Advertisement

MLC Ticket; ಕಾಂಗ್ರೆಸ್ ವರಿಷ್ಠರು ಭರವಸೆ ಈಡೇರಿಸುವ ವಿಶ್ವಾಸವಿದೆ:ಗಣಿಹಾರ

05:35 PM Jun 20, 2024 | Vishnudas Patil |

ವಿಜಯಪುರ : ಭವಿಷ್ಯದಲ್ಲಿ ನಡೆಯುವ ಮೇಲ್ಮನೆ ಚುನಾವಣೆ ವಿಜಯಪುರ ಜಿಲ್ಲೆಯ ಅಹಿಂದ ವರ್ಗಕ್ಕೆ ಆದ್ಯತೆ ನೀಡುವ ಕುರಿತು ಪಕ್ಷದ ವರಿಷ್ಠರು ಭರವಸೆ ನೀಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ ಗಣಿಹಾರ ತಿಳಿಸಿದರು.

Advertisement

ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆಯಿಂದ ಮೇಲ್ಮನೆಗೆ ಈಚೆಗೆ ನಡೆದ ಚುನಾವಣೆ ಸಂದರ್ಭದಲ್ಲೇ ನಾನು ಮೇಲ್ಮನೆ ಟಿಕೆಟ್ ಆಕಾಂಕ್ಷಿಯಾಗಿ, ಅವಕಾಶ ಕೋರಿದ್ದೆ. ಇದಕ್ಖಾಗಿ ಜಿಲ್ಲೆಯ ಸಚಿವರು, ನಮ್ಮ ಪಕ್ಷದ ಶಾಸಕರೆಲ್ಲ ಒಗ್ಗೂಡಿ ವರಿಷ್ಠರಿಗೆ ಮನವಿ ಮಾಡಿದ್ದೆವು ಎಂದರು.

ಅಧಿಕಾರದ ಹಂಚಿಕೆ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಗೆ ಹಾಗೂ ಅಹಿಂದ ವರ್ಷಕ್ಕೆ ಅವಕಾಶ ನೀಡಿಲ್ಲ. ಹೀಗಾಗಿ ನಮಗೆ ಅವಕಾಶ ಕೊಡಿ, ಅಧಿಕಾರ ಹಂಚಿಕೆಯ ಸಾಮಾಜಿಕ ನ್ಯಾಯಕ್ಕಾಗಿ ನಮ್ಮ ಜಿಲ್ಲೆಗೆ ಆದ್ಯತೆ ನೀಡುವಂತೆ ಕೋರಲಾಗಿತ್ತು. ಆದರೆ ನಮ್ಮ ಬೇಡಿಕೆಯ ಮನವಿ ಸಲ್ಲಿಸುವಲ್ಲಿ ತಡವಾಗಿದ್ದಕ್ಕೆ ಅವಕಾಶ ಸಿಗಲಿಲ್ಲ ಎಂದು ವಿವರಿಸಿದರು.

ತಡವಾದರೂ ನಮ್ಮ ಮನವಿಯನ್ನು ಪಕ್ಷದ ಹೈಕಮಾಂಡ್ ಸಮಧಾನದಿಂದ ಆಲಿಸಿದ್ದು, ಭವಿಷ್ಯದಲ್ಲಿ ಮೇಲ್ಮನೆಗೆ ನಡೆಯುವ ಚುನಾವಣೆಯಲ್ಲಿ ನಮ್ಮ ಜಿಲ್ಲೆಯ ಅಹಿಂದ ವರ್ಗಕ್ಕೆ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಪಕ್ಷಕ್ಕಾಗಿ ಕಳೆದ 3-4 ದಶಕಗಳಿಂದ ದುಡಿದಿರುವ ನಾನು ಸಹಜವಾಗಿಯೇ ವಿಧಾನ ಪರಿಷತ್ ಸದಸ್ಯತ್ವದ ಅವಕಾಶ ಪಡೆಯುವ ಅರ್ಹತೆ ಹೊಂದಿದ್ದೇನೆ. ಆದರೆ ಯಾವುದೇ ಕಾರಣಕ್ಕೂ ನಿಗಮ-ಮಂಡಳಿ ಸ್ಥಾನ ಬೇಡ ಎಂದೂ ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದು ವಿವರಿಸಿದರು.

Advertisement

ಮುಂದೆಯೂ ಪಕ್ಷದಲ್ಲಿ ಹಿರಿಯನಾದ ನನಗೆ ಅವಕಾಶ ಸಿಗದಿದ್ದರೂ ಪಕ್ಷ ಕಟ್ಟುವ ಕೆಲಸ ಮಾಡುತ್ತಲೇ ಇರುತ್ತೇನೆ. ಪಕ್ಷ ಕಟ್ಟಿರುವ ನಾನು ಅಧಿಕಾರ ಹಂಚಿಕೆ ಸಂದರ್ಭದಲ್ಲಿ ಅವಕಾಶ ಕೊಡಿ ಎಂದು ಕೇಳುವ ಹಕ್ಕು ಹೊಂದಿದ್ದೇನೆ. ಪಕ್ಷದ ವರಿಷ್ಠರು ನೀಡಿರುವ ಭರವಸೆಯಂತೆ ಅವಕಾಶ ಸಿಗುವ ವಿಶ್ವಾದಲ್ಲಿದ್ದೇನೆ ಎಂದರು.

ಒಂದೊಮ್ಮೆ ಮುಂದೆಯೂ ಪಕ್ಷ ಅವಕಾಶ ನೀಡಿದಿದ್ದರೂ ಪಕ್ಷಕ್ಕಾಗಿಯೇ ದುಡಿಯುವ ಕೆಲಸ ಮಾಡುತ್ತೇನೆ, ಪಕ್ಷಕ್ಕಿಂತ ನಾನು ದೊಡ್ಡವನಲ್ಲ. ಪಕ್ಷ ಬಿಟ್ಟು ಹೋಗುತ್ತೇನೆ, ಅನ್ಯ ಪಕ್ಷ ಸೇರುತ್ತೇನೆ ಎಂದೆಲ್ಲ ಬೆದರಿಕೆ ಹಾಕುವ, ಪಕ್ಷದ ನಾಯಕರನ್ನು ಬ್ಲಾಕ್‍ಮೇಲ್ ಮಾಡುವ ಕೆಲಸ ಮಾಡುವುದಿಲ್ಲ ಎಂದು ಸಮಜಾಯಿಸಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next