Advertisement
ರಾಹುಲ್ ಟ್ವೀಟ್ ನಲ್ಲಿ ಏನಿದೆ?“ಬಿಜೆಪಿಯ ನನ್ನ ಎಲ್ಲಾ ಗೆಳೆಯರೇ, ನಾನು ನರೇಂದ್ರಭಾಯ್ ಹಾಗೆ ಅಲ್ಲ, ನಾನೊಬ್ಬ ಮನುಷ್ಯ. ನಾವು ತಪ್ಪುಗಳನ್ನು ಮಾಡುತ್ತಲೇ ಇರುತ್ತೇವೆ,ಆ ತಪ್ಪುಗಳಿಂದಲೇ ಬದುಕು ಆಸಕ್ತಿದಾಯಕವಾಗಿರುತ್ತದೆ. ನನ್ನ ತಪ್ಪುಗಳನ್ನು ಎತ್ತಿ ತೋರಿಸಿದ್ದೀರಿ ಅದಕ್ಕೆ ಧನ್ಯವಾದಗಳು. ಇನ್ನು ಮುಂದೆಯೂ ನನ್ನ ತಪ್ಪುಗಳನ್ನು ಎತ್ತಿ ತೋರಿಸುವ ಕೆಲಸ ಮುಂದುವರಿಸಿ. ಇದು ನಿಜಕ್ಕೂ ನನಗೆ ತುಂಬಾ ಅನುಕೂಲವಾಗಲಿದೆ. ಲವ್ ಯೂ ಆಲ್”.
ಮಂಗಳವಾರ ಐಎಎಫ್ ಮಾರ್ಷಲ್ ಅರ್ಜನ್ ಸಿಂಗ್ ಅವರ ನಿಧನಕ್ಕೆ ಸಂತಾಪ ಸೂಚಿಸಿ ರಾಹುಲ್ ಟ್ವೀಟ್ ಮಾಡಿದ್ದು ಅದರಲ್ಲಿ ‘ಏರ್ ಮಾರ್ಷಲ್’ ಎಂದು ಬರೆದಿದ್ದರು. ಈ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿತ್ತು. ಯಾರು ಏನೆಂದು ತಿಳಿದು ಟ್ವೀಟ್ ಮಾಡಿ ಎಂದು ಟ್ರೋಲ್ ಮಾಡಿದ್ದರು.