Advertisement

Hunsur ಬುಡಸಹಿತ ಉರುಳಿ ಬಿದ್ದ ತೆಂಗಿನ ಮರ; ಮನೆ ಛಾವಣಿಗೆ ಹಾನಿ,ಸ್ಕೂಟರ್‌ ಜಖಂ

09:48 PM Jul 21, 2024 | Team Udayavani |

ಹುಣಸೂರು: ಮನೆ ಬಳಿಯ ತೆಂಗಿನ ಮರ ಬುಡಸಹಿತ ಉರುಳಿಬಿದ್ದು ಛಾವಣಿಗೆ ಹಾನಿಯಾಗಿ, ಸ್ಕೂಟರ್‌ ಜಖಂಗೊಂಡಿರುವ ಘಟನೆ ತಾಲೂಕಿನ ಕಟ್ಟೆಮಳವಾಡಿಯಲ್ಲಿ ನಡೆದಿದೆ.

Advertisement

ಶನಿವಾರ ರಾತ್ರಿ ಕಟ್ಟೆಮಳವಾಡಿ ಗ್ರಾಮದ ನಂದಿ ಸರ್ಕಲ್‌ ಬಳಿಯ ಇನಾಯತ್‌ ಮನೆ ಮುಂದಿನ ಮಾವಿನ ಮರ ಹಾಗೂ ತೆಂಗಿನ ಮರ ಬಿರುಗಾಳಿಗೆ ಬುಡಸಹಿತ ಉರುಳಿ ಬಿದ್ದ ಪರಿಣಾಮ ಮನೆ ಛಾವಣಿಗೆ ಹಾನಿಯಾಗಿದೆ.

ಅಲ್ಲದೆ ಮನೆ ಪಕ್ಕದಲ್ಲಿ ನಿಲ್ಲಿಸಿದ್ದ ಸ್ಕೂಟರ್‌ ಸಂಪೂರ್ಣ ಜಖಂಗೊಂಡಿದೆ. ಮಕ್ಕಳು ಸೇರಿದಂತೆ ಎಲ್ಲರೂ ಮನೆಯೊಳಗಿದ್ದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next