Advertisement
ನೇಗತ್ತೂರಿನ ಲಕ್ಷ್ಮಮ್ಮರಿಗೆ ಸೇರಿದ ಎರಡು ಹಸುಗಳನ್ನು ಕೊಂದ ಹುಲಿ ಪತ್ತೆಗಾಗಿ ಬುಧವಾರದಂದು ಅರಣ್ಯ ಸಿಬ್ಬಂದಿಗಳು ಕೂಂಬಿಂಗ್ ನಡೆಸಿದ್ದರಾದರೂ ಪತ್ತೆಯಾಗಿರಲಿಲ್ಲ. ಹೀಗಾಗಿ ಗುರುವಾರ ಎಸಿಎಫ್ ದಯಾನಂದ್ ಮಾರ್ಗದರ್ಶನದಲ್ಲಿ ಆರ್.ಎಫ್.ಒ . ಸುಬ್ರಹ್ಮಣ್ಯ ನೇತೃತ್ವದಲ್ಲಿ ಸಾಕಾನೆಗಳಾದ ಗಣೇಶ, ಶ್ರೀರಂಗ, ಡಿಆರ್‌ಎಫ್‌ಒಗಳಾದ ಸಿದ್ದರಾಜು, ವೀರಭದ್ರಯ್ಯ ಮತ್ತು ಸಿಬ್ಬಂದಿಗಳು ಹಾಗೂ ಆರ್.ಆರ್.ಟಿ. ಸಿಬ್ಬಂದಿ ಸಹಾಯದಿಂದ ಕೂಂಬಿಂಗ್ ನಡೆಸಿದರಾದರೂ ಹುಲಿರಾಯ ಪತ್ತೆಯಾಗಲಿಲ್ಲ.
ಇದೀಗ ಈ ಅರಣ್ಯ ಪ್ರದೇಶದಲ್ಲಿ ಹುಲಿ ಇರುವಿಕೆ ಸಿ.ಸಿ.ಕೆಮರಾದಲ್ಲಿ ಪತ್ತೆಯಾಗಿದ್ದು, ಈ ಭಾಗದ ಗ್ರಾಮಸ್ಥರು ಆತಂಕದಲ್ಲಿದ್ದೇವೆ. ಅನಾಹುತವಾಗುವ ಮುನ್ನವೇ ಈ ಹುಲಿಯನ್ನು ಸೆರೆ ಹಿಡಿಯಲೇಬೇಕು. ಇಲ್ಲದಿದ್ದಲ್ಲಿ ಅರಣ್ಯ ಇಲಾಖೆ ವಿರುದ್ದ ಹನಗೋಡು ಭಾಗದ ಗ್ರಾಮಸ್ಥರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.