Advertisement

ಆರೋಗ್ಯವಾಗಿದ್ದೇನೆ, ಆತಂಕಪಡಬೇಡಿ 

11:16 PM Feb 24, 2019 | |

ಸೇಡಂ: ತಾಲೂಕಿನ ಯಾನಾಗುಂದಿಯ ಮಾತಾ ಮಾಣಿಕೇಶ್ವರಿ ಅಮ್ಮನವರ ಆರೋಗ್ಯದಲ್ಲಿ ಏರುಪೇರಾದ ಸುದ್ದಿ ಹರಡುತ್ತಿದ್ದಂತೆ, ಖುದ್ದು ದರ್ಶನ ನೀಡಿ ಮಾತನಾಡಿದ ಅಮ್ಮನವರು “ನಾನು ಚೆನ್ನಾಗಿದ್ದೇನೆ, ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

Advertisement

2 ತಿಂಗಳಿಂದ ಗುಹೆಯಿಂದ ಮಾತಾ ಮಾಣಿಕೇಶ್ವರಿ ಅಮ್ಮನವರು ಭಕ್ತರಿಗೆ ದರ್ಶನ ನೀಡಿರಲಿಲ್ಲ. ಅಲ್ಲದೇ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎನ್ನುವ ಮಾತುಗಳು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೇಳಿಬರುತ್ತಿದ್ದವು. ಈ ಕುರಿತು ಸುದ್ದಿ ಹರಡುತ್ತಿದ್ದಂತೆ ಯಾನಾಗುಂದಿ ಮಾಣಿಕ್ಯಗಿರಿಗೆ ದೌಡಾಯಿಸಿದ ಸುದ್ದಿಗಾರರೊಂದಿಗೆ ಮಂಚದ ಮೇಲೆ ಮಲಗಿದ ಸ್ಥಿತಿಯಲ್ಲೇ ಸಣ್ಣ ಧ್ವನಿಯಲ್ಲಿ ಮಾತನಾಡಿದ ಮಾತಾ ಮಾಣಿಕೇಶ್ವರಿ ಅಮ್ಮನವರು, “ನಾನು ಚೆನ್ನಾಗಿದ್ದೇನೆ, ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ. ಎಲ್ಲರಿಗೂ ತಿಳಿಸಿ’ ಎಂದರು.

ಅನುಮಾನ ಮೂಡಿಸಿದ ನಡೆ: ಮಾತಾ ಮಾಣಿಕೇಶ್ವರಿ ಅಮ್ಮನವರ ಆರೋಗ್ಯದಲ್ಲಿ ಏರುಪೇರಾದ ಕುರಿತು ಸುದ್ದಿ ಹಬ್ಬಿತ್ತು. ಈ ಕುರಿತು ಮಾಹಿತಿ ಪಡೆಯಲು ಯಾನಾಗುಂದಿ ಟ್ರಸ್ಟ್‌ ಕಾರ್ಯದರ್ಶಿ ಶಿವಯ್ಯಸ್ವಾಮಿ, ಟ್ರಸ್ಟಿ ಸಿದ್ರಾಮಪ್ಪ ಸಣ್ಣೂರ ಅವರಿಗೆ ಕರೆ ಮಾಡಿದರೆ ಸ್ಪಂದನೆ ಸಿಗಲಿಲ್ಲ. ಅಲ್ಲದೆ ತೆಲಂಗಾಣ, ಆಂಧ್ರದಿಂದ ಅಮ್ಮನವರ ದರ್ಶನಕ್ಕೆ ಬಂದ ಭಕ್ತರಿಗೆ ಸ್ವತಃ ಶಿವಯ್ಯಸ್ವಾಮಿ ಅಮ್ಮನವರ ದರ್ಶನ ಆಗದು ಎಂದು ಹೇಳಿ ಕಳುಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next