವೆ. ಜೂನ್ ತಿಂಗಳದ್ದು ಇನ್ನೇರಡು ದಿನದಲ್ಲಿ ಬರಲಿದೆ. ಜುಲೈ ತಿಂಗಳದ್ದು 15 ನೇ ತಾರೀಖಿನ ನಂತರ ಬರಲಿದೆ’ ಎಂದು ತಿಳಿಸಿದರು.
ಅಂಗನವಾಡಿ ಹೆಸರು ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ ‘ಹೆಸರು ಬದಲಾಯಿಸಲು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಅಂಗನವಾಡಿ ಕೇಂದ್ರ ಮೇಲ್ದರ್ಜೆಗೆರಿಸುವ ಮೂಲಕ ಹೆಸರು ಬದಲಾವಣೆ ಮಾಡುತ್ತೇವೆ. ಅಂಗನವಾಡಿಗಳಲ್ಲಿ ಡಿಗ್ರಿ ಹೋಲ್ಟಡ್ಸ್, ಮಾಸ್ಟರ್ ಡಿಗ್ರಿ ಹೋಲ್ಡಸ್ ಇದ್ದಾರೆ.ಸರ್ಕಾರಿ ಮೌಂಟಸರಿ ಮಾಡಬೇಕು ಅಂತಾ ತೀರ್ಮಾನ ಮಾಡಿದ್ದು, ಸಿಎಂ ಕೂಡ ಬಹಳಷ್ಟು ಸಹಕಾರ ನೀಡುತ್ತಿದ್ದಾರೆ’ ಎಂದರು.
ಎಸ್ಸಿ & ಎಸ್ಟಿ ಮೀಸಲು ಹಣವನ್ನ ಗ್ಯಾರಂಟಿಗೆ ಬಳಕೆ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ ‘ಬಿಜೆಪಿ ಟೀಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. 2013 ರಿಂದಲೂ ಎಸ್ಸಿ, ಎಸ್ಟಿಗಳಿಗೆ ಅತೀ ಹೆಚ್ಚು ಅನುದಾನ ಕೊಟ್ಟಿದ್ದೆ ಸಿದ್ದರಾಮಯ್ಯ ಅವರು. ಆದರೆ, ಬಿಜೆಪಿ ಅವದಿಯಲ್ಲಿ ಅತೀ ಹೆಚ್ಚು ಅನುದಾನ ಕಡಿತವಾಗಿದೆ. ಎಸ್ಸಿ, ಎಸ್ಟಿ ಹಣ ಗ್ಯಾರಂಟಿಗೆ ಹಣ ಬಳಕೆ ಮಾಡುತ್ತೆವೆ ಅಂದರೆ ಅದರಲ್ಲೂ ಎಸ್ಸಿ ಎಸ್ಟಿ ಜನಾಂಗಕ್ಕೆ ಮೊದಲ ಆದ್ಯತೆ ನೀಡಿದ್ದೇವೆ’ ಎಂದರು.
ಮೊಟ್ಟೆ ಗೊಂದಲ ಬಗೆ ಹರಿಸುತ್ತೆವೆ
ಮೊಟ್ಟೆ ವಿತರಣೆ ಹಣ ಸರ್ಕಾರ ನೀಡಲು ವಿಳಂಬವಾಗುವುದಕ್ಕೆ ನಾನಾ ಕಾರಣಗಳಿವೆ. ಮಾರ್ಕೆಟ್ ದರ ಮತ್ತು ಸರ್ಕಾರ ಕೊಡುವ ದರದಲ್ಲಿ ವ್ಯತ್ಯಾಸವಿದೆ.ಇದರಲ್ಲಿ ಸಾಗಾಣಿಕೆ ದರದ ವಿಚಾರ ಸೇರಿಕೊಂಡಿದೆ. ಸ್ವಲ್ಪ ಗೊಂದಲವಿದೆ. ಡಿಡಿ ಮತ್ತು ಸಿಡಿಪಿಓ ಅಧಿಕಾರಿಗಳನ್ನ ಸಭೆ ಕರೆದು ಗೊಂದಲ ಬಗೆ ಹರಿಸುತ್ತೆವೆ ಎಂದರು.
‘ಮಂತ್ರಿಯಾದ ಬಳಿಕ ಬಳ್ಳಾರಿಗೆ ಮೊದಲ ಬಾರಿ ಬಂದಿದ್ದೆನೆ. ಇಲಾಖೆಯಲ್ಲಿ ಅನುದಾನ ಪಡೆದ ಫಲಾನುಭವಿಗಳಿಗೆ ವಿತರಣಾ ಕಾರ್ಯಕ್ರಮಕ್ಕೆ ಬಂದಿದ್ದೇನೆ ಎಂದರು.