Advertisement
ಹಿಂದಿನ ಪೌರಾಯುಕ್ತ ಸುಜಯ್ ಕುಮಾರ್ ಅಧಿಕಾರಾವಧಿಯಲ್ಲಿ ಅಕ್ರಮ ಖಾತೆಗಳನ್ನು ಮಾಡಿದ್ದಾರೆ. ನಿಯಮ ಬಾಹಿರವಾಗಿ ಸರಕಾರಿ ಭೂಮಿಯನ್ನು ಖಾಸಗಿಯವರಿಗೆ ಖಾತೆ ಮಾಡಿಕೊಟ್ಟಿದ್ದಾರೆ. ನಮೂನೆ-3 ದಾಖಲಾತಿಗಳನ್ನು ಅಕ್ರಮವಾಗಿ ನೀಡಿ ಸರಕಾರಕ್ಕೆ ಲಕ್ಷಾಂತರ ರೂ. ಆರ್ಥಿಕ ನಷ್ಟ ಉಂಟು ಮಾಡಿದ್ದಾರೆಂಬ ದೂರಿನ ಹಿನ್ನೆಲೆಯಲ್ಲಿ ಸೋಮವಾರ ಸಂಜೆ 5 ಗಂಟೆ ವೇಳೆಯಲ್ಲಿ ಕಚೇರಿ ಕೆಲಸ ಮುಗಿಸಿ ಸಿಬ್ಬಂದಿಗಳು ಮನೆ ಕಡೆಗೆ ಹೊರಡಲು ಸಿದ್ದತೆ ನಡೆಸುತ್ತಿದ್ದ ವೇಳೆ ಉಪ ವಿಭಾಗಾಧಿಕಾರಿಯ ಸೂಚನೆಯಂತೆ ಗ್ರೇಡ್-2 ತಹಶೀಲ್ದಾರ್ ಯಧುಗಿರೀಶ್ ನೇತೃತ್ವದ ತಂಡ ರಾತ್ರಿವರೆಗೂ ಕಡತಗಳನ್ನು ಪರಿಶೀಲಿಸಿ ಕಂದಾಯಾಧಿಕಾರಿಗಳಿಂದ ಮಾಹಿತಿ ಪಡೆದು ವಶಪಡಿಸಿಕೊಂಡರು. ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
Advertisement
Hunsur: ಪೌರಾಯುಕ್ತ ಸುಜಯ್‌ಕುಮಾರ್ ಅವಧಿಯಲ್ಲಿ ಅಕ್ರಮಗಳ ದೂರು; ತನಿಖೆಗೆ ಆದೇಶ
12:34 PM Dec 05, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.