Advertisement

ಹೈಡ್ರಾಕ್ಸಿಕ್ಲೋರೋಕ್ವಿನ್‌ ನಿಷ್ಪ್ರಯೋಜಕ ಎಂದ ಇಂಗ್ಲಂಡ್‌!

04:57 PM Jun 07, 2020 | sudhir |

ಲಂಡನ್‌: ಮಲೇರಿಯಾ ವಿರುದ್ಧ ಬಳಸುತ್ತಿದ್ದ ಹೈಡ್ರಾಕ್ಸಿಕ್ಲೋರೋಕ್ವಿನ್‌ ಔಷಧವು ಕೋವಿಡ್ ಚಿಕಿತ್ಸೆಗೆ ಗೇಮ್‌ ಚೇಂಜರ್‌ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ ಬಳಿಕ ಇದಕ್ಕೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಬಂದಿದೆ. ಆದರೆ ಈಗ ಪರಿಸ್ಥಿತಿ ಬದ ಲಾಗಿದ್ದು, ಈ ಔಷಧವು ಕೋವಿಡ್ ರೋಗಕ್ಕೆ ಪರಿಣಾಮಕಾರಿಯಾಗಿಲ್ಲ ಮತ್ತು ಕೊರೊನಾ ವಿರುದ್ಧದ ಚಿಕಿತ್ಸೆಗೆ ಪ್ರಯೋಜನವಾಗದು ಎಂದು ಅದರ ಬಳಕೆಯನ್ನು ಇಂಗ್ಲಂಡ್‌ ನಿಲ್ಲಿಸಿದೆ.

Advertisement

ಇದು ಕೋವಿಡ್‌ -19ಗೆ ಚಿಕಿತ್ಸೆಯಲ್ಲ. ಇದು ಕೋವಿಡ್ ವೈರಸ್‌ ವಿರುದ್ಧ ಕೆಲಸ ಮಾಡುವುದಿಲ್ಲ ಎಂದು ಇದರ ಬಗ್ಗೆ ಚೇತರಿಕೆ ಪ್ರಯೋಗ ಸಂಶೋಧನೆ ನಡೆಸುತ್ತಿರುವ ಆಕ್ಸ್‌ಫ‌ರ್ಡ್‌ ವಿಶ್ವವಿದ್ಯಾಲಯದ ಪ್ರೊಫೆಸರ್‌ ಮಾರ್ಟಿನ್‌ ಲಾಂಡ್ರೆ ಅವರು ಪತ್ರಕರ್ತರಿಗೆ ತಿಳಿಸಿದ್ದಾರೆ.
ನಮ್ಮ ಪ್ರಯೋಗದಿಂದ ಈ ಔಷಧವು ಕೋವಿಡ್ ಚಿಕಿತ್ಸೆಗೆ ನಿಷ್ಪ್ರಯೋಜಕ ಎಂದು ತಿಳಿದ ಬಳಿಕ ವಿಶ್ವಾದ್ಯಂತ ಇದರ ಬಳಕೆಯನ್ನು ನಿಲ್ಲಿಸಬಹುದು ಹಾಗೂ ಚಿಕಿತ್ಸೆಯ ವಿಧಾನದಲ್ಲಿ ಹೊಸ ಬದಲಾವಣೆ ಉಂಟಾಗಬಹುದು ಎಂದಿದ್ದಾರೆ.

ವಿಶ್ವಾದ್ಯಂತ ಸುಮಾರು 6.4 ದಶಲಕ್ಷಕ್ಕೂ ಹೆಚ್ಚು ಮಂದಿಗೆ ಸೋಂಕು ತಗಲಿ, ಸುಮಾರು 4,00,000 ಜನರ ಸಾವಿಗೆ ಕಾರಣ ವಾಗಿರುವ ಕೊರೊನಾ ವಿರುದ್ಧ ಹೋರಾಡಲು ಹೈಡ್ರಾಕ್ಸಿಕ್ಲೋರೋಕ್ವಿನ್‌ ಶಕ್ತವಾದರೆ ಅದು ಅಗ್ಗದ ಮತ್ತು ವ್ಯಾಪಕವಾಗಿ ಲಭ್ಯ ವಿರುವ ಔಷಧವಾಗಬಹುದು ಎಂದು ಟ್ರಂಪ್‌ ನೀಡಿದ ಬೆಂಬಲವು ಈ ಔಷಧಕ್ಕೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಹೆಚ್ಚಿಸಿತ್ತು.

ಕಳೆದ ತಿಂಗಳಿನ ವೈದ್ಯಕೀಯ ಜರ್ನಲ್‌ ದಿ ಲ್ಯಾನ್ಸೆಟ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿಯಲ್ಲಿ ಈ ಔಷಧದ ಪರಿಣಾಮದ ಬಗ್ಗೆ ಸಂಶಯ ಮೂಡಿದೆ ಹಾಗೂ ಅದರ ದತ್ತಾಂಶ ಬಗ್ಗೆ ಖಚಿತತೆ ಇಲ್ಲ ಎಂದು ಹೇಳಿದ ಬಳಿಕ ಈ ಔಷಧದ ಕೋವಿಡ್‌ – 19 ಅಧ್ಯಯನವನ್ನು ನಿಲ್ಲಿಸಲಾಯಿತು. ಇಂಗ್ಲಂಡ್‌ನ‌ಲ್ಲಿ ಈ ಔಷಧವನ್ನು ಬಳಸುವುದನ್ನೂ ಸ್ಥಗಿತಗೊಳಿಸಲಾಯಿತು.

ಆಕ್ಸ್‌ಫ‌ರ್ಡ್‌ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗ ಶಾಸ್ತ್ರದ ಪ್ರೊಫೆಸರ್‌ ಲಾಂಡ್ರಿ ಅವರು , ಈ ಔಷಧವು ಕೋವಿಡ್‌ 19 ಚಿಕಿತ್ಸೆಗೆ ಬಳಕೆಯಾಗುತ್ತಿರುವ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ ಮತ್ತು ಸಾಕಷ್ಟು ಪ್ರಯೋಗ ನಡೆಸಿದರೂ ವಿಶ್ವಾಸಾರ್ಹ ಮಾಹಿತಿ ಸಿಕ್ಕಿಲ್ಲ ಎಂದು ಹೇಳಿದ್ದಾರೆ. ರ್‍ಯಾಂಡಂ ಆಗಿ ಈ ಔಷಧದ ಪ್ರಾಥಮಿಕ ಪರೀಕ್ಷೆಯ ವರದಿಯು ಕೋವಿಡ್ ಗುಣಪಡಿಸಲು ಪೂರಕವಾಗಿ ಕಂಡು ಬಂದಿಲ್ಲ. ಆಸ್ಪತ್ರೆಗೆ ದಾಖಲಾಗಿರುವ ಕೋವಿಡ್ ರೋಗಿಗಳ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಲು ಇದು ಶಕ್ತವಾಗಿಲ್ಲ ಎಂದು ಅವರು ಹೇಳಿದ್ದಾರೆ. ಒಂದೊಮ್ಮೆ ನೀವು ಆಸ್ಪತ್ರೆಗೆ ದಾಖಲಾಗಿದ್ದರೆ ಹೈಡ್ರಾಕ್ಸಿಕ್ಲೋರೋಕ್ವಿನ್‌ ಔಷಧ ತೆಗೆದುಕೊಳ್ಳಬೇಡಿ ಎಂದಿದ್ದಾರೆ.

Advertisement

ಹೈಡ್ರಾಕ್ಸಿಕ್ಲೋರೋಕ್ವಿನ್‌ ಅನ್ನು ಬಳಸಿದ ಸುಮಾರು 1,542 ಕೊರೊನಾ ರೋಗಿಗಳನ್ನು ಈ ಔಷಧವನ್ನು ಬಳಸದ 3,132 ರೋಗಿಗಳೊಂದಿಗೆ ಹೋಲಿಕೆ ಮಾಡಿ ನೋಡಿದಾಗ 28 ದಿನಗಳಲ್ಲಿ ಸಾವಿನ ಪ್ರಮಾಣದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ ಎಂದು ವಿಜ್ಞಾನಿಗಳು ತಿಳಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next