Advertisement

ಉಸಿರಾಡುವ ಶ್ವಾಸಕೋಶ ಕಸಿ; ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ

11:11 AM Dec 13, 2021 | Team Udayavani |

ಹೈದರಾಬಾದ್‌: ಒಬ್ಬ ಮನುಷ್ಯನ ಉಸಿರಾಡು ತ್ತಿರುವ ಶ್ವಾಸಕೋಶವನ್ನೇ ಬೇರೊಬ್ಬ ಮನುಷ್ಯನ ದೇಹದೊಳಗೆ ಕಸಿ ಮಾಡುವ ಶಸ್ತ್ರಚಿಕಿತ್ಸೆಯಲ್ಲಿ ತೆಲಂಗಾಣದ ಹೈದರಾಬಾದ್‌ನ ವೈದ್ಯರು ಯಶಸ್ವಿ ಯಾಗಿದ್ದಾರೆ. ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಈ ಪ್ರಯೋಗ ನಡೆದಿದ್ದು, ಈ ಮೂಲಕ ಅತ್ಯಾ ಧುನಿಕ ತಂತ್ರಗಾರಿಕೆಯ ಮೂಲಕ ಶ್ವಾಸಕೋಶ ಕಸಿ ಮಾಡುವ ದೇಶಗಳ ಪಟ್ಟಿಗೆ ಭಾರತವೂ ಸೇರಿಕೊಂಡಿದೆ.

Advertisement

ಈ ಪ್ರೊಸೆಸ್‌ನಲ್ಲಿ ದಾನ ಪಡೆದ ಶ್ವಾಸಕೋಶವನ್ನು “ಆರ್ಗನ್‌ ರೀ- ಕಂಡೀಶ‌ನಿಂಗ್‌ ಬಾಕ್ಸ್‌’ನೊಳಗಿಟ್ಟು, ಕೃತಕವಾಗಿ ಆ ಶ್ವಾಸಕೋಶ ಉಸಿರಾ ಡುವಂತೆ ಮಾಡಲಾಗುವುದು. ಅದನ್ನು ಅಗತ್ಯವಿರುವ ರೋಗಿಗೆ ಕಸಿ ಮಾಡಬೇಕೆನ್ನುವ ಸಮಯ ದಲ್ಲಿ ಬಾಕ್ಸ್‌ನಿಂದ ನೇರವಾಗಿ ತೆಗೆದು, ಆ ರೋಗಿಯ ದೇಹದೊಳಗೆ ಕೂರಿಸಲಾಗುವುದು. ಇದರಿಂದಾಗಿ ಕಸಿ ಮಾಡಿಸಿಕೊಳ್ಳುವ ದೇಹ, ಆ ಶ್ವಾಸಕೋಶದೊಂದಿಗೆ ಬಹಳ ಬೇಗ ಹೊಂದಿಕೊಳ್ಳುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ:ಮಧ್ಯಪ್ರದೇಶದ 5 ಕಡೆ ಡ್ರೋನ್‌ ತಂತ್ರಜ್ಞಾನ ಶಾಲೆ: ಜ್ಯೋತಿರಾಧಿತ್ಯ ಸಿಂಧಿಯಾ

ವೇಸ್ಟೇಜ್‌ ನಿಯಂತ್ರಣ: ಸಾಮಾನ್ಯ ವಾಗಿ ದಾನ ಪಡೆಯಲಾಗುವ ಎಲ್ಲ ಶ್ವಾಸಕೋಶಗಳನ್ನು ಕಸಿ ಮಾಡು ವುದಕ್ಕೆ ಸಾಧ್ಯವಾಗುವುದಿಲ್ಲ. ಅನೇಕ ಶ್ವಾಸಕೋಶಗಳು ಅಲರ್ಜಿ ಯಿಂದಾಗಿ ಅಥವಾ ಆಂತರಿಕ ಭಾಗ ನಿಷ್ಕ್ರಿಯ ವಾಗುವುದರಿಂದ ಬಳಕೆಯ ಯೋಗ್ಯತೆಯನ್ನು ಕಳೆದುಕೊಳ್ಳು ತ್ತದೆ. ಅದನ್ನು “ವೇಸ್ಟೇಜ್‌’ ಎನ್ನಲಾಗುತ್ತದೆ. ಈ ಕಟಿಂಗ್‌ ಎಡ್ಜ್ ಪ್ರೊಸೆಸ್‌ ಬಳಕೆಯಿಂದ ವೇಸ್ಟೇಜ್‌ ಪ್ರಮಾಣ ಶೇ. 30 ಕಡಿಮೆಯಾಗಲಿದೆ. ಹಾಗೆಯೇ ದಾನ ಪಡೆದ ಅನಂತರ ಕಸಿ ಮಾಡುವುದಕ್ಕೂ ಹೆಚ್ಚು ಸಮಯಾ ವಕಾಶ ಸಿಗಲಿದೆ ಎಂದು ವೈದ್ಯರು ಮಾಹಿತಿ ಕೊಟ್ಟಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next