Advertisement

ಹ್ಯುಂಡೈ ವರ್ನಾಗೆ ಇಂಡಿಯನ್‌ ಕಾರ್‌ ಆಫ್‌ ದಿ ಈಯರ್‌ ಪ್ರಶಸ್ತಿ

04:17 PM Dec 16, 2017 | |

ನವದೆಹಲಿ: ಪ್ರಮುಖ ಕಾರು ತಯಾರಕ ಸಂಸ್ಥೆ ಹ್ಯುಂಡೈ ಮೋಟರ್‌ ಇಂಡಿಯಾ ಲಿ., (ಎಚ್‌ಎಂಐಎಲ್‌)ನ ನೆಕ್ಸ್‌ಟ್‌ ಜೆನ್‌ ವರ್ನಾ “2018ರ ಇಂಡಿಯನ್‌ ಕಾರ್‌ ಆಫ್‌ ದಿ ಈಯರ್‌’ (ಐಸಿಒಟಿವೈ) ಪ್ರಶಸ್ತಿಗೆ ಭಾಜನವಾಗಿದೆ.

Advertisement

ಸತತವಾಗಿ 5 ಬಾರಿ ಐಸಿಒಟಿವೈ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡು ಸಾಧನೆ ಮೆರೆದಿರುವ ಹ್ಯುಂಡೈ ಸಂಸ್ಥೆ 2008, 2014, 2015, 2016 ಮತ್ತು 2018ರ ಪ್ರಶಸ್ತಿಯನ್ನು ಅನುಕ್ರಮವಾಗಿ ವರ್ನಾ, ಕ್ರೆಟಾ, ಎಲೈಟ್‌ ಐ20, ಗ್ರಾಂಡ್‌ ಐ10 ಹಾಗೂ ಐ10 ಕಾರುಗಳು ಪಡೆದಿವೆ.

ಗುರುವಾರ ದೆಹಲಿಯಲ್ಲಿ ಪ್ರಶಸ್ತಿ ಸೀಕರಿಸಿ ಮಾತನಾಡಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ವೈ.ಕೆ. ಕೂ, ಆಟೋಮೊಟಿವ್‌ ಕ್ಷೇತ್ರದ ಪ್ರತಿಷ್ಠಿತ ಐಸಿಒಟಿವೈ ಪ್ರಶಸ್ತಿಯನ್ನು ನಮ್ಮ ಸಂಸ್ಥೆಯ ಕಾರುಗಳು ಗೆಲ್ಲುತ್ತಿರುವುದು ಅತೀವ ಸಂತಸ ಹಾಗೂ ಗೌರವ ತಂದಿದೆ.

ಮೇಕ್‌ ಇನ್‌ ಇಂಡಿಯಾ ಯೋಜನೆಯಡಿ ಮೇಡ್‌ ಫಾರ್‌ ದಿ ವರ್ಲ್ಡ್ ಉತ್ಪನ್ನವಾಗಿ ನೆಕ್ಟ್ ಜೆನ್‌ ವರ್ನ ಹೊರಹೊಮ್ಮಿರುವುದು ಹಾಗೂ ಸೆಡಾನ್‌ ಕಾರುಗಳಲ್ಲಿ ತಂತ್ರಜ್ಞಾನ, ಗುಣಮಟ್ಟ ಜನರ ಮೆಚ್ಚುಗೆ ಗಳಿಸಿರುವುದು ಶ್ಲಾಘನೀಯ ಎಂದರು.

ಜೆಕೆ ಟೈರ್‌ ಮತ್ತು ಇಂಡಸ್ಟ್ರೀಸ್‌ ಲಿ., ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ರಘುಪತಿ ಸಿಂಘಾನಿಯ ಅವರು ಹ್ಯುಂಡೈ ವರ್ನದ ತಾಂತ್ರಿಕ, ವಿನ್ಯಾಸ, ಕಾಸ್ಟ್‌ ಎಫೆಕ್ಟಿವ್‌ನೆಸ್‌, ಸ್ಥಳೀಯ ಸ್ಥಿತಿಗತಿಗಳಿಗೆ ಹೊಂದಿಕೊಳ್ಳುವಿಕೆ ಗ್ರಾಹಕರಿಗೆ ಸಂತೃಪ್ತಿ ತಂದಿವೆ.

Advertisement

ಆದ್ದರಿಂದ ಐದು ಬಾರಿ ಬೇರೆ ಬೇರೆ ಸಂಸ್ಥೆಯ ಕಾರುಗಳು ಐಎಂಒಟಿವೈ ಪ್ರಶಸ್ತಿಗೆ ಭಾಜನವಾಗಿವೆ. ಅಲ್ಲದೆ, ಆಟೋಮೊಬೈಲ್‌ ಉದ್ಯಮದಲ್ಲಿ ಐಸಿಒಟಿವೈ ಹಾಗೂ ಇಂಡಿಯನ್‌ ಮೋಟರ್‌ ಆಫ್‌ ದಿ ಯಿಯರ್‌ (ಐಎಂಒಟಿವೈ) ಎರಡೂ ಸಮನಾರ್ಥವಾಗಿದ್ದು ವರ್ನ 2018ರ ಐಸಿಒಟಿವೈ ಪ್ರಶಸ್ತಿ ಪಡೆದಿರುವುದು ಸಂತಸ ತಂದಿದೆ ಎಂದರು.

ಈ ಸಂದರ್ಭದಲ್ಲಿ ಐಸಿಒಟಿವೈ ಸಂಸ್ಥಾಪಕ ಸದಸ್ಯ ಮತ್ತು ತೀರ್ಪುಗಾರರ ಮಂಡಳಿ ಅಧ್ಯಕ್ಷ ಬಾಬ್‌ ರುಪಾನಿ, ಆಟೋ ಟುಡೆ ಸಂಪಾದಕ ಯೋಗೆಂದ್ರ ಪ್ರತಾಪ್‌, ಹೆಚ್‌ಎಂಐಎಲ್‌ ಇಡಿ (ಮಾರಾಟ) ಎಸ್‌.ಜೆ. ಹ, ನಿರ್ದೇಶಕ (ಮಾರುಕಟ್ಟೆ) ರಾಕೇಶ್‌ ಶ್ರೀವಾಸ್ತವ ಹಾಗೂ ತೀರ್ಪುಗಾರರ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next