ಹುಣಸೂರು: ಅಕ್ರಮವಾಗಿ ಒಂದೇ ಕಂಟೈನರ್‌ನಲ್ಲಿ 42 ಜಾನುವಾರುಗಳನ್ನು ಸಾಗಿಸುತ್ತಿದ್ದ ವಾಹನವನ್ನು ಬಿಳಿಕೆರೆ ಠಾಣಾ ಪೊಲೀಸರು ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಿದ ಘಟನೆ ಸೆ.24ರ ಮಂಗಳವಾರ ನಡೆದಿದೆ.
ಹುಣಸೂರು ತಾಲೂಕಿನ ರತ್ನಪುರಿ ಹಾಗೂ ಚಾಮರಾಜನಗರದ ಇಬ್ಬರನ್ನು ಬಂಧಿಸಿ, ವಾಹನ ವಶಕ್ಕೆ ಪಡೆಯಲಾಗಿದೆ.
ಹುಣಸೂರು ತಾಲೂಕಿನ ರತ್ನಪುರಿಯಿಂದ ಕೆ.ಆರ್.ನಗರ, ಗೊಮ್ಮಟಗಿರಿ ಮಾರ್ಗವಾಗಿ ಮೈಸೂರು ಕಡೆಗೆ ಕಂಟೈನರ್‌ನಲ್ಲಿ ಜಾನುವಾರುಗಳನ್ನು ಸಾಗಿಸುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಮಂಗಳವಾರ ಬೆಳಗ್ಗೆ ಬೆನ್ನಟ್ಟಿ ಮನುಗನಹಳ್ಳಿ ಬಳಿಯಲ್ಲಿ ವಾಹನವನ್ನು ಅಡ್ಡಗಟ್ಟಿ ತಡೆದು ಪರಿಶೀಲಿಸಿದಾಗ 42 ಜಾನುವಾರುಗಳು ಪತ್ತೆಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕರುಗಳನ್ನು ಸಾಗಿಸುತ್ತಿರುವುದು ಪತ್ತೆಯಾಗಿದೆ.
ಚಾಲಕ ಹಾಗೂ ಇನ್ನೊಬ್ಬ ಆರೋಪಿ ಸೇರಿ ಇಬ್ಬರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದ್ದು, ಜಾನುವಾರುಗಳನ್ನು ಬಂಧಮುಕ್ತಗೊಳಿಸಿ ಪಿಂಜಾರಾಪೋಲ್‌ಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.