Advertisement

Hunsur: ದಸರಾ ಮುನ್ನುಡಿ- ಗಣಪಯಣದ ಸ್ಥಳ ಪರಿಶೀಲಿಸಿದ ಡಿಸಿಎಫ್ ಪ್ರಭು

11:15 AM Aug 16, 2024 | Team Udayavani |

ಹುಣಸೂರು: ವಿಶ್ವವಿಖ್ಯಾತ ಮೈಸೂರು ದಸರಾದ ಮುನ್ನುಡಿಯಾದ ಗಜಪಯಣ ನಡೆಯಲಿರುವ ನಾಗರಹೊಳೆ ಉದ್ಯಾನದ ಹೆಬ್ಬಾಗಿಲು ವೀರನಹೊಸಹಳ್ಳಿಯಲ್ಲಿ  ಆ.21 ರ ಗಜಪಯಣದ ಕಾರ್ಯಕ್ರಮಕ್ಕಾಗಿ ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಭು ನೇತೃತ್ವದ ತಂಡ ವೀರನಹೊಸಹಳ್ಳಿಯಲ್ಲಿ ಸ್ಥಳ ಪರಿಶೀಲನೆ ನಡೆಸಿದರು.

Advertisement

ಎಂದಿನಂತೆ ಮುಖ್ಯದ್ವಾರದ ಬಳಿಯಿಂದ ಆರಂಭಗೊಳ್ಳುವ ಗಜಪಯಣದ ಸ್ಥಳ ಹಾಗೂ ಸಮಾರಂಭ ನಡೆಯುವ ಖಾಸಗಿ ಜಮೀನನ್ನು ಪರಿಶೀಲಿಸಿದ ಡಿಸಿಎಫ್‌, ಸ್ಥಳೀಯ ಅರಣ್ಯಾಧಿಕಾರಿಗಳಿಂದ ಮಾಹಿತಿ ಪಡೆದು ಅದೇ ಸ್ಥಳದಲ್ಲಿ ಪೆಂಡಾಲ್ ನಿರ್ಮಿಸುವುದು, ಮುಖ್ಯದ್ವಾರ ಹಾಗೂ ನಾಗರಹೊಳೆ ರಸ್ತೆಯ ಪ್ರಮುಖ ಸ್ಥಳಗಳಲ್ಲಿ ಸ್ವಾಗತ ಕಮಾನು ನಿರ್ಮಿಸಲು ಪರಿಶೀಲನೆ ನಡೆಸಿ, ಕಾರ್ಯಕ್ರಮಕ್ಕೆ ಚ್ಯುತಿ ಬರದಂತೆ ಅಚ್ಚುಕಟ್ಟಾದ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜರ್ಮನ್ ಟೆಂಟ್ ನಿರ್ಮಾಣ:

ಮಳೆ ಹಿನ್ನೆಲೆ ಸಮಾರಂಭ ನಡೆಯುವ ವೇದಿಕೆ ಹಾಗೂ ಸಾರ್ವಜನಿಕರು ಕುಳಿತುಕೊಳ್ಳುವ ಇಡೀ ಸಭಾಂಗಣಕ್ಕೆ ಜರ್ಮನ್ ಟೆಂಟ್ ನಿರ್ಮಿಸಲಾಗುವುದು. ಶುಕ್ರವಾರದಿಂದಲೇ ಸಿದ್ದತೆ ಕಾರ್ಯ ಕಾಮಗಾರಿ ಆರಂಭವಾಗಲಿದೆ. ಉಳಿದಂತೆ ರಾಜಮಹಾರಾಜರ ಕಾಲದಿಂದ ನಡೆದು ಬಂದಿರುವ ಪೂಜೆ ಮತ್ತಿತರ ಕಾರ್ಯಕ್ರಮಗಳು ಎಂದಿನಂತಿರಲಿವೆ ಎಂದು ಡಿಸಿಎಫ್ ಪ್ರಭು “ಉದಯವಾಣಿ”ಗೆ ಮಾಹಿತಿ ನೀಡಿದರು.

Advertisement

ಈ ವೇಳೆ ವೀರನ ಹೊಸಹಳ್ಳಿ ಆರ್.ಎಫ್.ಓ.ಅಭಿಷೇಕ್, ಮೈಸೂರು ವನ್ಯಜೀವಿ ವಿಭಾಗದ ಆರ್.ಎಫ್.ಓ.ಸಂತೋಷ್‌ಕುಮಾರ್, ಮೈಸೂರು ವೃತ್ತದ ಮುಖ್ಯ ಪಶುವೈದ್ಯಾಧಿಕಾರಿ ಡಾ.ಮುಜೀಬ್‌ರೆಹಮಾನ್ ಹಾಗೂ ಸಿಬ್ಬಂದಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next