ಹೈದರಾಬಾದ್: ‘ಹಳದಿ’ ಸಮಾರಂಭವೊಂದರಲ್ಲಿ ದುರಂತ ನಡೆದು ಸಾವಿನ ಮನೆಯಾದ ಘಟನೆ ನಡೆದಿದೆ. ಸಮಾರಂಭಕ್ಕೆ ಬಂದಿದ್ದ ವ್ಯಕ್ತಿಯೊಬ್ಬರು ಮದುಮಗನಿಗೆ ಹಳದಿ ಹಚ್ಚುತ್ತಿದ್ದಂತೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಫೆಬ್ರವರಿ 20 ರಂದು ನಗರದ ಕಲಾ ಪಾಥರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಅದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಸಾವನ್ನಪ್ಪಿದ ವ್ಯಕ್ತಿಯನ್ನು ಆಭರಣ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ 40 ವರ್ಷದ ಮೊಹಮ್ಮದ್ ರಬ್ಬಾನಿ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:ಹೆಚ್.ಡಿ.ದೇವೇಗೌಡರ ಬಗ್ಗೆ ಕೀಳು ಹೇಳಿಕೆ: ಸಿ.ಟಿ.ರವಿ ಪ್ರತಿಕೃತಿ ದಹಿಸಿ ಆಕ್ರೋಶ
ಹಳದಿ ಸಮಾರಂಭದ ವೀಡಿಯೊದಲ್ಲಿ ಮೊಹಮ್ಮದ್ ರಬ್ಬಾನಿ ಅತಿಥಿಗಳೊಂದಿಗೆ ನಗುತ್ತಿರುವ ಮತ್ತು ಮಾತನಾಡುತ್ತಿರುವುದು ಕಂಡುಬಂದಿದೆ. ಮದುವೆಯ ಸಂಭ್ರಮದಲ್ಲಿ ವರನ ಕಾಲುಗಳ ಮೇಲೆ ಅರಿಶಿನವನ್ನು ಹಚ್ಚಲು ಅವರು ಮುಂದುವರಿಯುತ್ತಾರೆ. ಅರಿಶಿನವನ್ನು ಹಚ್ಚಲು ಅವರು ಮುಂದೆ ಬಾಗುತ್ತಿದ್ದಂತೆ ಅವರು ನೆಲದ ಮೇಲೆ ಕುಸಿಯುತ್ತಾರೆ.
ಮದುಮಗ ಮತ್ತು ಇತರ ಅತಿಥಿಗಳು ಕೂಡಲೇ ಅವನ್ನು ಎತ್ತಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಮರುದಿನ ಅವರು ಮೃತಪಟ್ಟಿದ್ದಾರೆ. ಅವರು ಹೃದಯ ಸ್ತಂಭನದಿಂದ ಮೃತರಾಗಿದ್ದಾರೆ ಎಂದು ವರದಿಯಾಗಿದೆ. ಈ ಘಟನೆಯ ಕಾರಣದಿಂದ ಮದುವೆ ಮುಂದೂಡಲಾಗಿದೆ ಎನ್ನಲಾಗಿದೆ.