Advertisement

ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿ ಮೇಲೆ ಹಲ್ಲೆ… ವಿದೇಶಾಂಗ ಸಚಿವರಲ್ಲಿ ಸಹಾಯ ಕೋರಿದ ಪತ್ನಿ

10:01 AM Feb 07, 2024 | Team Udayavani |

ವಾಷಿಂಗ್ಟನ್‌: ಇತ್ತೀಚಿನ ದಿನಗಳಲ್ಲಿ ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸುವ ಘಟನೆಗಳು ಹೆಚ್ಚಾಗಿ ನಡೆಯುತ್ತಿವೆ ಅದರಂತೆ ಹೈದರಾಬಾದ್ ಮೂಲದ ವಿದ್ಯಾರ್ಥಿಯೋರ್ವನ ಮೇಲೆ ದುಷ್ಕರ್ಮಿಗಳ ತಂಡವೊಂದು ಹಲ್ಲೆ ನಡೆಸಿ ದೋಚಿದ ಘಟನೆ ಕಳೆದ ಭಾನುವಾರ ನಡೆದಿದೆ.

Advertisement

ಹೈದರಾಬಾದ್‌ನ ಲಂಗರ್ ಹೌಜ್ ಮೂಲದ ಸೈಯದ್ ಮಜಾಹಿರ್ ಅಲಿ ಅವರು ತಮ್ಮ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಲು ಯುನೈಟೆಡ್ ಸ್ಟೇಟ್ಸ್‌ನ ಇಂಡಿಯಾನಾ ವೆಸ್ಲಿಯನ್ ವಿಶ್ವವಿದ್ಯಾಲಯಕ್ಕೆ ದಾಖಲಾಗಿದ್ದರು ಈ ವೇಳೆ ತನ್ನ ಮನೆಗೆ ತೆರಳುವ ಸಂದರ್ಭ ಶಸ್ತ್ರಸಜ್ಜಿತ ನಾಲ್ವರು ದರೋಡೆಕೋರರು ವಿದ್ಯಾರ್ಥಿಯನ್ನು ಅಟ್ಟಾಡಿಸಿಕೊಂಡು ಬಂದು ಹಲ್ಲೆ ನಡೆಸಿ ಆತನ ಬಳಿಯಿದ್ದ ಮೊಬೈಲ್ ಫೋನ್ ಕಸಿದು ಪರಾರಿಯಾಗಿದ್ದಾರೆ.

ಫೆಬ್ರವರಿ ನಾಲ್ಕರಂದು ಸಂಜೆ ನಾಲ್ವರು ಶಸ್ತ್ರಸಜ್ಜಿತ ಕಳ್ಳರು ಅಮೆರಿಕದ ಚಿಕಾಗೋದಲ್ಲಿರುವ ಭಾರತೀಯ ವಿದ್ಯಾರ್ಥಿಯೊಬ್ಬರ ನಿವಾಸದ ಬಳಿ ದಾಳಿ ನಡೆಸಿದ ಪರಿಣಾಮ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದಾರೆ. ರಕ್ತಸಿಕ್ತ ವಿದ್ಯಾರ್ಥಿ ದೂರು ನೀಡುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ವೈರಲ್ ವಿಡಿಯೋದಲ್ಲಿ, ಕಳ್ಳರು ತನ್ನನ್ನು ಒದ್ದು ತನ್ನ ಫೋನ್ ಅನ್ನು ಕಿತ್ತುಕೊಂಡರು ಎಂದು ವಿದ್ಯಾರ್ಥಿ ಹೇಳಿದ್ದಾನೆ. ಈ ಘಟನೆಯು ಕಳವಳವನ್ನು ಹುಟ್ಟುಹಾಕಿದೆ.

ಸಹಾಯ ಕೋರಿದ ಪತ್ನಿ:
ಇತ್ತ ತನ್ನ ಪತಿಯಾ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ ವಿಚಾರ ಗೊತ್ತಾಗುತ್ತಿದ್ದಂತೆ ಕಳವಳ ವ್ಯಕ್ತಪಡಿಸಿದ ಸೈಯದ್ ಮಜಾಹಿರ್ ಅಲಿ ಪತ್ನಿ ಭಾರತದ ವಿದೇಶಾಂಗ ಸಚಿವರಿಗೆ ಪತ್ರ ಬರೆದು ತನ್ನ ಪತಿಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ ಅಲ್ಲದೆ ಅವರ ಪತ್ನಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಸಂಪರ್ಕಿಸಿ, ಅಮೆರಿಕಕ್ಕೆ ಪ್ರಯಾಣಿಸಲು ನೆರವು ಕೋರಿದ್ದಾರೆ.

ಚಿಕಾಗೋದಲ್ಲಿರುವ ಭಾರತೀಯ ದೂತಾವಾಸ ಮಂಗಳವಾರ ಅಲಿ ಮತ್ತು ಅವರ ಪತ್ನಿಯಾ ಜೊತೆಗೆ ಸಂಪರ್ಕದಲ್ಲಿದ್ದು ಕುಟುಂಬಕ್ಕೆ ಎಲ್ಲ ರೀತಿಯ ಸಹಾಯ ಮಾಡುವುದಾಗಿ ಭರವಸೆ ನೀಡಿದೆ.

Advertisement

ತಿಂಗಳ ಅಂತರದಲ್ಲಿ ನಾಲ್ವರು ಭಾರತೀಯರ ಹತ್ಯೆ
ಕಳೆದ ಒಂದು ತಿಂಗಳ ಅಂತರದಲ್ಲಿ ನಾಲ್ವರು ಭಾರತೀಯ ವಿದ್ಯಾರ್ಥಿಗಳನ್ನು ಹತ್ಯೆ ಮಾಡಲಾಗಿದೆ ಅಲ್ಲದೆ ಓರ್ವ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಲಾಗಿದ್ದು ಇದರಿಂದ ಭಾರತೀಯ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಅಮರಿಕಾಕ್ಕೆ ಹೋಗಲು ಹಿಂದೆಮುಂದೆ ನೋಡುವ ಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ: MP: ಪಟಾಕಿ ಕಾರ್ಖಾನೆ ದುರಂತ: ಮಿತಿಗಿಂತ ಹೆಚ್ಚಿನ ಸ್ಪೋಟಕ ಸಂಗ್ರಹಿಸಲಾಗಿತ್ತು, ಮಾಲೀಕರ ಬಂಧನ

Advertisement

Udayavani is now on Telegram. Click here to join our channel and stay updated with the latest news.

Next