Advertisement

ಸರಳವಾಗಿ ಸೆಟ್ಟೇರಿದ ಹುಷಾರ್‌

04:36 PM Nov 13, 2020 | Suhan S |

ಕಳೆದ ಮೂರು ದಶಕಗಳಿಂದ ಸಿನಿಮಾ,ಕಿರುತೆರೆ ಸೇರಿ ಬಣ್ಣದ ಲೋಕದ ಹಲವುಕ್ಷೇತ್ರಗಳಲ್ಲಿಕೆಲಸ ಮಾಡಿದ ಅನುಭವ ಇರುವ ಸತೀಶ್‌ ರಾಜ್‌ಇದೀಗ “ಹುಷಾರ್‌’ ಸಿನಿಮಾದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದ್ದು, ಹಿರಿಯ ನಿರ್ದೇಶಕ ಭಗವಾನ್‌ ಮತ್ತು ಎನ್‌. ಎಂ ಸುರೇಶ್‌ ಆಗಮಿಸಿ ಕ್ಲಾಪ್‌ ಮಾಡಿ ಹೊಸಬರ ಈ ನೂತನ ಪ್ರಯತ್ನಕ್ಕೆ ಶುಭಹಾರೈಸಿದರು.

Advertisement

“ಸತೀಶ್‌ ರಾಜ್‌ ಮೂವಿ ಮೇಕರ್’ ಬ್ಯಾನರ್‌ಅಡಿಯಲ್ಲಿ ಈ ಸಿನಿಮಾ ಮೂಡಿಬರುತ್ತಿದ್ದು, ಚಿತ್ರದ ಶೀರ್ಷಿಕೆಯೇ ಹೇಳುವಂತೆ ಇದೊಂದು ಸಾಮಾಜಿಕ ಕಳಕಳಿಯ ಹಿನ್ನೆಲೆಯ ಸಿನಿಮಾ. ಇಡೀ ಸಿನಿಮಾ ಹಳ್ಳಿಗಾಡಿನಲ್ಲಿ ನಡೆಯುವ ಕಥೆಯನ್ನು ಹೊಂದಿದ್ದು, ಸಾಮಾಜಿಕ ಜವಾಬ್ದಾರಿ ಯುಳ್ಳ ಯುವಕ ಹೇಗೆ ಬದಲಾವಣೆಗೆ ನಾಂದಿ ಹಾಡುತ್ತಾನೆ ಎಂಬುದೇ “ಹುಷಾರ್‌’ ಚಿತ್ರದ ಕಥೆಯ ಒಂದೆಳೆ.

ನಮ್ಮ ಸುತ್ತಮುತ್ತಲಿನವರೇ ಮಾಡುವಕೆಲಸಗಳು, ಹೇಗೆ ಸಮಾಜಕ್ಕೆ ಕಂಟಕವಾಗುತ್ತವೆ ಎಂಬ ಸಂದೇಶಕೂಡ ಚಿತ್ರದಲ್ಲಿದೆ ಎನ್ನುತ್ತದೆ ಚಿತ್ರತಂಡ. ವಿಜಯ್‌, ರಚನಾ ಮಲ್ನಾಡ್‌, ಲಯ ಕೋಕಿಲ, ಗಣೇಶ್‌ ರಾವ್‌, ಪಿ. ಮೂರ್ತಿ, ಸತೀಶ್‌ ರಾಜ್‌, ಪುಷ್ಪಾ ಸ್ವಾಮಿ, ರತ್ನಮಾಲ, ಮೂಗು ಸುರೇಶ್‌, ಪ್ರಶಾಂತ್‌ ನಟನ, ವೆಂಕಟೇಶ್‌ ಹೇರೊಹಳ್ಳಿ, ವಸಂತ್‌ಕುಮಾರ್‌ ಮೊದಲಾದವರು ಚಿತ್ರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಶೃಂಗೇರಿ, ಹೊರನಾಡು, ಕುದುರೆಮುಖ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next