Advertisement

ನಾನು ಬ್ರಿಟನ್‌ ಪ್ರಜೆ ಆದರೆ ಹೆಮ್ಮೆಯ ಹಿಂದೂ

12:05 PM Oct 25, 2022 | Team Udayavani |

2020ರಲ್ಲಿ ಇಂಗ್ಲೆಂಡ್‌ ಹಣಕಾಸು ಸಚಿವರಾಗಿದ್ದ ರಿಷಿ ಸುನಕ್‌ ಅವರು ಹೌಸ್‌ ಆಫ್ ಕಾಮನ್ಸ್‌ನಲ್ಲಿ ಭಗವದ್ಗೀತೆಯ ಮೇಲೆ ಕೈಯಿಟ್ಟು ಪ್ರಮಾಣ ವಚನ ಸೀಕರಿಸಿದ್ದರು. ಈ ವೇಳೆ ಅವರು ನಾನು ಈಗ ಬ್ರಿಟನ್‌ ಪ್ರಜೆ ಆದರೆ ನಾನೊಬ್ಬ ಹಿಂದೂ ಇದು ನನ್ನ ಧರ್ಮ, ಭಾರತ ನನ್ನ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ದ್ಯೋತಕವಾಗಿದೆ. ಹಿಂದೂ ಎಂಬುದೇ ನನ್ನ ಗುರುತು ಎಂದು ಹೇಳಬಲ್ಲೆ. ನನ್ನ ಕಚೇರಿಯ ಮೇಜಿನ ಮೇಲೆ ಗಣೇಶನ ಪ್ರತಿಮೆ ಹೊಂದಿರುವೆ ಎಂದು ಬ್ರಿಟಿಷ್‌ ಪತ್ರಿಕೆಯೊಂದರ ಪ್ರಶ್ನೆಗೆ ಮುಕ್ತವಾಗಿ ಉತ್ತರಿಸಿದ್ದರು. ಈ ಕುರಿತು ಟ್ವೀಟ್‌ ಕೂಡ ಮಾಡಿದ್ದರು.

Advertisement

ಗೋಪೂಜೆ ಮಾಡಿದ ಸುನಕ್‌: ಬ್ರಿಟನ್‌ ಪ್ರಧಾನಿ ಅಭ್ಯರ್ಥಿಯಾಗಿದ್ದ ವೇಳೆಯಲ್ಲಿ ರಿಷಿ ಸುನಕ್‌ 2022 ಆಗಸ್ಟ್‌ 25ರಂದು ಲಂಡನ್‌ನಲ್ಲಿ ತಮ್ಮ ಪತ್ನಿ ಅಕ್ಷತಾ ಮೂರ್ತಿ ಅವರೊಂದಿಗೆ ಗೋಪೂಜೆ ಮಾಡಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ಗೋವನ್ನು ಪವಿತ್ರ ಜಲದಿಂದ ಪಾದವನ್ನು ತೊಳೆದು ಕೈಯಲ್ಲಿ ಹಿತ್ತಾಳೆ ಪಾತ್ರೆ ಹಿಡಿದ ಸುನಕ್‌ ಪೂಜಾ ಕೈಂಕರ್ಯ ನೆರವೇರಿಸಿದ್ದರು. ಪುರೋಹಿತರೊಬ್ಬರು ಪೂಜಾ ವಿಧಿವಿಧಾನವನ್ನು ಸುನಕ್‌ ದಂಪತಿಗಳಿಗೆ ವಿವರಿಸಿ ಹೇಳಿದ ವೀಡಿಯೋ ಚರ್ಚೆಗೆ ಕಾರಣವಾಗಿತ್ತು. ಸುನಕ್‌ ಅವರು ಹಸುವಿನ ಬಗೆಗಿನ ಅಭಿಮಾನ, ಗೋಹತ್ಯೆ ನಿಷೇಧ, ಗೋಮಾಂಸ ಭಕ್ಷಣೆ ವಿರುದ್ಧದ ನಿರ್ಧಾರಗಳನ್ನು ಹಲವು ಬಾರಿ ಸ್ಪಷ್ಟಪಡಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next