Advertisement

ಮೈಲಾರ ಜಾತ್ರೆಗೆ ಭರದ ಸಿದ್ಧತೆ

05:19 PM Feb 07, 2020 | Naveen |

ಹೂವಿನಹಡಗಲಿ: ನಾಡಿನ ಸುಪ್ರಸಿದ್ಧ ಜಾತ್ರೆಗಳಲ್ಲಿ ಒಂದಾಗಿರುವ ಶ್ರೀ ಮೈಲಾರ ಜಾತ್ರೆ ಹಿನ್ನೆಲೆಯಲ್ಲಿ ಫೆ.11ರಂದು ಕಾರ್ಣಿಕ ಜರುಗಲಿದ್ದು ಕಾರ್ಣಿಕ ನುಡಿ ಆಲಿಸಲು ರಾಜ್ಯ ಹಾಗೂ ಹೊರ ರಾಜ್ಯದಿಂದಲೂ ಲಕ್ಷಾಂತರ ಸಂಖ್ಯೆ ಭಕ್ತರು ಆಗಮಿಸುತ್ತಾರೆ. ಇಷ್ಟೊಂದು ದೊಡ್ಡ ಪ್ರಮಾಣದ ಭಕ್ತರ ಸಂಖ್ಯೆಗೆ ಮೂಲಸೌಕರ್ಯ ಒದಗಿಸಲು ಜಿಲ್ಲಾಡಳಿತ ಒಳಗೊಂಡಂತೆ ತಾಲೂಕು ಆಡಳಿತ 7-8 ದಿನಗಳಿಂದಲೂ ಭರದ ಸಿದ್ಧತೆ ನಡೆಸಿದೆ.

Advertisement

ದೇವಸ್ಥಾನದ ಸುತ್ತಮುತ್ತಲಿರುವ ಅತಿಕ್ರಮಿತ ಅಂಗಡಿ ಮಂಗಟ್ಟುಗಳು ತೆರವು ಕಾರ್ಯ ನಡೆಯುತ್ತಿದೆ. ದೇವಸ್ಥಾನದ ಗೋಪುರದ ಮುಂದೆ, ದೇವಸ್ಥಾನಕ್ಕೆ ತೆರಳುವ ಕಮಾನು ರಸ್ತೆ ಇಕ್ಕೆಲಗಳಲ್ಲಿ ಅತಿಕ್ರಮಣ ಮಾಡಿದ್ದ ಅಂಗಡಿಗಳನ್ನು ತೆರವು ಮಾಡಿಸಿ ಭಕ್ತರ ಸಂಚಾರಕ್ಕೆ ಆನುಕೂಲ ಮಾಡಿಕೊಡಲಾಗಿದೆ. ಜಾತ್ರೆಗೆ ಬರುವ ಅಪಾರ ಸಂಖ್ಯೆ ಭಕ್ತರಿಗೆ ಕುಡಿಯುವ ನೀರು ಪೂರೈಸಲು ಡೆಂಕನ ಮರಡಿಯಲ್ಲಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಟ್ಯಾಂಕ್‌ನ್ನು ಸುಸ್ಥತಿಗೆ ತರಲಾಗಿದೆ. ಗ್ರಾಪಂ ಆರು ಬೋರ್‌ವೆಲ್‌ಗ‌ಳಿಗೆ ಹೊಸದಾಗಿ ಮೋಟರ್‌ ವ್ಯವಸ್ಥೆ ಮಾಡಲಾಗಿದೆ. ನೂತನವಾಗಿ ಎರಡು ಬೋರ್‌ವೆಲ್‌ ಸಹ ಕೊರೆಸಲಾಗಿದೆ. ಜಾತ್ರೆ ಪ್ರದೇಶದಲ್ಲಿ ಭಕ್ತರಿಗೆ ಅನುಕೂಲವಾಗಲು 23 ಸಿಸ್ಟನ್‌ ಗಳನ್ನು ಸಜ್ಜುಗೊಳಿಸಲಾಗಿದೆ. ಆಲ್ಲದೆ ಆಗತ್ಯ ಬಿದ್ದಲ್ಲಿ ಟ್ಯಾಂಕರ್‌ ಮೂಲಕವಾಗಿ ನೀರನ್ನು ಸರಬರಾಜು ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ.

ನೈರ್ಮಲ್ಯಕ್ಕೆ ಅಗತ್ಯವಿರುವ ಪಿನಾಯಿಲ್‌ ಬ್ಲಿಚಿಂಗ್‌ ಪೌಡರ್‌ ಸಾಕಷ್ಟು ಪ್ರಮಾಣದಲ್ಲಿ ತರಿಸಿಕೊಳ್ಳಲಾಗಿದೆ. ಭಕ್ತರಿಗೆ ಸಮರ್ಪಕ ಮೂಲ ಸೌಕರ್ಯ ಒದಗಿಸುವ ಕಾರ್ಯದ ಮೇಲುಸ್ತುವಾರಿಗೆ ತಾಪಂ ಆರು ಜನ ಅಧಿಕಾರಿಗಳ ತಂಡ ರಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next