Advertisement

ನಾನು ಯಾವಾಗಲೂ ದೇವಸ್ಥಾನಗಳಿಗೆ ಹೋಗಲು ಬಯಸುತ್ತೇನೆ : ಪ್ರಧಾನಿ ಮೋದಿ

02:38 PM Mar 27, 2021 | Team Udayavani |

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸದ್ಯ ಬಾಂಗ್ಲಾದೇಶದ ಪ್ರವಾಸದಲ್ಲಿದ್ದಾರೆ. ಇದೇ ವೇಳೆ ಒರಕಂಡಿಯಲ್ಲಿರುವಮಟುವಾ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ಪ್ರದೇಶವು ಮಟುವಾ ಜನಾಂಗಕ್ಕೆ ಬಹಳ ಪ್ರಮುಖವಾದ ಸ್ಥಳ. ಇದು ಮಟುವಾ ಜನಾಂಗದ ಧಾರ್ಮಿಕ ಗುರು ಮತ್ತು ಹಿಂದು ಆಧ್ಯಾತ್ಮಿಕ ಗುರು ಹರಿಚಂದ್ ಠಾಕೂರ್ ಜನ್ಮ ಸ್ಥಳವಾಗಿದೆ.

Advertisement

ದೇವಸ್ಥಾನಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಮೋದಿ, ನಾನು ಯಾವಾಗಲೂ ದೇವಾಲಯಗಳಿಗೆ ಹೋಗುವುದಕ್ಕೆ ಬಯಸುತ್ತೇನೆ ಎಂದಿದ್ದಾರೆ. 2015ರಲ್ಲಿ ನಾನು ಬಾಂಗ್ಲಾದೇಶಕ್ಕೆ ಬಂದಾಗ ಮಟುವಾ ದೇವಾಲಯಕ್ಕೆ ಹೋಗಬೇಕೆಂದು ಬಯಸಿದ್ದೆ. ಅದು ಇಂದು ನನಸಾಗಿದೆ ಎಂದಿದ್ದಾರೆ. ಇಲ್ಲಿನ ಒರಕಂಡಿ ಪ್ರದೇಶದಲ್ಲಿ ನೂರಾರು ಹಿಂದೂ ಮಟುವಾ ಸಮುದಾಯದವರಿದ್ದಾರೆ, ಅದರಲ್ಲಿ ಹೆಚ್ಚಿನವರು ಪಶ್ಚಿಮ ಬಂಗಾಳದ ನಿವಾಸಿಗಳು ಇದ್ದಾರೆ ಎಂದು ಮೋದಿ ಹೇಳಿದ್ದಾರೆ.

ಇಂದು ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಮೊದಲ ಹಂತದ ಚುನಾವಣೆ ಪ್ರಾರಂಭವಾಗಿದ್ದು, ಇದೇ ಹಿನ್ನೆಲೆಯಲ್ಲಿಯೇ ಬಾಂಗ್ಲಾದೇಶದ ಮಟುವಾ ಸಮುದಾಯವನ್ನು ಭೇಟಿ ಮಾಡಿರುವ ಮೋದಿ, ಮತ ಸೆಳೆಯುವ ತಂತ್ರ ಇದ್ದರೂ ಇರಬಹುದು ಎಂದು ರಾಜಕೀಯ ತಜ್ಙರು ಅಭಿಪ್ರಾಯ ಪಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next