Advertisement

ಹುಣಸೂರು ಎರಡು ಚೆಕ್‌ಪೋಸ್ಟ್ ಗಳಲ್ಲಿ 15.26 ಲಕ್ಷ ರೂ. ವಶ

12:24 PM Apr 02, 2023 | Team Udayavani |

ಹುಣಸೂರು:  ಹುಣಸೂರು ತಾಲೂಕಿನ ಎರಡು ಚೆಕ್‌ಪೋಸ್ಟ್ಗಳಲ್ಲಿ ಒಟ್ಟು 15.26 ಲಕ್ಷರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ರುಚಿ ಬಿಂದಾಲ್ ತಿಳಿಸಿದ್ದಾರೆ.

Advertisement

ಹುಣಸೂರು-ಮಡಿಕೇರಿ ಹೆದ್ದಾರಿಯ ಚಿಲ್ಕುಂದ ಚೆಕ್ ಪೋಸ್ಟ್ನಲ್ಲಿ ಮಾ.೩೧ರ ಮದ್ಯ ರಾತ್ರಿ ಕೇರಳ ಮೂಲದವರಿಂದ ೮.೯೧ಲಕ್ಷರೂ, ಏ.1 ರ ಮದ್ಯಾಹ್ನ ಇದೇ ಚೆಕ್‌ಪೋಸ್ಟ್ನಲ್ಲಿ ಮೈಸೂರಿನ ಬೋಗಾದಿ ರಸ್ತೆಯ ಕೃಷ್ಣ ಪೌಲ್ಟಿçಗೆ ಸೇರಿದ 5.68 ಲಕ್ಷರೂ ಹಾಗೂ ಮಾ.೩೦ರಂದು ಹುಣಸೂರು-ವಿರರಾಜಪೇಟೆ ರಸ್ತೆಯ ಮುತ್ತುರಾಯನಹೊಸಳ್ಳಿ ಚೆಕ್‌ಪೋಸ್ಟ್ನಲ್ಲಿ 67ಸಾವಿರ ರೂ ಸೇರಿದಂತೆ ಯಾವುದೇ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ  15.26 ಲಕ್ಷರೂ.ಗಳನ್ನು ತನಿಖಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆಂದು ತಿಳಿಸಿದರು.

ಈ ಸಂಬಂಧ ತನಿಖೆ ನಡೆಸುವಂತೆ ಚುನಾವಣಾ ಪರಿಶೀಲನಾ ಸಮಿತಿಗೆ ವಹಿಸಲಾಗಿದೆ

ಮಧ್ಯರಾತ್ರಿ ಭೇಟಿ ನೀಡಿದ ಎ.ಸಿ.;  ಚುನಾವಣಾಧಿಕಾರಿ ರುಚಿ ಬಿಂದಾಲ್‌ರವರು ಶುಕ್ರವಾರ ಮಧ್ಯರಾತ್ರಿ ಚಿಲ್ಕುಂದದ ಚೆಕ್ ಪೋಸ್ಟ್ ಗೆ ಅನಿರೀಕ್ಷಿತ ಭೇಟಿ ನೀಡಿ ತನಿಖಾಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯ ವೈಖರಿಯನ್ನು ಪರಿಶೀಲಿಸಿ, ನಿದ್ರೆ ಮಂಪರಿನಲ್ಲಿದ್ದ ಸಿಬ್ಬಂದಿಗಳಿಗೆ ಚುರುಕು ಮುಟ್ಟಿಸಿದರಲ್ಲದೆ, ಕೆಲ ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next