ಶಿಲ್ಲಾಂಗ್ : ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದ ಮೇಘಾಲಯದಲ್ಲಿ ಈ ಬಾರಿ ಅತಂತ್ರ ಸ್ಥಿತಿ ಏರ್ಪಟ್ಟಿದೆ.
ಏಕೈಕ ಬಹುದೊಡ್ಡ ಪಕ್ಷವಾಗಿ ಮೂಡಿಬಂದಿರುವ ಮೇಘಾಲಯ ದಲ್ಲಿ (59/59) ಈಗ ಪಕ್ಷ ಬಲಾಬಲ ಹೀಗಿದೆ : ಬಿಜೆಪಿ 2, ಕಾಂಗ್ರೆಸ್ 21, ಯುಡಿಪಿ 6, ಎನ್‌ಪಿಪಿ 19, ಇತರರು 11.
ಈ ಅತಂತ್ರ ಸ್ಥಿತಿಯಲ್ಲಿ ಏಕೈಕ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ಸರಕಾರ ರಚಿಸುವ ಹಕ್ಕನ್ನು ಪಯೋಗಿಸಲಿದೆ; ಆದರೆ ಇದೇ ವೇಳೆ ಬಿಜೆಪಿ ಕೂಡ ತನ್ನ ಮಿತ್ರ ಪಕ್ಷಗಳೊಂದಿಗೆ ಸೇರಿಕೊಂಡು ಸರಕಾರ ರಚಿಸುವ ಯತ್ನದಲ್ಲಿ ತೊಡಗಿಕೊಂಡಿದೆ.
ಹಾಗಾಗಿ ಮೇಘಾಲಯದಲ್ಲಿ ಬಿಜೆಪಿ, ಎನ್‌ಪಿಪಿ ಜತೆಗೂಡಿ ಸಮ್ಮಿಶ್ರ ಸರಕಾರ ನಡೆಸುವ ಸಾಧ್ಯತೆಗಳಿವೆ.
ಮೇಘಾಲಯ ಮುಖ್ಯಮಂತ್ರಿಯಾಗಿರುವ ಮುಕುಲ್ ಸಂಗ್ಮಾ ಅವರು ತಾನು ಸ್ಪರ್ಧಿಸಿದ ಅಂಪಾಟಿ ಮತ್ತು ಸಾಂಗ್‌ಸಾಕ್ ಎರಡೂ ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದಾರೆ. ಆದರೆ ಅವರಿಗೆ ಮತ್ತೆ ಮುಖ್ಯಮಂತ್ರಿಯಾಗುವ ಅದೃಷ್ಟ ಮಸುಕಾಗಿದೆ.