Advertisement

ಈಗ ರೈಲೂ ಪರಿಸರ ಸ್ನೇಹಿ

05:13 PM Sep 19, 2018 | |

ಹೊಸದಿಲ್ಲಿ: ಜಾಗತಿಕ ತಾಪಮಾನ, ಪರಿಸರ ಮಾಲಿನ್ಯ ತಗ್ಗಿಸಲು ವಿಶ್ವದೆಲ್ಲೆಡೆ ಪರಿ ಸರಸ್ನೇಹಿ ವಾಹನಗಳ ತಯಾರಿಕೆಗೆ ಈಗಾಗಲೇ ವ್ಯಾಪಕ ಪ್ರಯತ್ನಗಳು ಆರಂಭವಾಗಿವೆ. ಈ ಹಿನ್ನೆಲೆಯಲ್ಲಿ, ಫ್ರಾನ್ಸ್‌ನ “ಆಲ್‌ಸ್ಟಾಮ್‌’ ಎಂಬ ಕಂಪೆನಿ ಜಲಜನಕ ಆಧಾರಿತ ರೈಲನ್ನು ತಯಾರಿಸಿ ಗಮನ ಸೆಳೆದಿದೆ. 

Advertisement

ಜಲಜನಕ ಅಣುಗಳ ರಾಸಾಯನಿಕ ಕ್ರಿಯೆಯಿಂದ ಉತ್ಪತ್ತಿಯಾಗುವ ವಿದ್ಯುತ್ಛಕ್ತಿ ಯಿಂದ ರೈಲು ಓಡುತ್ತದೆ. ಅಲ್ಲದೆ, ಹೆಚ್ಚುವರಿ ವಿದ್ಯುತ್ತನ್ನು ರೈಲಿನಲ್ಲೇ ಇರುವ ರೀಚಾರ್ಜ್‌ ಮಾಡಬಹುದಾದ ಲೀಥಿಯಂ ಅಯಾನ್‌ ಬ್ಯಾಟರಿಗಳ ಸಮೂಹದಲ್ಲಿ ಸಂಗ್ರಹಿ ಸಿ ಡುವ ಅವಕಾಶವಿದೆ. ಒಂದು ಬಾರಿಯ ಜಲಜನಕ ಪೂರೈಕೆಯಿಂದ ಈ ರೈಲು 1,000 ಕಿ.ಮೀ.ವರೆಗೆ ಚಲಿಸುತ್ತದೆ ಹಾಗೂ ಇದರ ಬಾಳಿಕೆ ಡೀಸೆಲ್‌ ರೈಲಿನ ಬಾಳಿಕೆಗೆ ಸಮಾನ ಎಂದು ಕಂಪೆನಿ ಹೇಳಿಕೊಂಡಿದೆ. 

ರವಿವಾರವಷ್ಟೇ ಈ ರೈಲು ಜರ್ಮನಿ ಯಲ್ಲಿ ಮೊದಲ ಬಾರಿಗೆ ಯಶಸ್ವಿಯಾಗಿ ಸಂಚರಿಸಿ ಗಮನ ಸೆಳೆದಿದೆ. ಈ ರೈಲು ಗಂಟೆಗೆ 140 ಕಿ.ಮೀ. ವೇಗದಲ್ಲಿ ಚಲಿಸುತ್ತದೆ. ಅಂದಹಾಗೆ, ಈ ರೈಲಿನ ಬೆಲೆ 50 ಕೋಟಿ ರೂ.!

1,000 ಕಿ.ಮೀ. ಒಮ್ಮೆ ಇಂಧನ ಟ್ಯಾಂಕ್‌ ಭರ್ತಿಯಿಂದ  ಪ್ರಯಾಣ ಸಾಧ್ಯ
ಹೆಚ್ಚುವರಿ ವಿದ್ಯುತ್‌ ಸಂಗ್ರಹಕ್ಕೆ ಲೀಥಿಯಂ ಅಯಾನ್‌ ಬ್ಯಾಟರಿ 

 

Advertisement

Udayavani is now on Telegram. Click here to join our channel and stay updated with the latest news.

Next