Advertisement

ಪುಣೆಯಲ್ಲಿ ಲಸಿಕೆ ಉತ್ಪಾದಿಸಲಿದೆ  ಭಾರತ್ ಬಯೋಟೆಕ್ ಇಂಟರ್ ನ್ಯಾಷನಲ್ ಲಿಮಿಟೆಡ್..!

08:33 PM May 14, 2021 | Team Udayavani |

ಮಹಾರಾಷ್ಟ್ರ : ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಇಂಟರ್ ನ್ಯಾಷನಲ್ ಲಿಮಿಟೆಡ್, ಅಂಗಸಂಸ್ಥೆ ಬಯೋವೆಟ್ ಪ್ರೈವೇಟ್ ಲಿಮಿಟೆಡ್ ಮೂಲಕ ಶೀಘ್ರದಲ್ಲೇ ಪುಣೆಯಲ್ಲಿ ಕೋವಿಡ್ -19 ಲಸಿಕೆಗಳನ್ನು ಉತ್ಪಾದಿಸಲು ಪ್ರಾರಂಭಿಸಲಿದೆ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಶುಕ್ರವಾರ (ಮೇ 14) ಹೇಳಿದ್ದಾರೆ.

Advertisement

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪವಾರ್, ಪುಣೆಯಲ್ಲಿ ಲಸಿಕೆಗಳ ಉತ್ಪಾದನೆಯನ್ನು ಪ್ರಾರಂಭಿಸಲು ಸುಮಾರು ಮೂರು ತಿಂಗಳುಗಳು ಬೇಕಾಗಬಹುದು ಎಂದು ತಿಳಿಸಿದ್ದಾರೆ.

ಕೇಂದ್ರದೊಂದಿಗಿನ ಒಪ್ಪಂದ ಪೂರೈಸಿದ ನಂತರ ಮಹಾರಾಷ್ಟ್ರಕ್ಕೆ ಲಸಿಕೆಗಳನ್ನು ಪೂರೈಸಲು ಆದ್ಯತೆ ನೀಡುವಂತೆ ರಾಜ್ಯವು ಬಿಬಿಐಎಲ್‌ ಗೆ ಕೇಳಿಕೊಂಡಿದೆ ಎಂದು ಕೂಡ ಅವರು ಹೇಳಿದ್ದಾರೆ.

ಇದನ್ನೂ ಓದಿ : ಯುವತಿಯ ಅನುಮಾನಾಸ್ಪದ ಸಾವು, ಕೊಲೆ ಶಂಕೆ : ಪೊಲೀಸರಿಂದ ತೀವ್ರ ವಿಚಾರಣೆ

ಇನ್ನು,  ಪುಣೆ ವಿಭಾಗೀಯ ಆಯುಕ್ತ ಸೌರಭ್ ರಾವ್ತ್ ಮತ್ತು ಕಲೆಕ್ಟರ್ ರಾಜೇಶ್ ದೇಶ್ಮುಖ್ ಅವರು ಮಂಜರಿ ಖುರ್ದ್‌ ನ 11 ಎಕರೆ ಹೆಚ್ಚಿರುವ ಪ್ರದೇಶವನ್ನು ಪರಿಶೀಲಿಸಿದ ಒಂದೆರಡು ದಿನಗಳ ನಂತರ ಈ ಬೆಳವಣಿಗೆ ಕಂಡಿದೆ. ಮಹಾರಾಷ್ಟ್ರ ಸರ್ಕಾರವು ಪುಣೆಯಲ್ಲಿ ಬೇಕಾದ ಸೌಲಭ್ಯವನ್ನು ಹಸ್ತಾಂತರಿಸಬೇಕೆಂದು ಕೋರಿ ಕರ್ನಾಟಕ ಮೂಲದ ಬಯೋವೆಟ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಮನವಿಯನ್ನು ನ್ಯಾಯಮೂರ್ತಿ ಕೆ. ಕೆ. ಟೇಟ್ ಮತ್ತು ನ್ಯಾಯಮೂರ್ತಿ ನಿತಿನ್ ಬೋರ್ಕರ್ ಅವರನ್ನೊಳಗೊಂಡ ಬಾಂಬೆ ಹೈಕೋರ್ಟ್ ಪೀಠ ಎತ್ತಿ ಹಿಡಿದಿದೆ.

Advertisement

ಫುಡ್ ಮತ್ತು ಮೌತ್  ಡಿಸೀಸ್ ಗೆ ಲಸಿಕೆಗಳನ್ನು ತಯಾರಿಸಲು 1973 ರಲ್ಲಿ ಖಾಸಗಿ ಕಂಪನಿಗೆ ಮಹಾರಾಷ್ಟ್ರ ಸರ್ಕಾರವು ನೀಡಿದ ಭೂಮಿಯಲ್ಲಿ ಮಂಜರಿ ಖುರ್ದ್ ಸೌಲಭ್ಯವನ್ನು ನೀಡಿತ್ತು.

ಆದಾಗ್ಯೂ, ಆ ಕಂಪನಿಯು ಇಲ್ಲಿ ತನ್ನ ಕಾರ್ಯಾಚರಣೆಯನ್ನು ತ್ಯಜಿಸಿ, ಬಯೋವೆಟ್ ಪ್ರೈವೇಟ್ ಲಿಮಿಟೆಡ್‌ ನೊಂದಿಗೆ ಭೂಮಿ ಮತ್ತು ಸ್ಥಾವರವನ್ನು ವರ್ಗಾವಣೆ ಮಾಡಲು ಒಪ್ಪಂದ ಮಾಡಿಕೊಂಡಿತ್ತು, ಇದನ್ನು ಮಹಾರಾಷ್ಟ್ರ ಅರಣ್ಯ ಇಲಾಖೆ ಆಕ್ಷೇಪಿಸಿತ್ತು.

ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು, ಮುಂದಿನ 3-4 ತಿಂಗಳಲ್ಲಿ ಲಸಿಕೆಗಳನ್ನು ಉತ್ಪಾದಿಸಲು ಪ್ರಾರಂಭಿಸಬಹುದು, ಆದರೇ, ಯಾವ ಪ್ರಮಾಣದಲ್ಲಿ ಉತ್ಪಾದನೆ ಮಾಡಲಿದೆ ಎನ್ನುವುದರ ಬಗ್ಗೆ ತಿಳಿದುಬಂದಿಲ್ಲ ಎಂದಿದ್ದಾರೆ.

ಇನ್ನು, ಬಯೋವೆಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ, ಪ್ರಸ್ತುತ ಅಲ್ಲಿ ಉತ್ಪಾದನಾ ಮಾರ್ಗ ಮತ್ತು ಪ್ರಕ್ರಿಯೆಗಳನ್ನು ಪರಿಶೀಲಿಸುತ್ತಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ : ಕೋಲಾರದ ಮಾಲೂರಿನಲ್ಲಿ ಕೊವ್ಯಾಕ್ಸಿನ್ ಲಸಿಕೆ ತಯಾರಿಕಾ ಘಟಕ: ಅಶ್ವತ್ಥನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next