Advertisement

ಪಂಜಾಬ್ ವಿರುದ್ಧ ಟಾಸ್ ಗೆದ್ದ ಹೈದರಾಬಾದ್ ಬ್ಯಾಟಿಂಗ್ ಆಯ್ಕೆ: ಗೆಲುವು ಯಾರಿಗೆ ಒಲಿಯಲಿದೆ ?

08:41 PM Oct 12, 2020 | Mithun PG |

ದುಬೈ: ಐಪಿಎಲ್ ನ 13ನೇ ಆವೃತ್ತಿಯ 22ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ಕಾದಾಡುತ್ತಿದ್ದು, ಟಾಸ್ ಗೆದ್ದ   ವಾರ್ನರ್ ಬಳಗ ಬ್ಯಾಟಿಂಗ್  ಆಯ್ದುಕೊಂಡಿದೆ.

Advertisement

ಇಂದಿನ ಪಂದ್ಯ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿದ್ದು, ಈ ಆವೃತ್ತಿಯಲ್ಲಿ ಆಡಿರುವ 5 ಪಂದ್ಯಗಳಲ್ಲಿ ಕೇವಲ 1 ರಲ್ಲಿ ಜಯಗಳಿಸಿರುವ ಪಂಜಾಬ್ ಮತ್ತು 2ರಲ್ಲಿ ಗೆಲುವು ಪಡೆದಿರುವ ಹೈದರಾಬಾದ್ ಮುಖಾಮುಖಿಯಾಗುತ್ತಿದೆ. ಇತ್ತಂಡಗಳು ಒಟ್ಟು 14 ಬಾರಿ ಎದುರುಬದುರಾಗಿದ್ದು ಪಂಜಾಬ್ 4ರಲ್ಲಿ ಮತ್ತು ಹೈದರಾಬಾದ್ 10ರಲ್ಲಿ ಗೆಲವಿನ ನಗೆ ಬೀರಿದೆ.

ಪಂಜಾಬ್ ತಂಡ ಅಧ್ಭುತ ಬ್ಯಾಟಿಂಗ್ ಪಡೆಯನ್ನು ಹೊಂದಿದ್ದು, ಬೌಲಿಂಗ್ ಮಾತ್ರ ವಿಫಲವಾಗುತ್ತಿದೆ. ಶಮಿ ಸೇರಿದಂತೆ ಪ್ರಮುಖ ಬೌಲರ್ ಗಳು ಡೆತ್ ಓವರ್ ಗಳಲ್ಲಿ ದುಬಾರಿಯಾಗುತ್ತಿದ್ದಾರೆ.

ಹೈದರಾಬಾದ್ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ಸುಧಾರಿಸಿದೆ. ಆಲ್ ರೌಂಡರ್ ಕೊರತೆ ಎದ್ದು ಕಾಣುತ್ತಿದೆ. ಭುವನೇಶ್ವರ್  ಕುಮಾರ್ ಅಲಭ್ಯತೆ ತಂಡಕ್ಕೆ ದೊಡ್ಡ ಹೊಡೆತ ನೀಡಿದೆ.

ಇದನ್ನೂ ಓದಿ: ಕೆ.ಕಲ್ಯಾಣ್ ಜೀವನದಲ್ಲಿ ಮತ್ತೆ ಅರಳಿದ ಪ್ರೇಮರಾಗ: ಮೋಸ ಮಾಡಿದ ಆರೋಪಿ ಸೆರೆ

Advertisement

ದುಬೈ ಪಿಚ್ ಸಮತೋಲನದಿಂದ ಕೂಡಿದ್ದು ಆರಂಭದಲ್ಲಿ ವೇಗಿಗಳಿಗೆ ಹೆಚ್ಚು ನೆರವು ನೀಡುತ್ತದೆ. ಸಮಯ ಕಳದಂತೆ ಸ್ಪಿನ್ನರ್  ಗಳಿಗೆ ನೆರವಾಗಲಿದೆ.

ಆಡುವ ಹನ್ನೊಂದರ ಬಳಗ:

ಸನ್‌ರೈಸರ್ಸ್ ಹೈದರಾಬಾದ್ : ಡೇವಿಡ್ ವಾರ್ನರ್ (ನಾಯಕ), ಜಾನಿ ಬೈರ್‌ಸ್ಟೋವ್ , ಮನೀಶ್ ಪಾಂಡೆ, ಕೇನ್ ವಿಲಿಯಮ್ಸನ್, ಪ್ರಿಯಮ್ ಗಾರ್ಗ್, ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್, ರಶೀದ್ ಖಾನ್, ಸಂದೀಪ್ ಶರ್ಮಾ, ಕೆ ಖಲೀಲ್ ಅಹ್ಮದ್, ಟಿ ನಟರಾಜನ್

ಕಿಂಗ್ಸ್ ಇಲೆವೆನ್ ಪಂಜಾಬ್ : ಕೆ.ಎಲ್. ರಾಹುಲ್ (ನಾಯಕ), ಮಾಯಾಂಕ್ ಅಗರ್ವಾಲ್, ಮಂದೀಪ್ ಸಿಂಗ್, ನಿಕೋಲಸ್ ಪೂರನ್, ಸಿಮ್ರಾನ್ ಸಿಂಗ್, ಗ್ಲೆನ್ ಮ್ಯಾಕ್ಸ್ ವೆಲ್, ರವಿ ಬಿಷ್ಣೋಯ್, ಹರ್ಷ್‌ದೀಪ್ ಸಿಂಗ್, ಮುಜೀಬ್ ಉರ್ ರಹಮಾನ್, ಮೊಹಮ್ಮದ್ ಶಮಿ, ಶೆಲ್ಡನ್ ಕಾಟ್ರೆಲ್

ಇದನ್ನೂ ಓದಿ: ಸ್ಟಾಕ್ ಹೋಮ್: ಅಮೆರಿಕದ ಕವಯತ್ರಿಗೆ ಪ್ರತಿಷ್ಠಿತ ನೊಬೆಲ್ ಸಾಹಿತ್ಯ ಪ್ರಶಸ್ತಿ

Advertisement

Udayavani is now on Telegram. Click here to join our channel and stay updated with the latest news.

Next