Advertisement
ನಗರದ ಸ್ಟೋರ್ ಬೀದಿಯ ನಿವಾಸಿ, ಬಜಾರ್ ರಸ್ತೆಯ ವಿನಾಯಕ ಜ್ಯುವೆರ‍್ಸ್ ಮಾಲಿಕ, ರಾಜಸ್ತಾನದ ಮೂಲದ ಪ್ರೀತೇಶ್ ಅಲಿಯಾಸ್ ಪಿಂಟು ಪರಾರಿಯಾಗಿರುವಾತ. ನಗರದ ಬಜಾರ್ ರಸ್ತೆಯಲ್ಲಿ ಪ್ರಿತೇಶ್ ಕಳೆದ ಹತ್ತು ವರ್ಷಗಳಿಂದ ವಿನಾಯಕ ಜ್ಯುವೆಲರಿ ಅಂಗಡಿ ನಡೆಸುತ್ತಿದ್ದ ಈತ ಗ್ರಾಹಕರ ನಂಬಿಕೆಗೆ ಪಾತ್ರನಾಗಿದ್ದ, ಹೀಗಾಗಿ ಹಲವಾರು ಮಂದಿ ಗ್ರಾಹಕರು ಈತನ ಬಳಿ ಚಿನ್ನದ ಮಾಡಿಸಲು ಮುಂಗಡ ಹಣ ನೀಡಿದ್ದರು, ಅಲ್ಲದೆ ಒಡವೆ ಮಾರಾಟದ ಜೊತೆಗೆ ಪಾನ್ ಬ್ರೋಕರ್ ಲೈಸನ್ಸ್ ಪಡೆದು ಗಿರವಿ ವ್ಯವಹಾರ ನಡೆಸುತ್ತಿದ್ದ, ನೂರಾರು ಮಂದಿ ಒಡವೆಗಳನ್ನು ಗಿರವಿ ಇಟ್ಟಿದ್ದಾರೆ. ಕಳೆದ ಶುಕ್ರವಾರದಿಂದ ಅಂಗಡಿಗೆ ಬೀಗ ಜಡಿದು, ಸ್ಟೋರ್ ಬೀದಿಯಲ್ಲಿ ವಾಸವಿದ್ದ ಮನೆಯನ್ನು ಸಹ ಖಾಲಿ ಮಾಡಿಕೊಂಡು ಕುಟುಂಬ ಸಮೇತ ನಾಪತ್ತೆಯಾಗಿದ್ದಾನೆ.
ಈ ಸಂಬಂಧ ಕಟ್ಟೆಮಳಲವಾಡಿಯ ಮಜೀಜ್ ಅಹಮದ್, ನಗರದ ಮಂಜುನಾಥ ಬಡಾವಣೆಯ ದೀಪು, ಸರಸ್ವತಿಪುರಂ ಬಡಾವಣೆಯ ಅರ್ಜುನ್, ಸೀತಾ, ಲಕ್ಷಿö್ಮ, ಸಿದ್ದ, ಯಶೋಧರಪುರದ ಅತೀಬಾಬಾನು, ಮಜೀದ್ ಸೇರಿದಂತೆ ೫೦ಕ್ಕೂ ಹೆಚ್ಚು ಮಂದಿ ತಾವು ಗಿರವಿ ಇಟ್ಟಿರುವ ಒಡವೆಗಳನ್ನು ಬಿಡಿಸಲು ಹಣ ನೀಡಿದ್ದರೂ ವಾಪಸ್ ನೀಡದೆ ಪರಾರಿಯಾಗಿದ್ದಾನೆ, ಕೆಲವರು ಒಡವೆ ಮಾಡಿಸಲು ಮುಂಗಡ ಹಣನೀಡಿದ್ದೇವೇ ಎಂದೂ , ಹಲವರು ಒಡವೆ ಬಿಡಿಸಲು ಹಣ ನೀಡಿದ್ದೇವೆಂತಲೂ ಮತ್ತು ಕೆಲವರು ಹಣ ತಂದರೂ ಅಂಗಡಿಗೆ ಬೀಗ ಹಾಕಿಕೊಂಡು ನಾಪತ್ತೆಯಾಗಿದ್ದು, ಈ ಬಗ್ಗೆ ವಂಚಿಸಿರುವ ವಿನಾಯಕ ಜ್ಯುವೆಲರಿ ಮಾಲಿಕ ಆರೋಪಿ ಪ್ರೀತೇಶ್‌ನನ್ನ ಪತ್ತೆಮಾಡಿ ಒಡವೆ ಕೊಡಿಸುವಂತೆ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಪತ್ತೆಯಾಗಿರುವ ಪ್ರಿತೇಶ್‌ನ ಪತ್ತೆಗೆ ಕ್ರಮವಹಿಸಿದ್ದಾರೆ.