Advertisement
ಮಂಗಳವಾರ ಇಲ್ಲಿನ ಯಾತ್ರಿ ಭವನದಲ್ಲಿ ಕರೆಯಲಾಗಿದ್ದ ಅಭಿಮಾನಿಗಳು ಹಾಗೂ ಹಿತೈಷಿಗಳಿಂದ ತುಂಬಿದ್ದ ಸಭೆ ಉದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಆಹ್ವಾನದ ಮೇರೆಗೆ ತಾವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚುನಾವಣೆಯ ಕುರಿತು ಸಿದ್ಧತೆ ಮಾಡಿಕೊಳ್ಳಲು ಅವರಿಂದ ಸೂಚನೆ ಪಡೆದಿದ್ದೇನೆ. ತಾವು 37 ವರ್ಷಗಳಿಂದ ಪಕ್ಷದ ನಾಯಕರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಇಲ್ಲಿನ ಪರಿಸ್ಥಿತಿಯ ವಿಷಯ ತಿಳಿಸಿದ್ದೇನೆ. ಅವರ ಆಶೀರ್ವಾದದೊಡನೆ ಮುಂದಡಿ ಇಟ್ಟಿರುವುದಾಗಿ ಸ್ಪಷ್ಟಪಡಿಸಿದರು.
Related Articles
Advertisement
ತಾಲೂಕು ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಹಾಗೂ ಸ್ಥಳಿಯ ವಕೀಲರ ಸಂಘದ ಅಧ್ಯಕ್ಷ ಬಿ.ರಾಚಪ್ಪ ಮಾತನಾಡಿ, 8 ವರ್ಷಗಳಿಂದ ನಂಜನಗೂಡು ಕ್ಷೇತ್ರಕ್ಕೆ ಗ್ರಹಣ ಹಿಡಿದಿತ್ತು. ಪ್ರಸಾದ್ ಅವರ ರಾಜೀನಾಮೆಯಿಂದಾಗಿ ಅದು ದೂರವಾಗಿದೆ. ಮತ್ತೆ ಗ್ರಹಣ ಹಿಡಿಯಲು ಅವಕಾಶ ನೀಡಬೇಡಿ. ಕೇಶವ ಮೂರ್ತಿಯವರನ್ನು ಗೆಲ್ಲಿಸಿ ಎಂದರು.
ಹೆಡಿಯಾಲದ ಗ್ರಾಪಂ ಮಾಜಿ ಅಧ್ಯಕ್ಷ ಸುಬ್ರಹ್ಮಣಿ, ವಕೀಲ ಮುರುಳಿ, ಜಿಪಂ ಮಾಜಿ ಅಧ್ಯಕ್ಷ ಮಡುವಿನಹಳ್ಳಿ ಶಂಕರಪ್ಪ, ಎನ್.ಶ್ರೀನಿವಾಸ್, ಕೆಂಪರಾಜು, ಸೋಮಣ್ಣ, ಹೊರಳವಾಡಿ ಪರಶಿವ ಮೂರ್ತಿ, ತಾಪಂ ಮಾಜಿ ಸದಸ್ಯೆ ಗೀತಾ ಗೋವಿಂದರಾಜು, ಹಾಡ್ಯ ಶಿವಣ್ಣ. ಶ್ರೀಕಂಠೇಶ್ವರ ದೇವಾಲಯದ ಮಾಜಿ ಕನ್ವೀನರ್ ಕಿಟ್ಟಪ್ಪ, ದೇವರಸನಹಳ್ಳಿ ಸಣ್ಣಪ್ಪ, ಸೌಭಾಗ್ಯ, ರೇಣುಕಾ, ನಂಜನಮ್ಮಣ್ಣಿ, ಗುರುಮಲ್ಲಪ್ಪ, ಬಸವರಾಜು ಹಾಗೂ ನಗರಸಭಾ ಸದಸ್ಯರಾದ ಖಾಲಿದ್, ಮಟನ್ ಬಾಬು, ರಾಮಕೃಷ್ಣ, ರಾಜೇಶ, ದೊಡ್ಡ ಮಾದಯ್ಯ ಇದ್ದರು.
ಸದಸ್ಯನಿಂದಲೇ ನಿರ್ಣಯ ಮಂಡನೆ!ಜೆಡಿಎಸ್ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಎನ್.ಶ್ರೀನಿವಾಸ ಅವರೇ ಕಳಲೆ ಕೇಶವಮೂರ್ತಿ ಅವರನ್ನು ಕಾಂಗ್ರೆಸ್‌ಗೆ ಕಳುಹಿಸಿ ಕೊಡುವ ನಿರ್ಣಯ ಮಂಡಿಸಿದರು. ಆಗ ಸಭೆ ಒಕ್ಕೊರಲಿನಿಂದ ಒಪ್ಪಿಗೆ ಸೂಚಿಸುವುದರೊಂದಿಗೆ ತಾಲೂಕಿನಲ್ಲಿ ಜೆಡಿಎಸ್ ಪಾಲಿಗೆ ಕೊನೆಯ ಮೊಳೆ ಬಿದ್ದಂತಾಯಿತು.