Advertisement

ತೈವಾನ್‌ ಅಧ್ಯಕ್ಷೆ ಇಂಗ್ವಿನ್‌ಗೆ ಚನ ಮಸಾಲಾ, ನಾನ್‌ ಇಷ್ಟವಂತೆ

01:24 AM Oct 17, 2020 | mahesh |

ಹೊಸದಿಲ್ಲಿ: “ನನಗೆ ಚನ ಮಸಾಲಾ ಮತ್ತು ನಾನ್‌ ಇಷ್ಟ. ಅದನ್ನೇ ಯಾವತ್ತೂ ಬಯಸುತ್ತೇನೆ’ ಎಂದು ತೈವಾನ್‌ ಅಧ್ಯಕ್ಷೆ ಸೈ ಇಂಗ್ವೆನ್‌ ಟ್ವೀಟ್‌ ಮಾಡಿದ್ದಾರೆ. ಜತೆಗೆ ಅನ್ನ, ನಾನ್‌, ಸಲಾಡ್‌ ಮತ್ತು ಇತರ ರುಚಿಕರ ತಿನಿಸುಗಳಿಂದ ತುಂಬಿರುವ ಫೋಟೋ ಟ್ವೀಟ್‌ ಮಾಡಿದ್ದಾರೆ.

Advertisement

ಭಾರತದ ಆಹಾರ ಪದ್ಧತಿಯ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡುವ ಅಧ್ಯಕ್ಷೆ ಇಂಗ್ವಿನ್‌ ಪೂರ್ವ ಏಷ್ಯಾ ರಾಷ್ಟ್ರವಾಗಿರುವ ತೈವಾನ್‌ನಲ್ಲಿ ಭಾರತೀಯ ರೆಸ್ಟೊರೆಂಟ್‌ಗಳು ಇರುವುದು ಅದೃಷ್ಟದ ವಿಚಾರ. ನಮ್ಮ ದೇಶದ ಜನರು ಅವುಗಳನ್ನು ಇಷ್ಟ ಪಡುತ್ತಾರೆ ಎಂದು ಟ್ವೀಟ್‌ ಮಾಡಿದ್ದಾರೆ.

ಚನ ಮಸಾಲಾ, ನಾನ್‌ ಇಷ್ಟ. ಅದನ್ನು ನೋಡಿದಾಕ್ಷಣ ಭಾರತ ಭೇಟಿಯ ನೆನಪು ಬರುತ್ತದೆ ಎಂದಿದ್ದಾರೆ. ಇತ್ತೀಚೆಗಷ್ಟೇ ಭಾರತದ ಮಾಧ್ಯಮಗಳಲ್ಲಿ ತೈವಾನ್‌ನ ರಾಷ್ಟ್ರೀಯ ದಿನ ಪ್ರಯುಕ್ತ ಹಲವು ಜಾಹೀರಾತು ಪ್ರಕಟವಾಗಿದ್ದಕ್ಕೆ ಚೀನ ರಾಯಭಾರ ಕಚೇರಿ ಆಕ್ಷೇಪಿಸಿದ್ದಾಗ ಅಲ್ಲಿನ ಸರಕಾರ “ಗೆಟ್‌ಲಾಸ್ಟ್‌’ ಎಂದು ತಿರುಗೇಟು ನೀಡಿತ್ತು. ಮೇ ನಲ್ಲಿ ಆಸೀಸ್‌ ಪ್ರಧಾನಿ ಸ್ಕಾಟ್‌ ಮಾರಿಸನ್‌ ಕೂಡ ಸಮೋಸ ತಮಗೆ ಇಷ್ಟವೆಂದು ಟ್ವೀಟ್‌ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next