Advertisement

Hunsur; ಗಾಂಜಾ ಸಾಗಾಟ: ಮಾಲು ಸಹಿತ ಆರೋಪಿ ಬಂಧನ

09:02 PM Jun 21, 2023 | Team Udayavani |

ಹುಣಸೂರು: ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಅರೋಪಿಯನ್ನು ನಗರ ಠಾಣೆ ಪೋಲಿಸರು ಮಾಲು ಸಮೇತ ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿರುವ ಘಟನೆ ನಡೆದಿದೆ.

Advertisement

ನಗರದ ವಿ.ಪಿ,ಬೋರೆ ನಿವಾಸಿ ಸೈಯದ್ ಕಲೀಂ ಬಂಧಿತ ಆರೋಪಿ. ನಗರ ಪೋಲಿಸ್ ಠಾಣೆ ಇನ್ಸ್ಪೆಕ್ಟರ್ ದರ್ಮೇಂದ್ರ ಹಾಗೂ ಸಿಬಂದಿಗಳು ರತ್ನಪುರಿ ರಸ್ತೆಯ ಸಲೀಂ ಪ್ಯಾಲೆಸ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಬಂದ ಖಚಿತ ಮಾಹಿತಿ ಮೇರೆಗೆ ರತ್ನಪುರಿ ಕಡೆಯಿಂದ ನಗರಕ್ಕೆ ಬರುತ್ತಿದ್ದ ಸುಜುಕಿ ಬೈಕ್‌ನ್ನು ನಿಲ್ಲಿಸಲು ಪೊಲೀಸರು ಸೂಚಿಸುತ್ತಿದ್ದಂತೆ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಬೆನ್ನಟ್ಟಿ ನಿಲ್ಲಿಸಿ ತಪಾಸಣೆ ನಡೆಸಿದ ವೇಳೆ ಬೈಕಿನಲ್ಲಿ ಸುಮಾರು 950 ಗ್ರಾಂ.ನಷ್ಟು ಮಾರಾಟ ಮಾಡಲು ಹದಮಾಡಿದ್ದ ಗಾಂಜಾ ಪುಡಿ ಪತ್ತೆಯಾಗಿದ್ದು, ಬೈಕ್ ಸಹಿತ ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಯಚರಣೆಯಲ್ಲಿ ಇನ್ಸ್ಪೆಕ್ಟರ್ ಧರ್ಮೆಂದ್ರ, ಪಿಎಸ್ ಐ ನಾಗಯ್ಯ, ಸಿಬಂದಿಗಳಾದ ಅನಿಲ್, ಮಂಜುನಾಥ್, ಚಾಲಕ ಅಲೀಂ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next