Advertisement
ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದಿಂದ ಗುರುವಾರ ಮೈಸೂರಿನಲ್ಲಿ ಆಯೋಜಿಸಿದ್ದ ಅಲ್ಪಸಂಖ್ಯಾತರ ಐಕ್ಯತಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಮಾತೆತ್ತಿದರೆ ಸಂಸ್ಕಾರ, ಸಂಸ್ಕೃತಿ ಇರುವವರ ಪಕ್ಷ ನಮ್ಮದು ಎನ್ನುವ ಅವರಲ್ಲಿ ಮನುಷ್ಯತ್ವವೇ ಇಲ್ಲ. ಮನುಷ್ಯತ್ವವೇ ಇಲ್ಲದವರಲ್ಲಿ ಸಂಸ್ಕಾರ, ಸಂಸ್ಕೃತಿ ಎಲ್ಲಿರುತ್ತದೆ, ಸಾಂವಿಧಾನಿಕ ಪದಗಳೇ ಗೊತ್ತಿಲ್ಲದವರು ಶಾಸಕ, ಸಂಸದ, ಮಂತ್ರಿಗಳಾಗಲು ನಾಲಾಯಕ್ ಎಂದು ಟೀಕಿಸಿದರು.
ಬಿಜೆಪಿಯವರು ಪರಿವರ್ತನೆಯಾಗಲಿ: ಯಡಿಯೂರಪ್ಪನೇತೃತ್ವದಲ್ಲಿ ಬಿಜೆಪಿಯವರು ಪರಿವರ್ತನಾ ಯಾತ್ರೆ ಹೊರಟಿದ್ದಾರೆ. ಜಾತೀವಾದಿಗಳಾಗಿರುವ ಬಿಜೆಪಿಯವರು ಮೊದಲು ಪರಿವರ್ತನೆಯಾಗಬೇಕು, ನಾಡಿನ ಜನರಲ್ಲ ಪರಿವರ್ತನೆಯಾಗಬೇಕಿರುವುದು ಎಂದರು.
ಯಾತ್ರೆಯುದ್ದಕ್ಕೂ ಯಡಿಯೂರಪ್ಪ, ಸಿದ್ದರಾಮಯ್ಯ ಸರ್ಕಾರದ ಹಗರಣವನ್ನು ಬಿಚ್ಚುತ್ತೀನಿ ಎಂದು ಖಾಲಿ ಬುಟ್ಟಿ ತೋರಿಸುತ್ತಿದ್ದಾರೆ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ನಾವು ಭ್ರಷ್ಟಾಚಾರ ರಹಿತ, ಹಗರಣ ರಹಿತ ಆಡಳಿತ ನೀಡಿದ್ದೇವೆ ಎಂದರು. ಕರ್ನಾಟಕದಲ್ಲಿ ಮೋದಿ, ಅಮಿತ್ ಶಾ ತಂತ್ರಗಾರಿಕೆ ನಡೆಯಲ್ಲ.
ಇಲ್ಲಿ ಜಾತ್ಯತೀತ ತತ್ವ, ಸಾಮಾಜಿಕ ನ್ಯಾಯದ ಬೀಜಾಂಕುರವಾಗಿದೆ. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿ ಯಡಿಯೂರಪ್ಪಕೆಜೆಪಿಯಲ್ಲಿದ್ದಾಗ ಟಿಪ್ಪುವನ್ನು ಸ್ವಾತಂತ್ರ ಹೋರಾಟಗಾರ ಎಂದು ಹೇಳಿದ್ದವರು. ಆದರೆ, ಇಂದು ಟಿಪ್ಪು ಮತಾಂಧ ಎಂದು ಯಾವ ನಾಲಗೆಯಿಂದ ಹೇಳುತ್ತೀರಿ ಎಂದು ಪ್ರಶ್ನಿಸಿದರು.
ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಗೌರವವಿಲ್ಲ. ವಾಜಪೇಯಿ ಪ್ರಧಾನಮಂತ್ರಿಯಾಗಿದ್ದ ಅವಧಿಯಲ್ಲಿ ಸಂವಿಧಾನ ಪರಾಮರ್ಶೆಗೆ ಮುಂದಾಗಿದ್ದ ಬಿಜೆಪಿಯವರು ಈಗ ಮತ್ತೆ ಆ ಕೆಲಸಕ್ಕೆ ಕೈಹಾಕಿದ್ದಾರೆ. ಇವರ ಕೈಗೆ ದೇಶ ಸಿಕ್ಕಿದರೆ ಇನ್ನೇನು ಮಾಡುತ್ತಾರೋ ಗೊತ್ತಿಲ್ಲ ಎಂದು ಹರಿಹಾಯ್ದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವರಾದ ತನ್ವೀರ್, ರೋಷನ್ ಬೇಗ್, ಯು.ಟಿ.ಖಾದರ್, ಡಾ.ಎಚ್.ಸಿ.ಮಹದೇವಪ್ಪ, ಎ.ಮಂಜು, ಸಂಸದ ಆರ್.ಧ್ರುವನಾರಾಯಣ್, ಶಾಸಕರಾದ ಎಂ.ಕೆ.ಸೋಮಶೇಖರ್, ವಾಸು, ಕೆ.ವೆಂಕಟೇಶ್, ಕಳಲೆ ಕೇಶವಮೂರ್ತಿ,
ವಿಧಾನ ಪರಿಷತ್ ಸದಸ್ಯರಾದ ರಿಜನ್ ಅರ್ಷದ್, ಜಬ್ಟಾರ್ ಖಾನ್, ಎಐಸಿಸಿ ಕಾರ್ಯದರ್ಶಿಗಳಾದ ಸೂರಜ್ ಹೆಗಡೆ, ಸತೀಶ್ ಜಾರಕಿಹೊಳಿ, ಮಧು ಯಾಕ್ಷಿಗೌಡ, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸಯೀದ್ ಅಹ್ಮದ್ ಮೊದಲಾದವರು ಸಮಾವೇಶದಲ್ಲಿ ಹಾಜರಿದ್ದರು.