Advertisement

ಮೆಕ್ಕೆಜೋಳಕ್ಕೆ ಸೈನಿಕಹುಳು ಬಾಧೆ: ಅಧಿಕಾರಿಗಳ ತಂಡ ಭೇಟಿ

05:40 PM Jul 04, 2020 | Naveen |

ಹೂವಿನಹಡಗಲಿ: ತಾಲೂಕಿನಲ್ಲಿ ರೈತರಿಗೆ ಒಂದಿಲ್ಲೊಂದು ಕಾಟ ತಪ್ಪಿದಲ್ಲ ಎನ್ನುವಂಥ ಸ್ಥಿತಿ ನಿರ್ಮಾಣವಾಗಿದ್ದು ತಾಲೂಕಿನ ರೈತರ ಮೆಕ್ಕೆಜೋಳಕ್ಕೆ ಸೈನಿಕ ಹುಳು ಬಾಧೆ ಕಾಡಲಾರಂಬಿಸಿದೆ.

Advertisement

ನಿನ್ನೆ ದಿವಸ ಹುಳು ಬಾಧೆ ಕಾಣಿಸಿಕೊಂಡಿರುವ ತಾಲೂಕಿನ ಹಗರನೂರು, ಕೊಳಚಿ, ಚಿಕ್ಕ ಕೊಳಚಿ, ನಾಗ್ತಿಬಸಾಪುರ ಹಾಗೂ ಹಡಗಲಿ ಹೊಬಳಿ ರೈತ ಹೊಲಗಳಿಗೆ ಕೃಷಿ ಅಧಿಕಾರಿಗಳ ತಂಡ ಭೇಟಿ ನೀಡಿ ಸೈನಿಕ ಹುಳು ಬಾಧೆ ತಡೆಗಟ್ಟಲು ಸೂಕ್ತ ಮಾಹಿತಿ ನೀಡಿದರು. ಸೈನಿಕ ಹುಳುನಿಯಂತ್ರಣಕ್ಕಾಗಿ ಇಮ್ಯಾಕ್ವಿನ್‌ ಬೆಂಜಿಯೇಟ್‌ ಶಿಫಾರಸ್ಸು ಮಾಡಲಾಗಿದ್ದು ಈಗಾಗಲೇ ಆವಶ್ಯಕ ರೈತರಿಗೆ ವಿತರಣೆ ಮಾಡಲಾಗುತ್ತಿದ್ದು ಹೆಚ್ಚಿನ ಬೇಡಿಕೆ ಕಂಡು ಬಂದಲ್ಲಿ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.

ಪ್ರಸ್ತುತ ಓಷಧಿಯನ್ನು ಯಾವ ರೀತಿ ಸಿಂಪಡಣೆ ಮಾಡಬೇಕು ಎನ್ನುವ ಮಾಹಿತಿ ಸಮಗ್ರವಾಗಿ ರೈತರಿಗೆ ತಿಳಿ ಹೇಳಿದರು. ಪ್ರತಿ ಲೀಟರ್‌ ಗೆ 0.4ರಿಂದ 0.5 ಗ್ರಾಂನಂತೆ ಇಆಮ್ಯಾಕ್ವಿನ್‌ ಬೆಂಜೋಯೇಟ್‌ ಬೆರಸಿ ಮೆಕ್ಕೆಜೋಳ ಬೆಳೆ ಸುಳಿಗೆ ಸಿಂಪಡಣೆ ಮಾಡಬೇಕು. ರೈತರು ಸಂಜೆ ವೇಳೆ ಔಷಧಿ ಸಿಂಪಡಣೆ ಮಾಡುವುದರಿಂದಾಗಿ ಹೆಚ್ಚು ಪರಿಣಾಮಕಾರಿಯಾಗಿ ಹುಳು ಸಾಯುವುದು ಎಂದು ಕೃಷಿ ಅಧಿಕಾರಿ ನೀಲಾನಾಯ್ಕ ತಿಳಿಸಿದರು. ಈ ಸಂದರ್ಭದಲ್ಲಿ ಸಹಾಯಕ ಕೃಷಿ ಅಧಿಕಾರಿ ರಾಜಶೇಖರ್‌ ನಿಂಗಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next