Advertisement
ಉದ್ಯಾನದ ವೀರನಹೊಸಹಳ್ಳಿ ವನ್ಯಜೀವಿ ವಲಯದಂಚಿನ ತಡೆಗೋಡೆ ದಾಟಿ ಹೊರಬರುತ್ತಿರುವ ಸಲಗ ಚಿಕ್ಕಹೆಜ್ಜೂರು ಗ್ರಾಮದ ಸಿ.ವಿ.ದೇವರಾಜ್ ಅವರ ರಾಗಿ, ಅಲಸಂಡೆ,ಅವರೆ, ಹುರಳಿ ಬೆಳೆ, ಅರುಣ್ ಫಲಭರಿತ ಬಾಳೆ ಬೆಳೆಯನ್ನು ತಿಂದು ತುಳಿದು ನಾಶಪಡಿಸಿದೆ.
Related Articles
Advertisement
ಸಾಲ-ಸೋಲ ಮಾಡಿ ಬೆಳೆ ಬೆಳೆದಿದ್ದೇವೆ. ಈಗಾಗಳೇ ಅರ್ಧದಷ್ಟು ಬೆಳೆ ನಾಶಪಡಿಸಿದೆ. ಇದೀಗ ಕಟಾವು ಸಮಯವಾಗಿದ್ದು, ಕಟಾವು ಮಾಡಿದ ಬೆಳೆಯೂ ಕೈಗೆ ಸಿಗದಂತಾಗಿದ್ದು, ಬೆಳೆ ಬರುವ ಸಮಯದಲ್ಲಿ ಹಾಗೂ ಬೇಸಿಗೆ ವೇಳೆ ಕಾಡಂಚಿನ ಗ್ರಾಮಗಳಲ್ಲಿ ಅರಣ್ಯ ಇಲಾಖೆಯ ವತಿಯಿಂದ ರಾತ್ರಿ ಕಾವಲಿಗೆ ಕಾರ್ಮಿಕರನ್ನು ನಿಯೋಜಿಸಲಾಗುತ್ತದೆ. ಆದರೆ ಈ ಬಾರಿ ಕಾವಲುಗಾರರೇ ಕಾಣುತ್ತಿಲ್ಲ. ಅಧಿಕಾರಿಗಳು ಇನ್ನಾದರೂ ಕಾವಲುಗಾರರನ್ನು ನೇಮಿಸಿ ಆನೆ ಹೊರಬಾರದಂತೆ ಕಾವಲು ಕಾಯಬೇಕೆಂದು ರೈತರು ಆಗ್ರಹಿಸಿದ್ದಾರೆ.