Advertisement

NEET ಪರೀಕ್ಷೆ ಮಿಸ್ ಮಾಡಿಕೊಳ್ಳಲಿದ್ದಾರೆ ಗಲ್ಫ್ ದೇಶಗಳಲ್ಲಿ ಸಿಲುಕಿರುವ ವಿದ್ಯಾರ್ಥಿಗಳು!

07:41 PM Aug 28, 2020 | Hari Prasad |

ಹೊಸದಿಲ್ಲಿ: ದೇಶದಲ್ಲಿ ಸದ್ಯಕ್ಕೆ NEET ಮತ್ತು JEE ಪರೀಕ್ಷೆಗಳ ಕುರಿತಾಗಿ ಭಾರೀ ಚರ್ಚೆ ನಡೆಯುತ್ತಿದೆ.

Advertisement

ಕೇಂದ್ರ ಸರಕಾರವು ಈ ಎರಡು ಪ್ರವೇಶ ಪರೀಕ್ಷೆಗಳನ್ನು ನಿಗದಿಯಂತೆ ಸೆಪ್ಟಂಬರ್ ತಿಂಗಳಿನಲ್ಲಿ ನಡೆಸಲು ನಿರ್ಧರಿಸಿದೆ ಹಾಗೂ ಇದಕ್ಕೆ ಬೇಕಾಗಿರುವ ಎಲ್ಲಾ ಸಿದ್ಧತೆಗಳನ್ನು ಪ್ರಾರಂಭಿಸಿದೆ.

ದೇಶಾದ್ಯಂತ NEET ಪರೀಕ್ಷೆಗಳು ಸೆಪ್ಟಂಬರ್ 13ರಂದು ನಡೆಯಲಿವೆ.

ಈ ನಡುವೆ ಕೋವಿಡ್ 19 ಸಂಬಂಧಿ ಲಾಕ್ ಡೌನ್ ಕಾರಣದಿಂದ ಗಲ್ಫ್ ದೇಶಗಳಲ್ಲೇ ಉಳಿದುಕೊಂಡಿರುವ ನೂರಾರು ವಿದ್ಯಾರ್ಥಿಗಳು ಈ ಬಾರಿಯ NEET ಪರೀಕ್ಷೆಗಳಿಗೆ ಹಾಜರಾಗಲು ಸಾಧ್ಯವಾಗದಿರುವ ಸಂಕಷ್ಟದ ಕುರಿತಾಗಿ ಆನ್ ಮನೋರಮಾ ವರದಿ ಮಾಡಿದೆ.

ಅದರಲ್ಲೂ ವಿದೇಶದಿಂದ ಭಾರತಕ್ಕೆ ಆಗಮಿಸುವವರಿಗೆ ಸಂಬಂಧಿಸಿದ ಕೋವಿಡ್ 19 ನಿಯಮಾವಳಿಗಳೇ ಈ ವಿದ್ಯಾರ್ಥಿಗಳಿಗೆ NEET ಪರೀಕ್ಷೆಗೆ ಹಾಜರಾಗಲು ಪ್ರಮುಖ ತೊಡಕಾಗಿ ಪರಿಣಮಿಸಿದೆ.

Advertisement

ಗಲ್ಫ್ ದೇಶಗಳಿಂದ ಭಾರತಕ್ಕೆ ಬರುವವರು ವಿಮಾನ ಪ್ರಯಾಣಕ್ಕೆ 96 ಗಂಟೆಗಳ ಮೊದಲು ಕೋವಿಡ್ 19 ತಪಾಸಣೆ ಮಾಡಿಸಿಕೊಂಡು ನೆಗೆಟಿವ್ ಪ್ರಮಾಣಪತ್ರವನ್ನು ಪಡೆದುಕೊಳ್ಳಬೇಕು. ಆದರೆ ಈ ಸೌಲಭ್ಯ ಗಲ್ಫ್ ದೇಶಗಳಲ್ಲಿ ಎಲ್ಲಾ ಕಡೆಗಳಲ್ಲಿ ಲಭ್ಯ ಇರುವುದಿಲ್ಲ.

ಈ ಪ್ರಮಾಣ ಪತ್ರವನ್ನು ಪಡೆದುಕೊಂಡು ಭಾರತಕ್ಕೆ ಆಗಮಿಸಿದ ಬಳಿವೂ ಅವರಿಗೆ ನೇರವಾಗಿ ಪರೀಕ್ಷಾ ಕೇಂದ್ರಗಳಿಗೆ ತೆರಳಲು ಸಾಧ್ಯವಿಲ್ಲ. ಯಾಕೆಂದರೆ ಹೀಗೆ ಬಂದವರು 14 ದಿನಗಳ ಕಾಲ ಹೋಂ ಕ್ವಾರೆಂಟೈನ್ ಗೆ ಒಳಗಾಗಬೇಕಾಗಿರುತ್ತದೆ.

ಮತ್ತು ಪರೀಕ್ಷೆ ಬರೆಯಲು ಗಲ್ಫ್ ದೇಶದಿಂದ ಇಲ್ಲಿಗೆ ಬಂದು ಮತ್ತೆ ಮರಳಿ ಅಲ್ಲಿಗೆ ತೆರಳುವುದು ಅವರಿಗೆ ಹಣಕಾಸಿನ ಹೊರೆಯೂ ಆಗಲಿದೆ.

ಗಲ್ಫ್ ದೇಶಗಳಲ್ಲಿರುವ ಸುಮಾರು 3000 ವಿದ್ಯಾರ್ಥಿಗಳು ಈಗಾಗಲೇ NEET ಪರೀಕ್ಷೆಗಳಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ ಕೇರಳದಲ್ಲಿ ಕ್ವಾರೆಂಟೈನ್ ಸೌಲಭ್ಯವಿರುವ ಕೆಲವು ವಿದ್ಯಾರ್ಥಿಗಳು ಮಾತ್ರವೇ ಇದೀಗ ಪರೀಕ್ಷೆಗೆ ಹಾಜರಾಗಲು ರಾಜ್ಯಕ್ಕೆ ಬಂದಿದ್ದಾರೆ.

ಗಲ್ಫ್ ದೇಶದಗಳಲ್ಲಿ ಇರುವ ಈ ವಿದ್ಯಾರ್ಥಿಗಳಿಗೆ ಉಂಟಾಗುವ ತೊಂದರೆಯನ್ನು ಹೋಗಲಾಡಿಸಲು ಗಲ್ಫ್ ನಲ್ಲಿ NEET ಪರೀಕ್ಷಾ ಕೇಂದ್ರಗಳನ್ನು ತೆರೆಯಬೇಕು ಎಂಬ ಆಗ್ರಹ ಈಗಾಗಲೇ ಕೇಳಿಬಂದಿದೆ. ಈ ವಿಚಾರವಾಗಿ ಕತಾರ್ KMCC ಈಗಾಗಲೇ ನ್ಯಾಯಾಲಯದ ಮೆಟ್ಟಿಲನ್ನೂ ಹತ್ತಿದೆ.

ಇದನ್ನು ಹೊರತಾಗಿಸಿದರೆ ಆನ್ ಲೈನ್ ಪರೀಕ್ಷೆಗಳನ್ನು ನಡೆಸುವುದೂ ಇದಕ್ಕೊಂದು ಪರಿಹಾರವಾಗಬಹುದು ಎಂದು ಹಲವು ಹೆತ್ತವರು ಅಭಿಪ್ರಾಯಪಡುತ್ತಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next